ಮತ್ತೊಂದು ಐಷಾರಾಮಿ ಮನೆಗೆ ಶಿಫ್ಟ್ ಆದ ಸೋನಮ್ ಕಪೂರ್

By
2 Min Read

ಬಾಲಿವುಡ್ ನಟಿ ಸೋನಮ್ ಕಪೂರ್ (Sonam Kapoor) ಸೇಬು ಖರೀದಿಸಿದಷ್ಟೇ ಹೊಸ ಮನೆಗಳನ್ನು ಕೊಳ್ಳುತ್ತಾರೆ. ಈಗಾಗಲೇ ಅವರ ಬಳಿ ಐದು ಐಷಾರಾಮಿ ಮನೆಗಳು ಇವೆ ಎಂದು ಹೇಳಲಾಗುತ್ತಿದೆ. ಒಂದೂವರೆ ವರ್ಷದ ಹಿಂದೆಯಷ್ಟೇ ಹೊಸ ಮನೆಯೊಂದನ್ನು (New House) ಖರೀದಿಸಿರುವುದಾಗಿ ಹೇಳಿದ್ದರು. ಈಗ ಮತ್ತೊಂದು ಐಷಾರಾಮಿ ಅಪಾರ್ಟ್ ಮೆಂಟ್ ಗೆ ಅವರು ಶಿಫ್ಟ್ ಆಗಿದ್ದಾರೆ.

ನವರಾತ್ರಿಯ ಸಂದರ್ಭದಲ್ಲಿ ಸೋನಮ್, ಪುತ್ರ ವಾಯು ಕಪೂರ್ ಮತ್ತು ಪತಿ ಆನಂದ್ ಅಹುಜಾ (Anand Ahuja) ಮುಂಬೈನಲ್ಲಿ (Mumbai) ಖರೀದಿಸಿದ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಆ ಮನೆಯ ಫೋಟೋಗಳನ್ನು ಸೋನಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ಕುಳಿತುಕೊಂಡು ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.

ಈ ಹಿಂದೆ ಲಂಡನ್ ಮನೆ ಪರಿಚಯಿಸಿದ್ದರು

ಸೆಲೆಬ್ರಿಟಿಗಳು ತಮ್ಮ ಮನೆ ಡಿಸೈನ್‍ಗೆ ಹೆಚ್ಚು ಒತ್ತು ನೀಡುತ್ತಾರೆ. ದೊಡ್ಡ ಮನೆ ಖರೀದಿಸಿ ಅದಕ್ಕೆ ಐಷಾರಾಮಿ ಲುಕ್ ನೀಡುತ್ತಾರೆ. ಆದರೆ ಅಭಿಮಾನಿಗಳಿಗೆ ಮನೆ ತೋರಿಸೋಕೆ ಯಾರೂ ಅಷ್ಟಾಗಿ ಇಷ್ಟಪಡುವುದಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಮನೆಯ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದು ಇದೆ. ಅದನ್ನು ಹೊರತುಪಡಿಸಿ ಮತ್ಯಾರೂ ಈ ರೀತಿ ಮನೆಯ ಪರಿಚಯ ಮಾಡಿಲ್ಲ. ಆದರೆ ಸೋನಮ್ ಕಪೂರ್ ಅಭಿಮಾನಿಗಳಿಗೆ ತಮ್ಮ ಮನೆ ತೋರಿಸಿದ್ದರು.

ಸೋನಮ್ ಹಾಗೂ ಅವರ ಪತಿ ಆನಂದ್ ಲಂಡನ್‍ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಯನ್ನು ಅಭಿಮಾನಿಗಳಿಗೆ ಅವರು ಪರಿಚಯಿಸಿದ್ದರು. ಈ ಮನೆ ತುಂಬಾನೇ ಐಷಾರಾಮಿ ಆಗಿದೆ. ಲಿವಿಂಗ್ ಏರಿಯಾ, ಕಿಚನ್, ಪೌಡರ್ ರೂಮ್, ವಾಶ್‍ರೂಮ್ ಎಲ್ಲವನ್ನೂ ಸೋನಮ್ ವೀಡಿಯೋದಲ್ಲಿ ತೋರಿಸಿದ್ದರು. ಇದರ ಜತೆಗೆ ಅವರು ಹೈಲೈಟ್ ಆಗಿದ್ದು ಟಾಯ್ಲೆಟ್ ವಿಚಾರದಲ್ಲಿ ಆಗಿತ್ತು.

 

ನನ್ನ ಬಾತ್‍ರೂಮ್‍ನಲ್ಲಿ ಸ್ಪೆಷಲ್ ಏನು ಗೊತ್ತಾ? ಈ ಟಾಯ್ಲೆಟ್ ಮೇಲೆ ನನಗೆ ಗೀಳು ಹತ್ತಿದೆ ಎಂದು ವೀಡಿಯೋದಲ್ಲಿ ಹೇಳಿದ್ದರು. ಇದನ್ನು ನೋಡಿದ ಅನೇಕರು ಸೋನಮ್ ಅವರನ್ನು ಟೀಕೆ ಮಾಡಿದ್ದರು. ಟಾಯ್ಲೆಟ್‍ನಲ್ಲಿ ಗೀಳು ಹತ್ತುವ ವಿಚಾರ ಏನಿದೆ ಎಂದು ಪ್ರಶ್ನೆ ಮಾಡಿದ್ದರು. ಇನ್ನೂ ಕೆಲವರು ಅವರ ಸಂಪೂರ್ಣ ಮನೆಯನ್ನು ಇಷ್ಟಪಟ್ಟಿದ್ದರು. ಮನೆಯಲ್ಲಿ ಕೆಲಸ ಮಾಡೋಕೂ ಜಾಗವಿದೆ. ಸೋನಮ್ ಹಾಗೂ ಆನಂದ್ ಒಂದೇ ಕಡೆ ಕೂತು ಕೆಲಸ ಮಾಡುತ್ತಾರೆ. ಈ ಬಗ್ಗೆಯೂ ಸೋನಮ್ ಹೇಳಿಕೊಂಡಿದ್ದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್