2ನೇ ಬಾರಿ ತಾಯಿಯಾಗ್ತಿರೋ ಸೋನಂ ಕಪೂರ್‌; ಲೇಡಿಬಾಸ್ ಲುಕ್​​ನಲ್ಲಿ ಪ್ರೆಗ್ನೆನ್ಸಿ ಅನೌನ್ಸ್!

1 Min Read
2ನೇ ಬಾರಿ ತಾಯಿಯಾಗ್ತಿರೋ ಸೋನಂ ಕಪೂರ್‌; ಲೇಡಿಬಾಸ್ ಲುಕ್​​ನಲ್ಲಿ ಪ್ರೆಗ್ನೆನ್ಸಿ ಅನೌನ್ಸ್!

ಬಾಲಿವುಡ್​ನ ಖ್ಯಾತ ನಟಿ ಸೋನಂ ಕಪೂರ್ (Sonam Kapoor) 2ನೇ ಬಾರಿ ಅಮ್ಮನಾಗಲಿದ್ದಾರೆ. ಪಿಂಕ್ ಡ್ರೆಸ್ ಧರಿಸಿ ನಟಿ ಲೇಡಿ ಬಾಸ್‌ ಲುಕ್‌ನಲ್ಲಿ 2ನೇ ಬಾರಿ ತಾಯ್ತನ ಆಗುತ್ತಿರುವ ಸುದ್ದಿಯನ್ನ ಹಂಚಿಕೊಂಡಿದ್ದಾರೆ.

ಹೌದು. ಬಾಲಿವುಡ್ ನಟಿ (Bollywood Actress) ಸೋನಂ ಕಪೂರ್ 2ನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ಚರ್ಚೆಯಾಗಿತ್ತು. ಸೋನಂ ವರ್ತನೆಯೂ ಅವರು ಗರ್ಭಿಣಿ ಅನ್ನೋದನ್ನ ತೋರಿಸುತ್ತಿತ್ತು. ಆದರೂ ಸೋಶಿಯಲ್ ಮೀಡಿಯಾದಲ್ಲಿ (Social Media) ಭಾರೀ ಆಕ್ಟೀವ್ ಇರುವ ಸೋನಂ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ಬಹಿರಂಗಪಡಿಸಿರಲಿಲ್ಲ. ಇದೀಗ ಹೊಸ ಫೋಟೋ ಶೂಟ್‌ನಲ್ಲಿ ಬೇಬಿಬಂಪ್ (Baby Bump) ಪ್ರದರ್ಶಿಸಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

`ಮದರ್’ ಎಂದಷ್ಟೇ ಹೇಳಿಕೊಂಡಿದ್ದಾರೆ. ಆದರೆ ಸೋನಂ ಪೋಸ್ಟ್ ಮಾಡಿರುವ ಫೋಟೋಗಳೇ ಮಾತನಾಡುತ್ತಿದೆ. ಮತ್ತೆ ಅಮ್ಮನಾಗ್ತಿರುವ ಸೋನಂಗೆ ಕಾಮೆಂಟ್ ಮೂಲಕ ಅನೇಕರು ಶುಭ ಹಾರೈಸಿದ್ದಾರೆ.

ಆನಂದ್ ಅಹುಜಾರನ್ನ ಸೋನಂ 2018ರಲ್ಲಿ ಮದುವೆಯಾಗಿದ್ದರು. ಈಗಾಗ್ಲೇ ದಂಪತಿಗೆ `ವಾಯು’ ಹೆಸರಿನ ಓರ್ವ ಗಂಡು ಮಗು ಇದೆ. ತಮ್ಮ 40ನೇ ವಯಸ್ಸಿನಲ್ಲಿ ಸೋನಂ ಕಪೂರ್ 2ನೇ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಇನ್‌ಸ್ಟಾದಲ್ಲಿ ಬೇಬಿ ಬಂಪ್ ಫೋಟೋಗಳನ್ನ ಹಂಚಿಕೊಂಡಿರುವ ಸೋನಂ ಕಡು ಗುಲಾಬಿ ಬಣ್ಣದ ಸೂಟ್ ಧರಿಸಿ ಮಿಂಚಿದ್ದಾರೆ. ಸಖತ್ತಾಗಿ ಪೋಸ್ ಕೊಟ್ಟಿದ್ದಾರೆ ಅನಿಲ್ ಕಪೂರ್ ಪುತ್ರಿ.

Share This Article