ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಸೋನಮ್ ಕಪೂರ್ ಬೇಬಿ ಬಂಪ್

Public TV
1 Min Read

ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ ಈಗ ತುಂಬು ಗರ್ಭಿಣಿಯಾಗಿದ್ದು, ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರತಿದಿನ ಒಂದಲ್ಲ ಒಂದು ನೆಪದಲ್ಲಿ ತಮ್ಮ ಬೇಬಿ ಬಂಪ್ ತೋರಿಸುವುದರ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ತನ್ನ ಸಹೋದರಿ ರಿಯಾ ಕಪೂರ್‌ನೊಂದಿಗೆ ಲಂಡನ್‌ನಲ್ಲಿದ್ದು, ಅಲ್ಲಿನ ಫೋಟೋವೊಂದು ರಿಯಾ ಶೇರ್ ಮಾಡಿದ್ದಾರೆ. ಇದರಲ್ಲಿನ ಸೋನಮ್ ನೀಡಿರುವ ಪೋಸ್ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಲಂಡನ್‌ನ ರೆಸ್ಟೋರೆಂಟ್‌ನ ಹೊರಗೆ ತೆಗೆದ ಈ ಫೋಟೋದಲ್ಲಿ ಸೋನಮ್ ಬೇಬಿ ಬಂಪ್ ಅನ್ನು ತೋರಿಸುತ್ತಿರುವ ರೀತಿಯನ್ನು ಜನರು ಇಷ್ಟಪಡುತ್ತಿಲ್ಲ. ಸೋನಂ ಕಪೂರ್ ಅವರ ಸಹೋದರಿ ರಿಯಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಸೋನಂ ಮತ್ತು ತನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಸೋನಮ್ ಯಾಕೆ ಯಾವಗಲೂ ಬೇಬಿ ಬಂಪ್ ತೋರಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಇದರಲ್ಲಿ ಸೋನಮ್ ಬ್ರಾಲೆಟ್ ಮತ್ತು ಕೋಟ್‌ನೊಂದಿಗೆ ಮ್ಯಾಚಿಂಗ್ ಕಲರ್ ಪ್ಯಾಂಟ್ ಧರಿಸಿದ್ದಾರೆ. ಕಣ್ಣುಗಳಿಗೆ ಕಪ್ಪು ಕನ್ನಡಕವನ್ನು ಧರಿಸಿ ನಾಲಿಗೆಯನ್ನು ಹೊರತೆಗೆದು ವಿಚಿತ್ರ ಪೋಸ್ ನೀಡಿದ್ದಾರೆ. ಅವರ ಭಾರವಾದ ಬೇಬಿ ಬಂಪ್ ನೋಡುಗರ ಗಮನವನ್ನು ಸೆಳೆಯುತ್ತಿದೆ. ಇದನ್ನೂ ಓದಿ:ರಣ್‌ಬೀರ್ ಕಪೂರ್ ಒಬ್ಬರೇ ನನ್ನನ್ನು ಹಾಗೆ ಕರೆಯುತ್ತಾರೆ ಎಂದ ರಶ್ಮಿಕಾ

 

View this post on Instagram

 

A post shared by Rhea Kapoor (@rheakapoor)

ಫೋಟೋದ ಬಗ್ಗೆ ಪ್ರತಿಕ್ರಿಯಿಸಿದ ನೆಟ್ಟಿಗರು `ಏನು ಅವಮಾನ’ ಎಂದು ಬರೆದಿದ್ದಾರೆ. ಇನ್ನು ಕೆಲವರು ಅವರು ಯಾವಾಗಲೂ ಬೇಬಿ ಬಂಪ್ ಏಕೆ ತೋರಿಸುತ್ತಾಳೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅವರಿಗೆ ಗಂಡು ಮಗುನಾ ಅಥವಾ ಹೆಣ್ಣು ಮಗುನಾ ಅಂತಾ ನೆಟ್ಟಿಗನೊಬ್ಬ ಪ್ರಶ್ನಿಸಿದ್ದಾರೆ. ಒಟ್ನಲ್ಲಿ ಸೋನಮ್ ಏನೇ ಮಾಡಿದ್ದರು ಇದೀಗ ಟ್ರೋಲಿಗರ ಕಣ್ಣಿಗೆ ಗುರಿಯಾಗುತ್ತಿದೆ. ಕೆಲ ನಟಿಯರು ತಮ್ಮ ಬೇಬಿ ಬಂಪ್ ತೋರಿಸೋದನ್ನ ಇಷ್ಟಪಡಲ್ಲ ಆದರೆ ಸೋನಮ್ ತಮ್ಮ ಜೀವನದ ತಾಯ್ತನದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *