ಬಳೆ ಶಾಸ್ತ್ರ ಮಾಡಿಕೊಂಡ ಸೋನಲ್ ಮೊಂಥೆರೋ

Public TV
1 Min Read

ತ್ತೀಚೆಗಷ್ಟೇ ಮದುವೆಯಾದ ನವವಧು ಸೋನಲ್ (Sonal Monterio) ಈಗ ಇನ್ಸ್ಟಾಗ್ರಾಂ ನಯಾ ಫೋಟೋದೊಂದಿಗೆ ಕಾಣಿಸ್ಕೊಂಡಿದ್ದಾರೆ. ಹಸಿರು ಸೀರೆಯುಟ್ಟು ಕೈತುಂಬಾ ಹಸಿರು ಬಳೆ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದು ಬಳೆಶಾಸ್ತ್ರದ ಫೋಟೋಗಳಾಗಿದ್ದು ಕೈಗೆ ಬಳೆ ತೊಡಿಸಿಕೊಳ್ಳವ ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಧ್ರುವ ಸರ್ಜಾ ಪುತ್ರ

ಈ ಫೋಟೋ ನೋಡಿದರೆ ಮದುವೆ ನಡೆದು ತಿಂಗಳೇ ಉರುಳಿದೆ, ಮತ್ಯಾಕೆ ಸೋನಲ್ ಬಳೆ ಶಾಸ್ತ್ರ ಮಾಡಿಕೊಳ್ಳುತ್ತಿದ್ದಾರೆ ಎಂದು ಆಶ್ಚರ್ಯವಾಗೋದೇನು ನಿಜ. ಆದರೆ ಇದು ಹಳೆಯ ಫೋಟೋಗಳಾಗಿದ್ದು ಈಗ ಒಂದೊಂದಾಗೇ ನೆನಪು ತೋಡಿಕೊಳ್ಳುತ್ತಿದ್ದಾರೆ. ನಟಿ ಸೋನಲ್ ಮೊಂಥೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಳೆದ ಆಗಸ್ಟ್ ತಿಂಗಳಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಆ ವೇಳೆ ಮದುವೆ ಹೆಣ್ಣಿಗೆ ನಡೆದ ಬಳೆ ತೊಡಿಸುವ ಸಂಪ್ರದಾಯದ ಮುದ್ದಾದ ಫೋಟೋಗಳನ್ನ ಈಗ ಸೋನಲ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸೋನಲ್ ಮತ್ತು ತರುಣ್ (Tharun Sudhir) ಮದುವೆ ಸಮಾರಂಭ ಸಂಪ್ರದಾಯಗಳು ಆಗಸ್ಟ್‌ನಲ್ಲಿ ಭರ್ತಿ ಒಂದು ವಾರ ನಡೆದಿತ್ತು. ಬೆಂಗಳೂರಿನ ಹೊರವಲಯದ ಛತ್ರದಲ್ಲಿ ಅದ್ದೂರಿಯಾಗಿ ಮದುವೆಯಾದ್ದರು ಸೋನಲ್ ಮತ್ತು ತರುಣ್. ಬಳಿಕ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಚರ್ಚ್‌ನಲ್ಲಿ ಮದುವೆಯಾಗಿದ್ದರು. ಅಲ್ಲಿ ಆರತಕ್ಷತೆಯನ್ನೂ ಏರ್ಪಡಿಸಿದ್ದರು. ಇದೀಗ ಮದುವೆಯ ಸಂಭ್ರಮಗಳ ಒಂದೊಂದೇ ನೆನಪುಗಳನ್ನ ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ ಸೋನಲ್. ಕೆಲವೇ ದಿನದ ಹಿಂದೆ ಮೆಹಂದಿ ಕಾರ್ಯಕ್ರಮದ ಫೋಟೋ ಪೋಸ್ಟ್ ಮಾಡಿದ್ದ ಸೋನಲ್ ಈಗ ಬಳೆ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ.

Share This Article