ಮಾಲ್ಡೀವ್ಸ್‌ನಲ್ಲಿ ತರುಣ್ ದಂಪತಿ- ಹನಿಮೂನ್‌ನಲ್ಲಿ ಜಾಲಿ ಮೂಡ್‌ಗೆ ಜಾರಿದ ಜೋಡಿ

Public TV
1 Min Read

‘ಕಾಟೇರ’ ಡೈರೆಕ್ಟರ್ ತರುಣ್ ಸುಧೀರ್ (TharunSudhir) ಮತ್ತು ಸೋನಲ್ (Sonal) ದಂಪತಿ ಮಾಲ್ಡೀವ್ಸ್‌ಗೆ (Maldives) ಹಾರಿದ್ದಾರೆ. ಹನಿಮೂನ್‌ನಲ್ಲಿ ಜಾಲಿ ಮೂಡ್‌ನಲ್ಲಿರುವ ಈ ಜೋಡಿ ಇದೀಗ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಕೊನೆಯಲ್ಲಿ ಕೆಟ್ಟದ್ದು ಅಳಿದು ಹೋಗುತ್ತದೆ, ಒಳ್ಳೆತನಕ್ಕೆ ಜಯವಾಗುತ್ತದೆ: ವಿಜಯಲಕ್ಷ್ಮಿ

ತರುಣ್ ಮತ್ತು ಸೋನಲ್ ಜೋಡಿ ಬಿಳಿ ಬಣ್ಣದ ಉಡುಗೆ ಧರಿಸಿ ವಿವಿಧ ಭಂಗಿಯಲ್ಲಿ ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ. ನವಜೋಡಿಯ ಕ್ಯೂಟ್ ಪೋಸ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಇನ್ನೂ ಅ.9ರಂದು ತರುಣ್ ಹುಟ್ಟುಹಬ್ಬದ ನಿಮಿತ್ತ ನವಜೋಡಿ ಮಾಲ್ಡೀವ್‌ಗೆ ತೆರಳಿದ್ದರು. ಅಲ್ಲೇ ಪತಿಯ ಹುಟ್ಟುಹಬ್ಬವನ್ನು ನಟಿ ಆಚರಿಸಿದ್ದಾರೆ. ತರುಣ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ, ಜಗತ್ತಿನ ಅತೀ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವ ಗಂಡನಿಗೆ ಹುಟ್ಟುಹಬ್ಬದ ಶುಭಾಶಯಗಳು. ನನ್ನನ್ನು ಪ್ರತಿದಿನ ಪ್ರೇರೆಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು. ಐ ಲವ್ ಯೂ ಎಂದು ಸೋನಲ್ ಅವರು ಪತಿಗೆ ಪ್ರೀತಿಯಿಂದ ವಿಶ್ ಮಾಡಿದ್ದರು.

ಸದ್ಯ ತರುಣ್ ದಂಪತಿ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ಈ ಜೋಡಿ ಭೇಟಿ ನೀಡುತ್ತಿದ್ದಾರೆ. ಅಂದಹಾಗೆ, ಆಗಸ್ಟ್ 11ರಂದು ತರುಣ್ ಮತ್ತು ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Share This Article