ಝಹೀರ್ ಜೊತೆಗಿನ ಮದುವೆ ನಂತರ ಮನೆ ಮಾರಾಟಕ್ಕಿಟ್ಟ ಸೋನಾಕ್ಷಿ ಸಿನ್ಹಾ

By
1 Min Read

ಬಾಲಿವುಡ್‌ ನಟ ಝಹೀರ್ ಇಕ್ಬಾಲ್ (Zaheer Iqbal) ಜೊತೆಗಿನ ಮದುವೆ ಬಳಿಕ ನಟಿ ಸೋನಾಕ್ಷಿ ಸಿನ್ಹಾ (Sonakshi Sinha)  ಮನೆ ಮಾರಾಟಕ್ಕೆ ಮುಂದಾಗಿದ್ದಾರೆ. ಮದುವೆಯಾದ ಎರಡೇ ತಿಂಗಳಿಗೆ ನಟಿ ಈ ನಿರ್ಧಾರ ಕೈಗೊಂಡಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ಹಿಂದಿ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ: ರಿಷಬ್ ಶೆಟ್ಟಿ

ಜೂನ್ 23ರಂದು ಝಹೀರ್ ಜೊತೆ ಸೋನಾಕ್ಷಿ ಮದುವೆಯಾದ ಬಳಿಕ ಮುಂಬೈನ ಬಾಂದ್ರಾದಲ್ಲಿ ಲಕ್ಷುರಿ ಮನೆಯೊಂದನ್ನು ಖರೀದಿಸಿದ್ದರು. ಇಷ್ಟಪಟ್ಟು ಖರೀದಿಸಿದ ಮನೆಯನ್ನೇ ನಟಿ ಸೇಲ್ ಮಾಡಲು ನಿರ್ಧರಿಸಿರೋದಕ್ಕೆ ನೆಟ್ಟಿಗರು ಶಾಕ್‌ ಆಗಿದ್ದಾರೆ. ಮನೆಯಲ್ಲಿ ಏನಾದ್ರೂ ಸಮಸ್ಯೆ ಇದ್ಯಾ ಅದಕ್ಕೆ ಇಂತಹ ನಿರ್ಧಾರ ಕೈಗೊಂಡ್ರಾ ಎಂಬ ಅನುಮಾನ ಅನೇಕರಲ್ಲಿ ಮೂಡಿದೆ.

ಮುಂಬೈನ ಬಾಂದ್ರಾದ ನಟಿಯ ಮನೆ ಸಮುದ್ರ ಕಡೆಗೆ ಮುಖ ಮಾಡಿರುವ ಈ ಫ್ಲಾಟ್ ತುಂಬ ವಿಶಾಲವಾಗಿದೆ. 4200 ಚದರ ಅಡಿ ವಿಸ್ತೀರ್ಣದ ಈ ಮನೆಯಲ್ಲಿ ವಿಶಾಲವಾದ 2 ಬೆಡ್ ರೂಮ್ ಇದೆ. ಅಸಲಿಗೆ, ಇದು 4 ಬೆಡ್ ರೂಮ್‌ನಷ್ಟು ವಿಶಾಲವಾದ ಜಾಗ. ಆದರೆ ಆ ಜಾಗದಲ್ಲಿ 2 ಬೆಡ್ ರೂಮ್ ಇದ್ದು, ಜಿಮ್, ಪ್ರೈವೇಟ್ ಲಿಫ್ಟ್ ಮುಂತಾದ ಸೌಕರ್ಯಗಳು ಇವೆ ಎಂದು ರಿಯಲ್ ಎಸ್ಟೇಟ್ ಕಂಪನಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಶೇರ್ ಮಾಡಿದೆ. ಆದರೆ ಎಲ್ಲೂ ಸೋನಾಕ್ಷಿ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ.

ಆದರೆ ಸ್ವತಃ ಸೋನಾಕ್ಷಿ ಈ ವಿಡಿಯೋವನ್ನು ಲೈಕ್ ಮಾಡಿರೋದು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ, ಈ ಮನೆಯ ಬೆಲೆ ಬರೋಬ್ಬರಿ 25 ಕೋಟಿ ರೂ. ಮೌಲ್ಯಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಮುಂಚೆ 11 ಕೋಟಿ ರೂಪಾಯಿಗೆ ನಟಿ ಖರೀದಿಸಿದ್ದರು. ಇದೀಗ 2 ತಿಂಗಳ ಬಳಿಕ ಮುಂಬೈ ನಗರದಲ್ಲಿ ದುಬಾರಿ ಮೊತ್ತಕ್ಕೆ ಆಸ್ತಿ ಮಾರಾಟಕ್ಕೆ ಮುಂದಾಗಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇನ್ನೂ ನಟಿಯ ಕುರಿತು ಈ ಸುದ್ದಿ ನಿಜಾನಾ? ಎಂದು ಕಾದುನೋಡಬೇಕಿದೆ.

Share This Article