ತಂದೆಯನ್ನ ಕೊಂದು 15 ದಿನಗಳ ಬಳಿಕ ಪೊಲೀಸರಿಗೆ ಶರಣಾದ ಪಾಪಿ ಮಗ

By
1 Min Read

ರಾಯಚೂರು: ಹೆತ್ತ ತಂದೆಯನ್ನ (Father) ಕೊಂದು 15 ದಿನಗಳ ಬಳಿಕ ಆರೋಪಿ ಮಗ (Son) ಪೊಲೀಸರಿಗೆ (Police) ಶರಣಾಗಿರುವ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ.

ರಾಯಚೂರು ತಾಲೂಕಿನ ವಡ್ಲೂರು ಗ್ರಾಮದ ಈರಣ್ಣ ಪೊಲೀಸರಿಗೆ ಶರಣಾಗಿರುವ ಕೊಲೆ ಆರೋಪಿ. 70 ವರ್ಷದ ಶಿವನಪ್ಪ ಮಗನಿಂದ ಹತನಾಗಿರುವ ನತದೃಷ್ಟ ತಂದೆ. ಭಾರತ್ ಮಾಲಾ ಹೈವೇ ಭೂ ಸ್ವಾಧೀನ ಪರಿಹಾರದ ಹಣದ ವಿಚಾರ ಹಾಗೂ ಮದ್ಯಪಾನ ಮಾಡಿ ತಾಯಿ ಜೊತೆ ಜಗಳವಾಡುತ್ತಾನೆ ಎಂದು ಆರೋಪಿ ತಂದೆಯ ಜೊತೆ ಜಗಳ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿ ತಾಯಿಯ ಎದುರಲ್ಲೇ ತಂದೆಯನ್ನು ಕೊಲೆ ಮಾಡಿ ಮಣ್ಣಿನಲ್ಲಿ ಹೂತಿಟ್ಟಿದ್ದಾನೆ. ಇದನ್ನೂ ಓದಿ: ಕಿರಿಯ ಮಗನ ಮದುವೆಗೆ ಅಡ್ಡಿಯಾಗುತ್ತೆ ಎಂದು ಮಾನಸಿಕ ಅಸ್ವಸ್ಥ ಮಗನನ್ನೇ ಕೊಂದ ತಂದೆ

ತಂದೆಯ ಶವವನ್ನು ತಾನೇ ಹೂತಿಟ್ಟು ತಂದೆ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಬಳಿಕ ಗ್ರಾಮಸ್ಥರು ಹಾಗೂ ಸಂಬಂಧಿಕರು ಅನುಮಾನಗೊಂಡು ಮಗನ ವಿಚಾರಣೆ ಮಾಡಿದ್ದಾರೆ. ಘಟನೆ ಹಿನ್ನೆಲೆ ಅನುಮಾನದ ಮೇಲೆ ದೂರು ಕೊಡುವುದಾಗಿ ಹೇಳಿದ್ದಾರೆ. ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಹೆದರಿದ ಆರೋಪಿ ಈರಣ್ಣ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಇದನ್ನೂ ಓದಿ: INDIA ಒಕ್ಕೂಟದ ಸಭೆಯೇ ಉಗ್ರರ ಟಾರ್ಗೆಟ್

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್