ಮದುವೆ ಮಾಡಿಸಿಲ್ಲವೆಂದು ತಂದೆಯನ್ನೇ ಕೊಂದ ಪಾಪಿ ಮಗ

Public TV
1 Min Read

ರಾಯಚೂರು: ಮದುವೆ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ. ಈ ಘಟನೆ ನಗರದ ಗೋಶಾಲಾ ರಸ್ತೆ ಬಳಿ ನಡೆದಿದೆ.

ಬಸವರಾಜಪ್ಪ (75) ಮೃತನಾಗಿದ್ದಾನೆ. ಜಗದೀಶ್ ತಂದೆಯನ್ನು ಕೊಂದ ಆರೋಪಿಯಾಗಿದ್ದಾನೆ. ಇವರ ನಿವೃತ್ತ ಎಎಸ್‍ಐ ಆಗಿದ್ದಾರೆ. ತನ್ನ ಮದುವೆ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ.

ಹಣಕಾಸು ಹಾಗೂ ಆಸ್ತಿ ವಿಚಾರಕ್ಕೆ ಆಗಾಗ ತಂದೆಯೊಂದಿಗೆ ಜಗಳವಾಡುತ್ತಿದ್ದ. ಹಣಕ್ಕಾಗಿ ಕಿರಿಕಿರಿ ಮಾಡುತ್ತಿದ್ದರಿಂದ ಮಗನಿಂದ ತಂದೆ, ತಾಯಿ ದೂರವಿದ್ದರು. ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ದೊಡ್ಡಮಗನ ಜೊತೆ ವಾಸವಾಗಿದ್ದರು. ಕಳೆದ ಕೆಲದಿನಗಳಿಂದ ರಾಯಚೂರು ನಗರದಲ್ಲಿರುವ ಮಗಳ ಮನೆಗೆ ಬಂದಿದ್ದ ಬಸವರಾಜಪ್ಪ ತಮ್ಮ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಹೋಗುವುದಾಗಿ ಹಾಗೂ ಮಗ ಜಗದೀಶ್‍ನನ್ನ ಮಾತನಾಡಿಸಿಕೊಂಡು ಬರುವುದಾಗಿ ಹೇಳಿ ಹೋಗಿದ್ದವರು ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐ ಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

POLICE JEEP

ಹಮಾಲಿ ಕೆಲಸ ಮಾಡಿಕೊಂಡಿದ್ದ ಜಗದೀಶ್ 35 ವರ್ಷ ವಯಸ್ಸಾದರೂ ನನಗೆ ಮದುವೆ ಮಾಡಿಲ್ಲ, ಆಸ್ತಿಯಲ್ಲಿ ಪಾಲುಕೊಡುವಂತೆ ಜಗಳ ಮಾಡುತ್ತಿದ್ದ. ಜಗದೀಶ್ ಮದ್ಯದ ಅಮಲಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ತಂದೆಯನ್ನೇ ಕೊಲೆಮಾಡಿದ್ದಾನೆ. ಮಗ ಕುಡಿತದ ಚಟಕ್ಕೆ ದಾಸನಾಗಿ ದುಂದುವೆಚ್ಚ ಮಾಡುತ್ತಿದ್ದರಿಂದ ಬಸವರಾಜಪ್ಪ ಮಗನಿಂದ ದೂರವಿದ್ದರು. ತಂದೆಯನ್ನೇ ಕೊಂದ ಪಾಪಿಮಗ ಆರೋಪಿ ಜಗದೀಶ್‍ನನ್ನ ಮಾರ್ಕೆಟ್ ಯಾರ್ಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

Share This Article
Leave a Comment

Leave a Reply

Your email address will not be published. Required fields are marked *