Bengaluru| ಮೊಬೈಲ್ ನೋಡುತ್ತಿದ್ದ ಮಗನ ತಲೆಗೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ – ಚಿಕಿತ್ಸೆ ಫಲಿಸದೇ ಸಾವು

Public TV
1 Min Read

ಬೆಂಗಳೂರು: ಓದದೇ ಮಗ ಮೊಬೈಲ್ (Mobile) ನೋಡುತ್ತಿದ್ದದ್ದನ್ನು ಕಂಡು ತಂದೆ ಕ್ರಿಕೆಟ್ ಬ್ಯಾಟ್‌ನಿಂದ (Cricket Bat) ತಲೆಗೆ ಹಲ್ಲೆಗೈದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮಗ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ (Kumaraswamy Layout) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತೇಜಸ್ (14) ಮೃತಪಟ್ಟ ಬಾಲಕ. ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಕಳೆದ 20 ದಿನಗಳಿಂದ ತೇಜಸ್‌ ಶಾಲೆಗೆ ಹೋಗಿರಲಿಲ್ಲ. ಶಾಲೆಗೆ ಹೋಗದೇ ಪುಂಡ ಹುಡುಗರ ಜೊತೆ ತಿರುಗಾಡುತ್ತಿದ್ದ ತೇಜಸ್‌ ರಾತ್ರಿ ಮನೆಗೆ ಬಂದು ಮೊಬೈಲ್‌ನಲ್ಲಿ ರೀಲ್ಸ್‌, ವೀಡಿಯೋ ಗೇಮ್‌ ಆಡುತ್ತಿದ್ದ. ಅಲ್ಲದೇ ಹೊಸ ಮೊಬೈಲ್‌ ಕೊಡಿಸುವಂತೆ ತಂದೆಯೊಂದಿಗೆ ಜಗಳವಾಡಿದ್ದ. ಕುಡಿದು ಮನೆಗೆ ಬಂದಿದ್ದ ತಂದೆ ರವಿಕುಮಾರ್ ಮಗ ಮೊಬೈಲ್ ನೋಡುತ್ತಿರುವುದನ್ನು ಕಂಡು ಕೋಪಗೊಂಡು ಕ್ರಿಕೆಟ್ ಬ್ಯಾಟ್‌ನಿಂದ ಆತನ ತಲೆಗೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ತೇಜಸ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇದನ್ನೂ ಓದಿ: ಜಮೀರ್ ಹೇಳಿದ್ದು ಸರಿಯಲ್ಲ: ಕುಮಾರಸ್ವಾಮಿ ‘ಕರಿಯ’ ಹೇಳಿಕೆಗೆ ಡಿಕೆಶಿ ವಿರೋಧ

ಘಟನಾ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಂದೆ ರವಿಕುಮಾರ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುಡಾ ಹಗರಣಕ್ಕೆ ಟ್ವಿಸ್ಟ್‌ – ಜಿಟಿ ದೇವೇಗೌಡ ಸಂಬಂಧಿಗೆ 19 ಸೈಟ್‌ ಹಂಚಿಕೆ!

Share This Article