ಅಮ್ಮನಿಗೆ ವರ ಬೇಕಿದೆ, ಷರತ್ತುಗಳು ಅನ್ವಯ: ಮಗನ ಪೋಸ್ಟ್

Public TV
2 Min Read

ಕೋಲ್ಕತ್ತಾ: ಅಮ್ಮನಿಗೆ ವರ ಬೇಕಿದೆ ಎಂದು ಯುವಕನೋರ್ವನ ಫೇಸ್‍ಬುಕ್ ಪೋಸ್ಟ್ ವೈರಲ್ ಆಗಿದೆ. ತಾಯಿಗೆ ವರ ಹುಡುಕುತ್ತಿರುವ ಯುವಕನ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂದನ್ ನಗರದ ಫ್ರೆಂಚ್ ಕಾಲೋನಿಯ ನಿವಾಸಿ ಗೌರವ್ ತಾಯಿಗಾಗಿ ಸೂಕ್ತ ವರನನ್ನು ಹುಡುಕುತ್ತಿದ್ದಾರೆ. ಐದು ವರ್ಷಗಳ ಹಿಂದೆ ನನ್ನ ತಂದೆ ವಿಧಿವಶರಾಗಿದ್ದು, 45 ವರ್ಷದ ನನ್ನ ಅಮ್ಮ ಮನೆಯಲ್ಲಿ ಏಕಾಂಗಿ ಆಗಿರುತ್ತಾರೆ. ಮದ್ಯ ಸೇವಿಸದ ಮತ್ತು ಶುದ್ಧ ಸಸ್ಯಹಾರಿಯಾಗಿರುವ ವರ ಬೇಕಿದೆ ಎಂದು ಗೌರವ್ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: 50 ವರ್ಷದ ಅಮ್ಮನಿಗೆ ವರ ಬೇಕಾಗಿದೆ- ಮಗಳ ಟ್ವೀಟ್ ವೈರಲ್

ಈ ಕುರಿತು ಪ್ರತಿಕ್ರಿಯಿಸಿರುವ ಗೌರವ್, ನನ್ನ ತಂದೆ ಕುಲ್ಟಿಯಲ್ಲಿ ನೌಕರಿ ಮಾಡುತ್ತಿದ್ದರು. 2014ರಲ್ಲಿ ತಂದೆಯ ನಿಧನದ ಬಳಿಕ ಅಮ್ಮ ಮನೆಯಲ್ಲಿ ಏಕಾಂಗಿಯಾಗಿದ್ದಾರೆ ಎಂಬುವುದು ನನ್ನ ಅಭಿಪ್ರಾಯ. ನಾನು ಬೆಳಗ್ಗೆ ಏಳು ಗಂಟೆಗೆ ಕೆಲಸಕ್ಕಾಗಿ ಮನೆಯಿಂದ ಹೋದರೆ ರಾತ್ರಿ ಹಿಂದಿರುಗುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಓರ್ವ ಗೆಳೆಯನ ಅವಶ್ಯಕತೆ ಇರುತ್ತದೆ. ಮದುವೆ ಬಗ್ಗೆ ಅಮ್ಮನ ಜೊತೆ ಮಾತನಾಡಿದ್ದೇನೆ. ಅಮ್ಮ ಸಹ ಈ ಕುರಿತು ಯೋಚನೆ ಮಾಡುತ್ತಿದ್ದಾರೆ. ಏಕಾಂಗಿಯಾಗಿರುವ ಅಮ್ಮನಿಗೆ ಸಂಗಾತಿ ಹುಡುಕುವುದು ನಮ್ಮ ಕರ್ತವ್ಯ. ಹಾಗಾಗಿ ಪೋಸ್ಟ್ ಮಾಡಿದ್ದೇನೆ ಎಂದು ಹೇಳುತ್ತಾರೆ. ಇದನ್ನೂ ಓದಿ: ಆಸ್ತಾ ವರ್ಮಾ ಸ್ಫೂರ್ತಿ- ತಾಯಿಗೆ ವರ ಹುಡುಕ್ತಿರೋ ಮತ್ತೊಬ್ಬ ಯುವತಿ

ಜನರು ಬೆನ್ನ ಹಿಂದೆ ನೂರು ಮಾತನಾಡಬಹುದು. ಯಾರಿಗೂ ನನ್ನ ಮುಂದೆ ಮಾತನಾಡಲ್ಲ. ಸಮಾಜದಲ್ಲಿ ಮಾಡುವ ಪ್ರತಿಯೊಂದು ಕೆಲಸಗಳಿಗೆ ಕೊಂಕು ಮಾತನಾಡುವ ಜನ ಇರುತ್ತಾರೆ. ಹಾಗಾಗಿ ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಕೆಲವರು ಪ್ರಚಾರ ಪಡೆದುಕೊಳ್ಳಲು ಈ ರೀತಿಯ ಪೋಸ್ಟ್ ಮಾಡಿದ್ದೇನೆ ಎಂದು ಮಾತನಾಡಿಕೊಂಡಿದ್ದಾರೆ. ಮುಂದೆ ಮಾತನಾಡದೇ ಇರುವ ಜನರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೆಲವರು ಸಮಾಜಕ್ಕೆ ಹೆದರಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ಗೌರವ್ ಬೇಸರ ವ್ಯಕ್ತಪಡಿಸುತ್ತಾರೆ.

ಫೇಸ್‍ಬುಕ್ ನಲ್ಲಿ ನನ್ನ ಮನವಿ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಎಂಜಿನಿಯರ್, ಡಾಕ್ಟರ್ ಮತ್ತು ಶಿಕ್ಷಕರು ಸೇರಿದಂತೆ ಹಲವರು ತಮ್ಮ ಬಯೋಡೇಟಾ ಕಳುಹಿಸಿದ್ದಾರೆ. ಇವುಗಳಲ್ಲಿ ಉತ್ತಮವಾದವರನ್ನು ಆಯ್ಕೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದು ಗೌರವ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *