ಎಲ್‌ಐಸಿ ಹಣಕ್ಕಾಗಿ ತಂದೆಯನ್ನೆ ಕೊಂದ ಮಗ – ಸಾವಿನ ಸುದ್ದಿ ತಿಳಿದು ಇನ್ನೊಬ್ಬ ಮಗ ಆತ್ಮಹತ್ಯೆ!

Public TV
1 Min Read

ಮೈಸೂರು: ಎಲ್‌ಐಸಿ ಹಣಕ್ಕಾಗಿ (LIC Fund) ಮಗ ತಂದೆಯನ್ನೇ ಕೊಂದಿರುವ ಘಟನೆ ಮೈಸೂರು (Mysuru) ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಸಮೀಪದ ಗೆರೋಸಿ ಕಾಲೋನಿಯಲ್ಲಿ ನಡೆದಿದೆ.

ಅಪ್ಪ ಕೊಲೆಯಾದ ವಿಚಾರ ತಿಳಿದು ಇನ್ನೊಬ್ಬ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಪ್ಪ ಅಣ್ಣಪ್ಪನ ಹೆಸರಿನಲ್ಲಿ ಮಗ ಪಾಂಡು ವಿಮೆ ಮಾಡಿಸಿದ್ದ. ಈ ವಿಮೆ ಹಣಕ್ಕಾಗಿ ಹಿಂಬದಿಯಿಂದ ತಲೆಗೆ ದೊಣ್ಣೆಯಲ್ಲಿ ಹೊಡೆದು ಕೊಂದಿದ್ದಾನೆ. ಇದನ್ನೂ ಓದಿ: ಪೂಂಚ್‌ನಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನದಲ್ಲಿದ್ದ ಕೊಡಗಿನ ಯೋಧ ಸ್ಥಿತಿ ಚಿಂತಾಜನಕ

ಬಳಿಕ ಅಪರಿಚಿತ ವಾಹನ ಡಿಕ್ಕಿಯಾಗಿ ತಮ್ಮ ತಂದೆ ಸಾವನ್ನಪ್ಪಿದ್ದಾರೆ ಪಾಂಡು ಕಥೆ ಕಟ್ಟಿದ್ದ. ಬೈಲುಕುಪ್ಪೆ ಪೊಲೀಸರಿಗೂ ಪಾಂಡು ದೂರು ಕೊಟ್ಟಿದ್ದ. ಅಪರಿಚಿತ ವಾಹನ ಡಿಕ್ಕಿ ಓರ್ವ ಸಾವು ಅಂತಾ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡು ಅನುಮಾನ ಬಂದ ಹಿನ್ನಲೆಯಲ್ಲಿ ಪಾಂಡುನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮಾಡಿದ್ದಾಗ ಇನ್ಸೂರೆನ್ಸ್ ಪಾಲಿಸಿ ಹಣಕ್ಕಾಗಿ ಕೊಂದಿರೋದಾಗಿ ತಪ್ಪೊಪ್ಪಿಗೆ ನೀಡಿದ್ದಾನೆ. ಇದನ್ನೂ ಓದಿ: ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಕೇಸ್ – ಚಾಟಿಯಲ್ಲಿ ಹೊಡೆದುಕೊಂಡು ಅಣ್ಣಾಮಲೈ ಪ್ರತಿಭಟನೆ

Share This Article