ಅನಾರೋಗ್ಯದಿಂದ ಬಳಲುತ್ತಿರೋ ತಂದೆ ನೋಡಲು ಸೈಕಲಿನಲ್ಲೇ 2,100 ಕಿ.ಮೀ ದೂರ ಪಯಣ

Public TV
2 Min Read

– ತಂದೆಯನ್ನ ನಾನು ಕೊನೆಯ ಕ್ಷಣದಲ್ಲಿ ನೋಡಲೇಬೇಕು

ಮುಂಬೈ: ವಾಚ್‍ಮೆನ್ ಒಬ್ಬ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಂದೆಯನ್ನು ನೋಡಲು ಜಮ್ಮು ಮತ್ತು ಕಾಶ್ಮೀರದ ರಾಜೌರಿವರೆಗೂ ಸುಮಾರು 2,100 ಕಿ.ಮೀ. ದೂರ ಸೈಕಲ್ ಮೂಲಕವೇ ಪ್ರಯಾಣ ಬೆಳೆಸಿದ್ದಾರೆ.

ಮೊಹಮ್ಮದ್ ಆರಿಫ್ ತಂದೆಗಾಗಿ ಸೈಕಲ್ ಸವಾರಿ ಮಾಡುತ್ತಿರುವ ಮಗ. ಇವರ ಮುಂಬೈನಲ್ಲಿ ವಾಚ್‍ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಆರಿಫ್‍ಗೆ ಮನೆಯಿಂದ ಫೋನ್ ಬಂದಿದ್ದು, ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ ಮತ್ತು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣ ತಂದೆಯನ್ನು ನೋಡಲು ಹೊರಟ್ಟಿದ್ದಾರೆ. ಆದರೆ ಕೊರೊನಾದಿಂದ ಯಾವುದೇ ರೈಲು ಅಥವಾ ಬಸ್ ಇರಲಿಲ್ಲ. ಕೊನೆಗೆ ಆರಿಫ್ ತನ್ನ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗೆ 500 ರೂ. ಕೊಟ್ಟು ಸೈಕಲ್ ಖರೀದಿಸಿದ್ದಾರೆ.

ನನ್ನ ತಂದೆಯನ್ನು ನಾನು ನೋಡಬೇಕಾಗಿದೆ. ಆದ್ದರಿಂದ ನಾನು ಮನೆಗೆ ಸೈಕ್ಲಿಂಗ್ ಮಾಡಿಕೊಂಡೆ ಹೋಗಬೇಕು. ಗುರುವಾರ ಬೆಳಗ್ಗೆ 10 ಗಂಟೆಗೆ ಮುಂಬೈನಿಂದ ಹೊರಟೆ. ಮಾರ್ಗದಲ್ಲಿ ನನಗೆ ಪೊಲೀಸರು ಸಿಕ್ಕಿದರು. ಅವರಿಗೆ ನನ್ನ ಪರಿಸ್ಥಿತಿಯ ಬಗ್ಗೆ ಹೇಳಿದೆ. ಅವರು ಯಾವುದೇ ಸಹಾಯವನ್ನು ಮಾಡಲಿಲ್ಲ. ಆದರೆ ಪೊಲೀಸರು ನನ್ನ ಪ್ರಯಾಣವನ್ನು ಮುಂದುವರಿಸಲು ಅವಕಾಶ ನೀಡಿದ್ದಾರೆ ಎಂದು ಆರಿಫ್ ತಿಳಿಸಿದರು.

ರಾಜೌರಿಯನ್ನು ತಲುಪಲು ಎಷ್ಟು ದಿನಗಳು ಬೇಕೋ ಗೊತ್ತಿಲ್ಲ. ಆದರೆ ನಮ್ಮ ತಂದೆಯನ್ನ ನಾನು ಕೊನೆಯ ಕ್ಷಣದಲ್ಲಿ ನೋಡಬೇಕು. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ನನಗೆ ಸಹೋದರ ಅಥವಾ ಸಹೋದರಿ ಇಲ್ಲ. ನಾನು ಹೋಗಲೇಬೇಕಾಗಿದೆ. ನಾನು ಮುಂಬೈನಿಂದ 800 ರೂ. ಮತ್ತು ಸ್ವಲ್ಪ ನೀರಿನೊಂದಿಗೆ ಹೊರಟೆ. ಈಗ ನನ್ನ ಬಳಿ 600 ರೂ. ಮತ್ತು ಎರಡು ಬಾಟಲಿ ನೀರು ಉಳಿದಿದೆ. ನನ್ನ ಫೋನ್ ಸಹ ಸ್ವಿಚ್ ಆಫ್ ಆಗಿದೆ ಎಂದರು.

ಅಂಗಡಿಯೊಂದರಲ್ಲಿ ನನ್ನ ಫೋನ್ ಚಾರ್ಜ್ ಮಾಡಿ ಮನೆಗೆ ಫೋನ್ ಮಾಡಿದ್ದೆ. ತಂದೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಿದರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರೂ ಇಲ್ಲ ಎಂದು ನೋವಿನಿಂದ ಹೇಳಿಕೊಂಡರು.

ಆರಿಫ್ ರಾತ್ರಿ ರಸ್ತೆಯಲ್ಲಿ ಮಲಗುತ್ತಾರೆ. ಬೆಳಗ್ಗೆ ಎದ್ದು ತಮ್ಮ ಪಯಣವನ್ನು ಮುಂದುರಿಸುತ್ತಾರೆ. ಲಾಕ್‍ಡೌನ್ ಇದ್ದರೂ ದಿನಸಿ ಅಂಗಡಿಗಳು ತೆರೆದಿರುತ್ತವೆ. ಹೀಗಾಗಿ ಅಲ್ಲಿ ಬಿಸ್ಕೆಟ್ ಮತ್ತು ಮಾತ್ರ ಸಿಗುತ್ತದೆ. ಆದ್ದರಿಂದ ಅವುಗಳನ್ನು ಮಾತ್ರ ಖರೀದಿಸುತ್ತಿದ್ದಾರೆ. ಸದ್ಯಕ್ಕೆ ಆರಿಫ್ ಮಹಾರಾಷ್ಟ್ರ-ಗುಜರಾತ್ ಗಡಿಯ ಗ್ರಾಮವೊಂದರಲ್ಲಿದ್ದಾರೆ. ಆರಿಫ್ ಮೂಲತಃ ನಾವರ್ ಭ್ರಾಮ್ನಾ ಗ್ರಾಮದ ನಿವಾಸಿಯಾಗಿದ್ದು, ಕೆಲಸ ಹುಡುಕಿಕೊಂಡು ಮುಂಬೈಗೆ ಬಂದಿದ್ದರು. ಪತ್ನಿ ಮತ್ತು ಮಕ್ಕಳು ಅವರ ತಂದೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಆರಿಫ್ ಬಗ್ಗೆ ತಿಳಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಹಾಯ ಮಾಡಲು ಮುಂದಾಗಿದ್ದಾರೆ. ಸದ್ಯಕ್ಕೆ ಆರಿಫ್ ಯಾವ ಸ್ಥಳದಲ್ಲಿ ಪ್ರಯಾಣಿಸುತ್ತಿದ್ದಾನೆ ಎಂದು ಹುಡುಕಲಾಗುತ್ತಿದೆ. ಆತ ಲಖನ್‍ಪುರಕ್ಕೆ ಬಂದರೆ ಅಲ್ಲಿಂದ 4 ಗಂಟೆಗಳಲ್ಲಿ ರಾಜೌರಿಗೆ ಬಿಡಬಹುದು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *