– ಅಳಿಯ ಹೊಡೆದ ಏಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದ ಬಾಬು
ಬೆಂಗಳೂರು: ಅಳಿಯನ ಜೊತೆ ಹೆಂಡತಿ ಮತ್ತು ಮಗಳು ಸೇರಿಕೊಂಡು ತಂದೆಯನ್ನು ಕೊಲೆ ಮಾಡಿ, ಬಳಿಕ ಅಂಬ್ಯುಲೆನ್ಸ್ನಲ್ಲಿ ಕೊಂಡೊಯ್ದು ಕೋಲಾರ (Kolar) ಬಳಿ ಶವ ಸುಟ್ಟುಹಾಕಿರುವ ಘಟನೆ ನಗರದ ಕಾಡುಗೋಡಿಯಲ್ಲಿ (Kadugodi) ನಡೆದಿದೆ.
ಗೋಡೌನ್ನಲ್ಲಿ ಕೆಲಸ ಮಾಡ್ತಿದ್ದ ದೇವನಹಳ್ಳಿ (Devanahalli) ಮೂಲದ ಬಾಬು (48) ಕೊಲೆಯಾದ ವ್ಯಕ್ತಿ. ಪತ್ನಿ ಮುನಿರತ್ನ, ಅಳಿಯ ರಾಮಕೃಷ್ಣ ಮತ್ತು ಮಗಳು ಸೇರಿಕೊಂಡು ಕೃತ್ಯ ಎಸಗಿದ್ದಾರೆ.ಇದನ್ನೂ ಓದಿ: ವಾರಣಾಸಿ | 2,200 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಮೂರು ತಿಂಗಳ ಹಿಂದೆ ಮೃತ ಬಾಬು ಮಗಳು ಹಾಗೂ ರಾಮಕೃಷ್ಟ ಪ್ರೀತಿಸಿ ಮದುವೆಯಾಗಿದ್ದರು. ಇದು ಬಾಬುಗೆ ಇಷ್ಟವಿರಲಿಲ್ಲ. ಆದರೆ ಮಗಳು ತಂದೆಯ ವಿರೋಧದ ನಡುವೆಯೂ ಮದುವೆಯಾಗಿದ್ದಳು. ಜು.26ರಂದು ಅಳಿಯ ಹಾಗೂ ಮಗಳು ಮನೆಗೆ ಬಂದಿದ್ದರು. ಆಗ ಬಾಬು ಇಬ್ಬರಿಗೂ ಬಾಯಿಗೆ ಬಂದಂತೆ ಬೈಯ್ದಿದ್ದ. ಜೊತೆಗೆ ಸಿಟ್ಟಿನಲ್ಲಿ ತನ್ನ ಹೆಂಡತಿ ಮುನಿರತ್ನಳಿಗೂ ಕಪಾಳ ಮೋಕ್ಷ ಮಾಡಿದ್ದ.
ಆಗ ಅಳಿಯ ರಾಮಕೃಷ್ಟ ನನ್ನ ಅತ್ತೆಗೆ ಹೊಡೆಯುತ್ತೀರಾ ಎಂದು ಬಾಬು ಕಪಾಳಕ್ಕೆ ಹೊಡೆದಿದ್ದ. ಹೊಡೆದ ಏಟಿಗೆ ಬಾಬು ಅಲ್ಲೇ ಬಿದ್ದು ಮೃತಪಟ್ಟಿದ್ದ. ಈ ವೇಳೆ ಮೂವರು ಸೇರಿಕೊಂಡು ಪ್ಲ್ಯಾನ್ ಮಾಡಿ, ಸಂಬಂಧಿಯೊಬ್ಬನ ಅಂಬ್ಯುಲೆನ್ಸ್ನ್ನು ಕರೆಸಿದ್ದರು. ಬೆಳಗಿನ ಜಾವ 3ರ ಸುಮಾರಿಗೆ ಶವವನ್ನು ಅಂಬ್ಯುಲೆನ್ಸ್ನಲ್ಲಿ ಕೊಂಡೊಯ್ದು ಕೋಲಾರದ ಬಳಿ ಶವವನ್ನು ಸುಟ್ಟು ಹಾಕಿದ್ದರು. ಇದೆಲ್ಲವನ್ನು ನೋಡಿದ್ದ ಬಾಬು ಕಿರಿಮಗಳು ನಾಲ್ಕು ದಿನದ ಬಳಿಕ ಸಂಬಂಧಿಕರಿಗೆ ತಿಳಿಸಿದ್ದಳು. ಬಳಿಕ ಬಾಬು ಸಹೋದರ ಕಾಡುಗೋಡಿ ಪೊಲೀಸ್ (Kadugodi Police) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಎಫ್ಐಆರ್ (FIR) ದಾಖಲಿಸಿದ ಪೊಲೀಸರು ಅಳಿಯ, ಮಗಳು ಹಾಗೂ ಹೆಂಡತಿ ಮೂವರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಳಿಯ ಹಾಗೂ ಪತ್ನಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಅಳಿಯ ಹಾಗೂ ಪತ್ನಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಜಿಮ್ನಲ್ಲಿ ವರ್ಕ್ಔಟ್ ವೇಳೆ ಹೃದಯಾಘಾತ – ಪ್ರತ್ಯೇಕ ಕಡೆ ಇಬ್ಬರು ಸಾವು