25ರ ಅಳಿಯನ ಜೊತೆ 55ರ ಅತ್ತೆ ಪರಾರಿ – ಮತ್ತೆ ವಾಪಸ್ ಬಂದು ಗಂಡ, ಮಗಳ ಜೊತೆ ಕಿರಿಕ್!

Public TV
1 Min Read

ದಾವಣಗೆರೆ: 25ರ ಅಳಿಯನ ಜೊತೆ ಪರಾರಿಯಾಗಿದ್ದ 55 ವರ್ಷದ ಅತ್ತೆ 15 ದಿನಗಳ ಬಳಿಕ ಗಂಡನ ಮನೆಗೆ ವಾಪಸ್ ಬಂದು ಪತಿ ಮತ್ತು ಮಗಳ ಬಳಿ ಹೈಡ್ರಾಮ ಮಾಡಿದ ಘಟನೆ ಚನ್ನಗಿರಿ (Channagiri) ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಯ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ ಅಳಿಯ ಗಿರೀಶ್ (ಹೆಸರು ಬದಲಾಯಿಸಲಾಗಿದೆ) ಜೊತೆಗೆ ಕೆಲದಿನಗಳ ಹಿಂದೆ ಪರಾರಿಯಾಗಿದ್ದಳು. ಈಗ ಗಂಡನ ಮನೆಗೆ ಬಂದ ಜಯ ಪತಿ ಹಾಗೂ ಮಲಮಗಳ (ಗಿರೀಶ್ ಪತ್ನಿ) ಜೊತೆ ನಾನು ಗಿರೀಶ್ ಜೊತೆ ಹೋಗಿರಲಿಲ್ಲ ಎಂದು ಗಲಾಟೆ ಆರಂಭಿಸಿದ್ದಾಳೆ. ಇದನ್ನೂ ಓದಿ: 2,000 ರೂ.ಗೆ ಸೆಕ್ಸ್ ಲೈವ್‌ಸ್ಟ್ರೀಮ್‌ ಮಾಡಿದ ಹೈದರಾಬಾದ್ ಜೋಡಿ ಅರೆಸ್ಟ್!

ಏನಿದು ಪ್ರಕರಣ?
ರಮೇಶ್ (ಹೆಸರು ಬದಲಿಸಲಾಗಿದೆ) ಅವರ ಎರಡನೇ ಪತ್ನಿ ಜಯ ಹಾಗೂ ಮೊದಲ ಪತ್ನಿಯ ಮಗಳೊಂದಿಗೆ ಮುದ್ದೇನಹಳ್ಳಿಯಲ್ಲಿ ವಾಸವಿದ್ದರು. ರಮೇಶ್ ತಮ್ಮ ಮಗಳ ಮದುವೆಯನ್ನು ಇತ್ತೀಚೆಗೆ ತನ್ನ ಸಹೋದರಿಯ ಮಗ ಗಿರೀಶ್ ಜೊತೆ ಮಾಡಿದ್ದರು. ಮದುವೆಯಾದ 15 ದಿನದಲ್ಲಿ ಜಯ ಹಾಗೂ ಗಿರೀಶ್ ನಡುವಿನ ಅಕ್ರಮ ಸಂಬಂಧ ಬೆಳಕಿಗೆ ಬಂದಿತ್ತು.

ಮೊಬೈಲ್‍ನಲ್ಲಿ (Mobile) ಅಶ್ಲೀಲ ಮೆಸೆಜ್‍ನಿಂದ ಈ ವಿಚಾರ ಬೆಳಕಿಗೆ ಬಂದಿತ್ತು. ವಿಚಾರ ಗೊತ್ತಾಗುತ್ತಿದ್ದಂತೆ ಹಣ ಹಾಗೂ ಆಭರಣ ಕದ್ದು ಜಯ ಅಳಿಯನ ಜೊತೆ ಪರಾರಿಯಾಗಿದ್ದಳು. ಈಗ ಆಕೆ ಮಾತ್ರ ವಾಪಸ್ ಆಗಿದ್ದು, ಅಳಿಯ ಬಂದಿಲ್ಲ.

ಗಿರೀಶ್ ನಾಪತ್ತೆಯಾದ ಬಗ್ಗೆ ಪೋಷಕರು ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಹಾಡಹಗಲೇ ಹಣ ಎಣಿಸುವಾಗ ಕುತ್ತಿಗೆಗೆ ಚಾಕು ಇಟ್ಟು 2 ಕೋಟಿ ರಾಬರಿ

Share This Article