ಹಾಸನ | ಮಗಳ ಜೀವ ಉಳಿಸಲು ಹೋಗಿ ಅಳಿಯನಿಂದ ಹತ್ಯೆಯಾದ ಅತ್ತೆ

Public TV
1 Min Read

ಹಾಸನ: ಮಗಳ ಜೀವ ಉಳಿಸಲು ಹೋಗಿ ಅಳಿಯನಿಂದ ಅತ್ತೆ ಹತ್ಯೆಯಾದ ಘಟನೆ ಅರಕಲಗೂಡಿನ (Arakalgud) ರಾಮನಾಥಪುರದಲ್ಲಿ ನಡೆದಿದೆ.

ಹತ್ಯೆಯಾದ ಮಹಿಳೆಯನ್ನು ಫೈರೋಜಾಅಹದ್ (55) ಎಂದು ಗುರುತಿಸಲಾಗಿದೆ. ರಸೂಲ್ ಕೊಲೆಗೈದ ಆರೋಪಿಯಾಗಿದ್ದಾನೆ. ಈತ ಪತ್ನಿಗೆ ನೀಡುತ್ತಿದ್ದ ಕಿರಿಕುಳದಿಂದ ಬೇಸತ್ತ ಅತ್ತೆ, ತನ್ನ ಮಗಳನ್ನು ತವರು ಮನೆಗೆ ಕರೆದುಕೊಂಡು ಬರುತ್ತಿದ್ದರು. ಇದರಿಂದ ಕೋಪಗೊಂಡ ಅಳಿಯ ಹಿಂಬಾಲಿಸಿಕೊಂಡು ಬಂದು ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ಮಗಳ ರಕ್ಷಣೆಗೆ ಬಂದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಇದನ್ನೂ ಓದಿ: ಪರಿಹಾರ ಹಣದ ಆಸೆಗೆ ಪತಿಗೆ ಚಟ್ಟ ಕಟ್ಟಿದ ಧರ್ಮಪತ್ನಿ – ತಿಪ್ಪೆ ಗುಂಡಿಯಲ್ಲಿ ಗಂಡನ ಶವ ಪತ್ತೆ

ಪತ್ನಿ ಸಮೀನಾ ಹಾಗೂ ಆಕೆಯ ಅಕ್ಕ ಸುಮಯ್ಯತಾಜಾ ಮೇಲೂ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ 9 ವರ್ಷಗಳ ಹಿಂದೆ ಸಮೀನಾ ಅವರನ್ನು ಕೆ.ಆರ್.ನಗರದ ಬೆಟ್ಟದಪುರ ಗ್ರಾಮದ ರಸೂಲ್ ಮದುವೆಯಾಗಿದ್ದ. ಮದುವೆಯಾದಾಗಿನಿಂದ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಪತಿಯ ಕಿರುಕುಳದ ಬಗ್ಗೆ ಸಮೀನಾ ತನ್ನ ಪೋಷಕರ ಬಳಿ ಹೇಳಿದ್ದು ಹಲವು ಬಾರಿ ರಾಜಿ ಸಂಧಾನ ಮಾಡಿ ರಸೂಲ್‍ಗೆ ಬುದ್ದಿ ಹೇಳಿದ್ದರು. ಆದರೂ ರಸೂಲ್ ತನ್ನ ನೀಚ ಬುದ್ದಿ ಬಿಟ್ಟರಿಲಿಲ್ಲ. ಗಾಂಜಾ, ಮದ್ಯಸೇವಿಸಿ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ಇದರಿಂದ ಸಮೀನಾ ರೋಸಿ ಹೋಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಟ್ರಯಾಂಗಲ್ ಲವ್ ಸ್ಟೋರಿಗೆ ಯುವಕ ಬಲಿ

Share This Article