ಮಂಡ್ಯ | ಆಸ್ತಿಗಾಗಿ ಅಪ್ಪನನ್ನೇ ಟ್ರ್ಯಾಪ್‌ ಮಾಡಲು ಹೋಗಿ ತಗ್ಲಾಕೊಂಡ ಮಗ

By
2 Min Read

– ಅಪ್ಪನ ಅಶ್ಲೀಲ ಫೋಟೋ ಎಡಿಟ್‌ ಮಾಡಿ ವಾಟ್ಸಪ್‌ ಗ್ರೂಪ್‌ನಲ್ಲಿ ಶೇರ್‌ ಮಾಡಿದ್ದ ಪುತ್ರ

ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಆಸ್ತಿಗಾಗಿ (Property) ಜನ್ಮಕೊಟ್ಟ ಅಪ್ಪನಿಗೆ ಖೆಡ್ಡಾ ತೋಡಿದ್ದ ಕುಲಪುತ್ರ ಸಿಕ್ಕಿಬಿದ್ದಿರುವ ವಿಚಿತ್ರ ಪ್ರಕರಣ ನಡೆದಿದೆ.

ತಂದೆಯ ಕೋಟ್ಯಂತರ ರೂಪಾಯಿ ಆಸ್ತಿಯ ದುರಾಸೆಗೆ ಬಿದ್ದ ಕಿರಾತಕ ಮಗ, ತನ್ನ ವಿರೋಧಿಗಳ ಜೊತೆಗೂಡಿ ತಂದೆಗೆ ಬೆದರಿಕೆ ಹಾಕಿದ್ದಾನೆ. ಇನ್ನು ಈ ಪ್ರಕರಣದಲ್ಲಿ ಮಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಮದ್ದೂರು ಪೊಲೀಸರು (Maddur Police) ಬಂಧಿಸಿ ಜೈಲಿಗಟ್ಟಿದ್ದಾರೆ. ಮಗ ಪ್ರಣಬ್ ಹಾಗೂ ಮಹೇಶ, ಈಶ್ವರ್, ಪ್ರೀತಮ್ ಬಂಧಿತ ಆರೋಪಿಗಳು. ಇದನ್ನೂ ಓದಿ: ಪಾಟ್ನಾದಲ್ಲಿ ಭೀಕರ ರಸ್ತೆ ಅಪಘಾತ – ಐವರು ಉದ್ಯಮಿಗಳು ಸ್ಥಳದಲ್ಲೇ ಸಾವು

ಮದ್ದೂರಿನ ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಸತೀಶ್ (Businessman Satish), ಮದ್ದೂರು ಸೇರಿದಂತೆ ರಾಜ್ಯದ ಹಲವೆಡೆ ʻರಾಣಿ ಐಶ್ವರ್ಯ ಡೆವಲಪರ್ಸ್ʼ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ. ಆದ್ರೆ ತಂದೆ ಮಗ ಪ್ರಣವ್‌ ತಂದೆ ಜೊತೆಗೆ ಆಸ್ತಿ ವಿಚಾರದಲ್ಲಿ ಕಿರಿಕ್‌ ಮಾಡಿಕೊಂಡಿದ್ದ. ಈಗಾಗಲೇ ತಂದೆಯ ಕೋಟ್ಯಂತರ ರೂಪಾಯಿ ಲಾಸ್‌ ಮಾಡಿದ್ದಲ್ಲದೇ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದ. ತಂದೆ ಹಣ ಕೊಡದೇ ಇದ್ದಾಗ ಬ್ಯ್ಲಾಕ್‌ಮೇಲ್‌ ತಂತ್ರ ಹೂಡಲು ಮುಂದಾಗಿದ್ದ ಮಗ ಪ್ರಣವ್‌. ಇದನ್ನೂ ಓದಿ: ಕೊಲೆ, ಸುಲಿಗೆ ಸೇರಿ 18 ಪ್ರಕರಣದಲ್ಲಿ ಬೇಕಾಗಿದ್ದ ಬಿಹಾರದ ಶಂಕಿತ ನಕ್ಸಲ್‌ ರಾಯಚೂರಲ್ಲಿ ಅರೆಸ್ಟ್‌

ದುಶ್ಚಟಗಳಿಗೆ ಬಲಿಯಾಗಿ ವಿರೋಧಿಗಳ ಜೊತೆ ಸೇರಿ ಆಸ್ತಿಗಾಗಿ ತಂದೆಯನ್ನೇ ಬ್ಲ್ಯಾಕ್‌ ಮೇಲ್‌ ಮಾಡೋಕೆ ಮುಂದಾಗಿದ್ದಾನೆ. ಹಣ ಕೊಡದ ತಂದೆಗೆ ಬುದ್ಧಿ ಕಲಿಸಲು ಕೆಲವರ ಜೊತೆ ಸೇರಿ ಅಪ್ಪನಿಗೆ ಖೆಡ್ಡಾ ತೋಡಿದ್ದಾನೆ. ಅಪ್ಪನ ಭಾವಚಿತ್ರಕ್ಕೆ ಅಶ್ಲೀಲ ಫೋಟೋ ಹಾಗೂ ವಾಯ್ಸ್ ಎಡಿಟ್ ಮಾಡಿ, ವಾಟ್ಸಪ್ ಗ್ರೂಪ್‌ಗೆ ಶೇರ್‌ ಮಾಡಿದ್ದಾನೆ. ಈ ರೀತಿಯ ಕೃತ್ಯದ ಮೂಲಕ ತಂದೆಯನ್ನ ಮಾನಸಿಕವಾಗಿ ಕುಗ್ಗಿಸಿ, ಆಸ್ತಿಯನ್ನ ಲಪಟಾಯಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಇದರಿಂದ ರೊಚ್ಚಿಗೆದ್ದ ತಂದೆ ಮದ್ದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮಗ ಸೇರಿದಂತೆ ಕೃತ್ಯಕ್ಕೆ ಪ್ರಚೋದಿಸಿದವರ ವಿರುದ್ಧವೂ ದೂರು ನೀಡಿದ್ದರು. ಉದ್ಯಮಿ ಸತೀಶ್‌ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಪೊಲೀಸರು ಮಗ ಪ್ರಣಬ್ ಸೇರಿ ಮಹೇಶ, ಈಶ್ವರ್, ಪ್ರೀತಮ್ ಎಂಬ ನಾಲ್ವರನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶಿಸಿದೆ. ಇದನ್ನೂ ಓದಿ: Bengaluru| ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಒಂದೂವರೆ ವರ್ಷದ ಮಗು ದುರ್ಮರಣ

Share This Article