ಹರಕೆ ಈಡೇರಿಸುವಂತೆ ಶಿವಲಿಂಗದ ಮೇಲೆ ಕೋರಿಕೆ ಬರೆದ ವಿದ್ಯಾರ್ಥಿ!

Public TV
1 Min Read

ಕಾರವಾರ: ದೇವರಲ್ಲಿ ಒಳಿತಿಗಾಗಿ ಹರಕೆ ಕಟ್ಟಿಕೊಳ್ಳುವುದು ಸಾಮಾನ್ಯ. ಆದರೆ ಉತ್ತರ ಕನ್ನಡದ (Uttara Kannada) ಶಿರಸಿಯಲ್ಲಿ ಪಿಯುಸಿ ವಿದ್ಯಾರ್ಥಿ (PUC Student) ತನಗೆ ಉತ್ತಮ ಅಂಕ ನೀಡಿ ರ‍್ಯಾಂಕ್‌ನಲ್ಲಿ ಉತ್ತೀರ್ಣ ಮಾಡಬೇಕು ಎಂದು ಕೋರಿಕೆ ಈಡೇರಿಕೆಗಾಗಿ ದೇವರ ಶಿರದಮೇಲೆಯೇ ಬರೆದು ಪೊಲೀಸರ ಅತಿಥಿಯಾಗಿದ್ದಾನೆ.

ಫೆ.4 ರಂದು ಶಿರಸಿಯ ನರಬೈಲ್ ಗ್ರಾಮದ ಪ್ರಸಿದ್ದ ಸೋಮೇಶ್ವರ ದೇವಸ್ಥಾನದ ಶಿವಲಿಂಗದ (Shivalinga) ಮೇಲೆ ಇಂಗ್ಲಿಷ್‌ನಲ್ಲಿ ಜೆ.ಇ 2024,2026 ಎಂದು ಬರೆಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವಸ್ಥಾನದ ಮುಂಭಾಗದಲ್ಲಿ ಇದ್ದ ಸಿಸಿ ಕ್ಯಾಮರಾವನ್ನು ಪರಿಶಿಲಿಸಿದ್ದಾರೆ. ಇದನ್ನೂ ಓದಿ: ದೇಶವನ್ನು ಇನ್ನೆಷ್ಟು ಭಾಗವಾಗಿ ಒಡೆಯುತ್ತೀರಿ: ಡಿ.ಕೆ.ಸುರೇಶ್‌ ಹೇಳಿಕೆಗೆ ಮೋದಿ ಕಿಡಿ

ತನಿಖೆಯ ವೇಳೆ ಕೆ.ಹೆಚ್. ಬಿ ಕಾಲೋನಿಯ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿ ಬರೆದಿರುವ ವಿಚಾರ ತಿಳಿಯಲ್ಪಟ್ಟಿತ್ತು. ವಿಚಾರಣೆ ನಡೆಸಿದಾಗ ಈತ ಪಿಯುಸಿ ಮೊದಲ ವರ್ಷದಲ್ಲಿ 98% ಅಂಕ ಪಡೆದು ಉತ್ತೀರ್ಣನಾಗಿದ್ದ. ದೇವರ ಮೇಲೆ ಅತೀವ ಭಕ್ತಿ ಹೊಂದಿದ್ದ ಈತ ಜೆ.ಇ ಪರೀಕ್ಷೆ ಕಟ್ಟಿದ್ದ. ಆದರೆ ಫಲಿತಾಂಶದಲ್ಲಿ ಹೆಚ್ಚು ಅಂಕ ಬಾರದ ಕಾರಣ ಹೀಗೆ ಬರೆದಿದ್ದೇನೆ ಎಂದು ಹೇಳಿದ್ದಾನೆ. ಆರೋಪಿ ಅಪ್ರಾಪ್ತ ಬಾಲಕನಾದ ಕಾರಣ ಬಾಲಸ್ನೇಹಿ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಲಾಗಿದೆ.

 

Share This Article