ದಂಪತಿ ಈ ಕೆಲಸ ಮಾಡಿದ್ರೆ ದಾಂಪತ್ಯ ಜೀವನ ಸುಖಮಯವಾಗಿರುತ್ತೆ..

Public TV
2 Min Read

ದಾಂಪತ್ಯ ಎಂಬುದು ಬದುಕಿನ ಒಂದು ಅಮೂಲ್ಯ ಘಟ್ಟ. ಪ್ರತಿ ಸನ್ನಿವೇಶದಲ್ಲೂ ಸತಿ-ಪತಿ ಹೊಂದಾಣಿಕೆಯಿಂದ ಸಾಗಿದರೆ ಸಂಸಾರ ಸುಂದರವಾಗಿರುತ್ತೆ. ದಾಂಪತ್ಯದ ಪ್ರತಿ ಕ್ಷಣವೂ ಸುಮಧುರವಾಗಿರಬೇಕು. ಮುಂದೊಮ್ಮೆ ಅದರ ನೆನಪುಗಳು ಸಿಹಿಯಾಗಿರಬೇಕು.

ದಾಂಪತ್ಯದಲ್ಲಿ ಹೊಂದಾಣಿಕೆಯ ಬದುಕು ಅಷ್ಟು ಸುಲಭವಲ್ಲ. ಸಾಗರದಲ್ಲಿ ನೌಕೆಗೆ ಎದುರಾಗುವ ಅಡೆತಡೆಗಳಂತೆಯೇ ಸಂಸಾರದಲ್ಲೂ ಅಡ್ಡಿ ಆತಂಕಗಳಿರುತ್ತವೆ. ಅದೆಲ್ಲವನ್ನೂ ಸ್ವೀಕರಿಸಿ ಸುಖಿ ಜೀವನ ನಡೆಸಬೇಕು ಎನ್ನುವುದಾದರೆ, ದಂಪತಿ (Couple) ತಮ್ಮ ನಿತ್ಯದ ಬದುಕಿನಲ್ಲಿ ಮಾಡಬೇಕಾದ ಒಂದಷ್ಟು ಕೆಲಸಗಳಿವೆ. ಬನ್ನಿ ಅವುಗಳನ್ನು ತಿಳಿಯೋಣ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

ಒಟ್ಟಿಗೆ ಡ್ಯಾನ್ಸ್‌ ಮಾಡಿ
ನಿಮ್ಮ ದಿನಚರಿಯಲ್ಲಿ ಕೆಲಹೊತ್ತು ಇಬ್ಬರೂ ಸೇರಿ ನೃತ್ಯ ಮಾಡಿ. ತುಂಬಾ ಟ್ರೆಂಡಿಂಗ್‌ನಲ್ಲಿರೋ ರೊಮ್ಯಾಂಟಿಕ್‌ ನೃತ್ಯವನ್ನೇ ಆಯ್ಕೆ ಮಾಡಿಕೊಳ್ಳಿ. ಇಬ್ಬರೂ ಒಟ್ಟಿಗೆ ನೃತ್ಯ ಕಲಿಯಿರಿ. ಅದನ್ನು ಚಿತ್ರೀಕರಿಸಿ ಫನ್‌ ಮಾಡಿ.

ಬೈಕ್‌ ರೈಡ್‌ ಹೋಗಿ
ದಂಪತಿ ಒಟ್ಟಿಗೆ ಆಗಾಗ ಬೈಕ್‌ ರೈಡ್‌ ಹೋಗಿ. ಬೀದಿ ಬದಿಯಲ್ಲಿ ಸಿಗುವ ತಿನಿಸನ್ನು ಸವಿಯಿರಿ. ಅಲ್ಲಿ ಟೀ, ಕಾಫಿ ಸೇವಿಸಿ. ಬೈಕ್‌ ರೈಡ್‌ನ್ನು ಇಬ್ಬರೂ ಎಂಜಾಯ್‌ ಮಾಡಿ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

ಇಷ್ಟದ ಅಡುಗೆಯನ್ನು ಜೊತೆಯಾಗಿ ಮಾಡಿ
ಅಡುಗೆ ಮನೆ ಗೃಹಿಣಿಗೆ ಮಾತ್ರ ಸೀಮಿತ ಅನ್ನೋದು ಕಾಮನ್‌. ಎಂದಾದರೂ ಪುರುಷರೂ ಕಿಚನ್‌ಗೆ ಹೋಗಿ, ಅಡುಗೆ ಮಾಡಲು ಹೆಂಡತಿಗೆ ಸಹಾಯ ಮಾಡಿದ್ದೀರಾ? ಇನ್ಮುಂದೆ ಆ ಮನೋಭಾವ ಬೆಳೆಸಿಕೊಳ್ಳಿ. ನಿಮ್ಮ ಇಷ್ಟದ ಅಡುಗೆಯನ್ನು ಪತ್ನಿಯೊಂದಿಗೆ ಸೇರಿ ಮಾಡಿ. ಬದುಕಿನಲ್ಲಿ ಇಬ್ಬರಿಗೂ ಅದು ಮರೆಯಲಾಗದ ಕ್ಷಣ ಆಗಿರುತ್ತೆ.

ಮನೆ ಸ್ವಚ್ಛಗೊಳಿಸಿ
ಮನೆಗೆಲಸವನ್ನು ಪತ್ನಿಗೆ ಮಾತ್ರ ಬಿಡುವುದು ಸರಿಯಲ್ಲ. ಎಲ್ಲಾ ಸಂದರ್ಭದಲ್ಲೂ ಅವರಿಗೆ ಸಾಥ್‌ ನೀಡುವುದು ಪತಿಯ ಕರ್ತವ್ಯ ಆಗಬೇಕು. ಆಗ ನೀವು ಪತ್ನಿ ಮನಸ್ಸಿಗೆ ಇನ್ನಷ್ಟು ಹತ್ತಿರ ಆಗ್ತೀರಾ. ಇಬ್ಬರೂ ಒಟ್ಟಿಗೆ ಮನೆ ಕ್ಲೀನ್‌ ಮಾಡಿ. ವಸ್ತುಗಳನ್ನು ನಿಗದಿತ ಸ್ಥಗಳಲ್ಲಿ ಇಟ್ಟುಕೊಳ್ಳಿ. ಮನೆ ಶುಚಿಯಾಗಿದ್ದಷ್ಟೂ, ಮನಸ್ಸು ಪ್ರಶಾಂತವಾಗಿರುತ್ತೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

ಮೂವಿ ನೋಡಿ
ಮೂವಿ ನೋಡಲು ದಂಪತಿ ಸಿನಿಮಾ ಥಿಯೇಟರ್‌ಗಳಿಗೇ ಹೋಗಬೇಕು ಎಂದೇನು ಇಲ್ಲ. ಮನೆಯಲ್ಲೇ ಒಟ್ಟಿಗೆ ಕೂತು ಇಷ್ಟದ ಸಿನಿಮಾ ವೀಕ್ಷಿಸಬಹುದು. ಇಂತಹ ಸಂದರ್ಭದಲ್ಲಿ ಆದಷ್ಟು ಕಾಮಿಡಿ ಸಿನಿಮಾಗಳನ್ನು ನೋಡಿದರೆ ಮತ್ತಷ್ಟು ಎಂಜಾಯ್‌ ಮಾಡಬಹುದು.

ಆಗಾಗ ಪಿಕ್ನಿಕ್‌ಗೆ ಹೋಗಿ
ಮನೆ, ಕಚೇರಿ ಅಂತಷ್ಟೇ ಇದ್ದರೆ ಲೈಫು ತುಂಬಾ ಬೇಜಾರು ಎನಿಸುತ್ತೆ. ಕಪಲ್‌ ಆಗಾಗ ಹೊರಗಡೆ ಪಿಕ್ನಿಕ್‌ಗೆ ಹೋಗಬೇಕು. ಮನೆಯಿಂದಲೇ ಒಂದಷ್ಟು ಹಣ್ಣು-ಹಂಪಲು, ಸ್ನ್ಯಾಕ್ಸ್‌ ಪ್ಯಾಕ್‌ ಮಾಡಿಕೊಂಡು, ಪಿಕ್ನಿಕ್‌ ಸ್ಥಳದಲ್ಲಿ ಜೊತೆಯಾಗಿ ಸವಿಯಿರಿ. ಜೀವನದಲ್ಲಿ ಇದು ಕೂಡ ಮರೆಯಲಾಗದ ಕ್ಷಣವಾಗುತ್ತೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *