ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಲ್ಲ – ಸಿದ್ದರಾಮಯ್ಯಗೆ ಟಾಂಗ್‌ ಕೊಟ್ರಾ ಡಿಕೆಶಿ?

Public TV
1 Min Read

– ಪಕ್ಷ ಅಧಿಕಾರಕ್ಕೆ ಬರುವವರೆಗೂ ನಿದ್ದೆ ಮಾಡಿರಲಿಲ್ಲ ಎಂದ ಡಿಸಿಎಂ

ನವದೆಹಲಿ: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಸೆಪ್ಟೆಂಬರ್‌ ಕ್ರಾಂತಿಗೂ ಮುನ್ನವೇ ನಾನಾ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಸೋನಿಯಾ ಗಾಂಧಿ ಅವರ ಅಧಿಕಾರ ತ್ಯಾಗದ ಸಂದರ್ಭವನ್ನ ಉಲ್ಲೇಖಿಸಿ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಹೈಕಮಾಂಡ್ ನಾಯಕರ ಮುಂದೆಯೇ ಪರೋಕ್ಷವಾಗಿ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದ್ದು, ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ಖಾಸಗಿ ಕಾರ್ಯಕ್ರಮ – ಬೆಂಗಳೂರಿಗೆ ಆಗಮಿಸಿದ್ದ ನಡ್ಡಾ

ಸೋನಿಯಾ ಗಾಂಧಿ (Sonia Gandhi) ಅವರಿಗೆ ಪ್ರಧಾನಿಯಾಗುವ ಅವಕಾಶ ಇತ್ತು. ರಾಷ್ಟ್ರಪತಿಗಳು ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಿದ್ದರು. ಆದ್ರೆ ಸೋನಿಯಾ ಗಾಂಧಿ ಅಧಿಕಾರ ಮುಖ್ಯವಲ್ಲ ಅಂದರು. ಒಬ್ಬ ಆರ್ಥಿಕ ತಜ್ಞ ದೇಶ ಉಳಿಸಬಹುದು ಅಂತ ಮನಮೋಹನ್ ಸಿಂಗ್‌ ಅವರನ್ನ ಪ್ರಧಾನಿಯಾಗಿ ಮಾಡಿದ್ರು. ಇದು ಸೋನಿಯ ಗಾಂಧಿ ಅವರ ರಾಜಕೀಯ ತ್ಯಾಗದ ಅಪ್ರತಿಮ ಕಾರ್ಯ ಎಂದು ಶ್ಲಾಘಿಸಿದ್ರು. ಇದನ್ನೂ ಓದಿ: ಕನ್ನಂಬಾಡಿ ಶಿಲಾನ್ಯಾಸಲ್ಲಿ ಟಿಪ್ಪು ಹೆಸರು ಬಂದಿದ್ದು ಹೇಗೆ – ಸಂಶೋಧಕರ ಚಿಕ್ಕರಂಗೇಗೌಡ ಹೇಳಿದ್ದು ಏನು?

ಇಷ್ಟು ದೊಡ್ಡ ಪ್ರಜಾಪ್ರಭುತ್ವದಲ್ಲಿ ಯಾರಾದ್ರೂ ಇಷ್ಟೊಂದು ತ್ಯಾಗ ಮಾಡಿದ್ದಾರೆಯೇ? ಇಂದು ಯಾರಾದರೂ ಸಣ್ಣ ಹುದ್ದೆಯನ್ನ ತ್ಯಾಗ ಮಾಡೋದಕ್ಕೆ ರೆಡಿ ಇದ್ದಾರಾ? ಪಂಚಾಯತ್ ಮಟ್ಟದಲ್ಲು ಸಹ ಅಧಿಕಾರ ತ್ಯಾಗ ಮಾಡಲ್ಲ. ಕೆಲ ಶಾಸಕರು ಮತ್ತು ಸಚಿವರು ಅಧಿಕಾರ ಹಂಚಿಕೊಳ್ಳಲು ಸಹ ಒಪ್ಪುವುದಿಲ್ಲ. ಅಂತಹದ್ರಲ್ಲಿ ಸೋನಿಯಾ ಗಾಂಧಿ ತ್ಯಾಗ ಮಾಡಿದರು ಎಂದು ಸ್ಮರಿಸಿದರು.

ನಾನು ತಿಹಾರ್‌ ಜೈಲಿಗೆ ಹೋಗಿ ಬಂದ ಬಳಿಕ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರು. ಅಂದಿನಿಂದ ಪಕ್ಷ ಅಧಿಕಾರಕ್ಕೆ ಬರುವವರೆಗೂ ನಿದ್ದೆ ಮಾಡಿಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೆಂಗೇರಿಯಲ್ಲಿ ಕಾಮುಕನ ವಿಕೃತಿ – ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ

Share This Article