ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘಕ್ಕೆ ಸೋಮಶೇಖರ್ ನೂತನ ಸಾರಥಿ

By
1 Min Read

ರ್ನಾಟಕ ಚಲನಚಿತ್ರ (Film) ನಿರ್ಮಾಣ ನಿರ್ವಾಹಕ ಸಂಘದ 2022 ಹಾಗೂ 2023ರ ಸಾಲಿನ ಚುನಾವಣೆ ಕಳೆದ ತಿಂಗಳ 12ರಂದು‌ ನಡೆದಿತ್ತು. ಇದೀಗ ವಿಜೇತರಾದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಸೋಮಶೇಖರ್ ಎಸ್ (Somashekhar) ಆಯ್ಕೆಯಾಗಿದ್ದಾರೆ.

ಉಳಿದಂತೆ ಉಪಾಧ್ಯಕ್ಷರಾಗಿ ಚಲುವರಾಜು.ಎಸ್ ಮತ್ತು  ರಮೇಶ್ ಬಿ.ಜಿ,  ಪ್ರಧಾನ ಕಾರ್ಯದರ್ಶಿಯಾಗಿ ನರಸಿಂಹಮೂರ್ತಿ ಬಿ.ಜಿ, ಸಹಕಾರ್ಯದರ್ಶಿ ಆಗಿ ನರಸಿಂಹ ಹೆಚ್, ನರೇಶ್ ಕುಮಾರ್ ಆರ್ ಹಾಗೂ ಶಶಿಧರ್ ಜಿ, ಖಂಜಾಚಿಯಾಗಿ ಸುನಿಲ್ ಕುಮಾರ್ ಬಿ.ಕೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

ಚುನಾವಣೆಯಲ್ಲಿ ಗೆಲುವು ಪಡೆದ ಎಲ್ಲಾ ಪದಾಧಿಕಾರಿಗಳು ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ (B.M. Harish) ಅವರನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ. ಪ್ರಕಾಶ್ ಮಧುಗಿರಿ, ಸುಧೀಂದ್ರ, ರವಿಶಂಕರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article