ಮಧುಗಿರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಸೋಮಣ್ಣ ಮನವಿ

1 Min Read

ನವದೆಹಲಿ: ತುಮಕೂರು (Tumakuru) ಜಿಲ್ಲೆಯ ಮಧುಗಿರಿ ಬೆಟ್ಟಕ್ಕೆ (Madhugiri Hills) ರೋಪ್ ವೇ (Ropeway) ನಿರ್ಮಾಣಕ್ಕೆ ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮೋದನೆ ನೀಡುವಂತೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದ್ದಾರೆ.

ಮಧುಗಿರಿ ಬೆಟ್ಟ ತುಮಕೂರು ಜಿಲ್ಲೆಯಲ್ಲಿನ ಒಂದು ವಿಶೇಷ ಪ್ರವಾಸಿ ತಾಣವಾಗಿದ್ದು, ರೋಪ್ ವೇ ನಿರ್ಮಾಣದಿಂದ ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಣೆಗೊಳಿಸಲಿದೆ. ಇದರಿಂದ ಮಧುಗಿರಿ ವಿಶೇಷ ಪ್ರವಾಸಿ ತಾಣವಾಗಲಿದ್ದು, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅವಕಾಶವಾಗಲಿದೆ ಎಂದು ಸೋಮಣ್ಣ (V Somanna) ವಿವರಿಸಿದ್ದಾರೆ. ಇದನ್ನೂ ಓದಿ: ಶಾಲಾ ವಿದ್ಯಾರ್ಥಿ ಮೇಲೆ 30 ಸೆಕೆಂಡ್‌ನಲ್ಲಿ 27 ಬಾರಿ ಚಾಕುವಿನಿಂದ ಇರಿದ ಅಪ್ರಾಪ್ತರು

ಇದೇ ವೇಳೆ ತುಮಕೂರು ಜಿಲ್ಲೆಯಲ್ಲಿನ ಸಿದ್ದರ ಬೆಟ್ಟ ಮತ್ತು ದೇವರಾಯದುರ್ಗವನ್ನು ಅಭಿವೃದ್ಧಿ-ಸ್ವದೇಶ ದರ್ಶನ ಯೋಜನೆಯಡಿ ಅನುದಾನವನ್ನು ಬಿಡುಗಡೆ ಮಾಡಲು ಈಗಾಗಲೇ ಮನವಿ ಮಾಡಿದ್ದು, ಸೂಕ್ತ ಅನುದಾವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು. ಎಲ್ಲ ಪ್ರಸ್ತಾವನೆಯನ್ನು ಪರಿಶೀಲಿಸಿ ಸೂಕ್ತ ಅನುಮೋದನೆ ನೀಡುವ ಬಗ್ಗೆ ಶೇಖಾವತ್ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕೂಡಲೇ ದೇಶ ತೊರೆಯಿರಿ – ಇರಾನ್‌ನಲ್ಲಿರೋ ಭಾರತೀಯ ಪ್ರಜೆಗಳಿಗೆ ವಾರ್ನಿಂಗ್‌

Share This Article