ಗಾಂಧಿನಗರ: ಸಿಆರ್‌ಪಿಎಫ್ ಯೋಧನೊಬ್ಬ (CRPF Soldier) ಪ್ರಿಯತಮೆಯನ್ನು ಕೊಂದು ಪೊಲೀಸರಿಗೆ ಶರಣಾದ ಘಟನೆ ಗುಜರಾತ್‌ನ (Gujarat) ಕಚ್ ಜಿಲ್ಲೆಯ ಅಂಜಾರ್‌ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಅರುಣಾಬೆನ್ ನಟುಭಾಯಿ ಜಾದವ್ (25) ಎಂದು ಗುರುತಿಸಲಾಗಿದೆ. ಅವರು ಅಂಜಾರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಆಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನೂ ಹತ್ಯೆಗೈದ ಆರೋಪಿ ದಿಲೀಪ್ ಡಾಂಗ್ಚಿಯಾ ಸಿಆರ್‌ಪಿಎಫ್ ಯೋಧನಾಗಿದ್ದು, ಇಬ್ಬರೂ ಹಲವು ವರ್ಷಗಳಿಂದ (Live In Partner) ಲಿವ್ ಇನ್‌ನಲ್ಲಿದ್ದರು. ಹತ್ಯೆಯ ಬಳಿಕ ಆರೋಪಿ ಆಕೆ ಕೆಲಸ ಮಾಡುತ್ತಿದ್ದ ಅಂಜಾರ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಇದನ್ನೂ ಓದಿ: Chitradurga | ಮದುವೆಯಾಗಲು ಹೆಣ್ಣು ಸಿಕ್ಕಿಲ್ಲವೆಂದು ಹೋಂ ಗಾರ್ಡ್ ನೇಣಿಗೆ ಶರಣು
ಶುಕ್ರವಾರ ರಾತ್ರಿ ಅರುಣಾಬೆನ್ ಮತ್ತು ಆರೋಪಿ ಮನೆಯಲ್ಲಿ ಜಗಳವಾಡಿದ್ದಾರೆ. ಈ ಸಮಯದಲ್ಲಿ ತಾಯಿಯ ಬಗ್ಗೆ ಅವಹೇಳನಕಾರಿ ಮಾತಾಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
2021ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಇಬ್ಬರು ಪರಿಚಯ ಆಗಿದ್ದರು. ಬಳಿಕ ಪರಿಚಯ ಪ್ರೇಮಕ್ಕೆ ತಿರುಗಿ, ಒಟ್ಟಿಗೆ ವಾಸವಾಗಿದ್ದರು. ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.
ದಿಲೀಪ್‌ನನ್ನು ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (CRPF) ನಿಯೋಜಿಸಲಾಗಿತ್ತು. ಇದನ್ನೂ ಓದಿ: 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿದ್ದ ಅಬ್ದುಲ್ ಕಲಾಂ ಅರೆಸ್ಟ್