ಹಸಿರು ಉಡುಗೆಯಲ್ಲಿ ಸಪ್ನಾ ಶೈನ್ – ಕೊಹ್ಲಿ ಜೊತೆ ಜಗಳವಾಡಿದ್ರೆ ಇನ್ನೂ ಫೇಮಸ್ ಆಗ್ತೀರಿ: ನೆಟ್ಟಿಗರಿಂದ ತರಾಟೆ

Public TV
2 Min Read

ಮುಂಬೈ: ಟೀಂ ಇಂಡಿಯಾ (Team India) ಕ್ರಿಕೆಟಿಗ ಪೃಥ್ವಿ ಶಾ (Prithvi Shaw) ಅವರೊಂದಿಗೆ ಸುದ್ದಿಯಲ್ಲಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಸಪ್ನಾ ಗಿಲ್ (Sapna Gill) ಸಂಡೇ ಸ್ಪೆಷಲ್‌ಗಾಗಿ ಹಸಿರು ಉಡುಗೆಯಲ್ಲಿ ಕಂಗೊಳಿಸುವ ಮನಮೋಹಕ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಾಟ್ ಲುಕ್ ನೀಡುವ ಈ ಚಿತ್ರಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನೂ ಕೆಲವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪೃಥ್ವಿ ಶಾ ಯಾರು ಅಂತಾನೇ ಗೊತ್ತಿಲ್ಲ, ಆತ ಕುಡಿದು ಬಂದಿದ್ದ – ಸಪ್ನಾ ಗಿಲ್

ಕಾಶಿ ಅಮರನಾಥ್, ಭೋಜ್‌ಪುರಿ ಅಂತಹ ಚಿತ್ರಗಳಲ್ಲಿ ಕೆಲಸ ಮಾಡಿರುವ ಸಪ್ನಾ ಗಿಲ್ ಇದೀಗ ಪೃಥ್ವಿ ಶಾ ಅವರ ಕಾರಿನ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಸಿಲುಕಿದ್ದಾರೆ. ಹೀಗಾಗಿ ಪೃಥ್ವಿ ಶಾ ಅವರನ್ನೂ ಗುರಿಯಾಗಿಸಿ ಕೆಲ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತನ್ನನ್ನ `ರಾಜನ ಅಗತ್ಯವಿಲ್ಲದ ರಾಣಿ ನಾನು’ ಎಂದು ಕರೆದುಕೊಂಡಿದ್ದಾರೆ. ಇದನ್ನೂ ಓದಿ: ಸೆಲ್ಫಿ ಕೊಡದಿದ್ದಕ್ಕೆ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ ಕಾರಿನ ಮೇಲೆ ಅಟ್ಯಾಕ್

ಇದರಿಂದ ರೊಚ್ಚಿಗೆದ್ದಿರುವ ನೆಟ್ಟಿಗರು ಸಪ್ನಾ ವಿರುದ್ಧ ತಿರುಗಿಬಿದ್ದಿದ್ದಾರೆ. ನಿಮ್ಮಂತಹ ಮಹಿಳೆಯರನ್ನು ನಾವು ದ್ವೇಷಿಸುತ್ತೇವೆ. ನೀವು ರೀಲ್ಸ್ಗಳನ್ನು ಮಾಡುತ್ತೀರಿ, ವಕೀಲರ ಶುಲ್ಕಕ್ಕಾಗಿ ಮತ್ತೆ ಮತ್ತೆ ಅದನ್ನೇ ಪೋಸ್ಟ್ ಮಾಡಿ ಹಣ ಗಳಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಬ್ಬರು `ನೀವು ವಿರಾಟ್ ಕೊಹ್ಲಿ (Virat Kohli) ಜೊತೆಗೆ ಜಗಳವಾಡಿದರೆ ಇನ್ನೂ ಫೇಮಸ್ ಆಗ್ತೀರಿ’ ಎಂದು ಕಾಮೆಂಟ್‌ನಲ್ಲೇ ಟಾಂಗ್ ಕೊಟ್ಟಿದ್ದಾರೆ.

ಸಪ್ನಾ, ಶಾ ವಿವಾದ ಏನು?
ಪೃಥ್ವಿ ಶಾ ಮುಂಬೈನ ಸಾಂತ್ರಾಕ್ರೂಜ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಸಪ್ನಾ ಗಿಲ್ ಮತ್ತು ಅವರ ತಂಡ ಪೃಥ್ವಿ ಶಾ ಅವರೊಂದಿಗೆ ಸೆಲ್ಫಿಗೆ ಒತ್ತಾಯಿಸಿದ್ದರು. ಈ ವೇಳೆ ಪೃಥ್ವಿ ಶಾ ನಿರಾಕರಿಸಿದ್ದು, ನಾನು ಸ್ನೇಹಿತರೊಂದಿಗೆ ಊಟಕ್ಕೆ ಬಂದಿದ್ದೇನೆ. ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ ಎಂದು ಹೇಳಿದ್ದರು. ಆದರೂ ಸೆಲ್ಫಿಗೆ ಒತ್ತಾಯಿಸಿದ್ದರಿಂದ ಹೋಟೆಲ್ ವ್ಯವಸ್ಥಾಪಕರಿಗೆ ಪೃಥ್ವಿ ಶಾ ತಿಳಿಸಿದ್ದರು. ಇದನ್ನೂ ಓದಿ: ಕ್ರಿಕೆಟಿಗ ಪೃಥ್ವಿ ಶಾ ಕಾರಿನ ಮೇಲೆ ದಾಳಿ – ಸಿನಿ ತಾರೆ ಸಪ್ನಾ ಗಿಲ್ ಅರೆಸ್ಟ್

Sapna gill 5

ಹೋಟೆಲ್‌ನವರು ಆ ಗುಂಪನ್ನು ಹೊರಗೆ ಕಳಿಸಿದ್ದರು. ಇದರಿಂದ ಕೆರಳಿದ ಆ ಗುಂಪು, ಅವರು ಊಟ ಮುಗಿಸಿ ಹೊರಗೆ ಬರುತ್ತಿದ್ದಂತೆ ಬೇಸ್‌ಬಾಲ್ ಬ್ಯಾಟ್‌ಗಳಿಂದ ಬಿಎಂಡಬ್ಲ್ಯೂ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದರು. ಕಾರಿನ ಹಿಂಭಾಗ, ಮುಂಭಾಗದ ಗಾಜುಗಳನ್ನು ಚಚ್ಚಿ ಪುಡಿಪುಡಿ ಮಾಡಿದ್ದರು. ಅಷ್ಟೇ ಅಲ್ಲ, ಪೃಥ್ವಿ ಸ್ನೇಹಿತನಿಂದ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ದೂರು ನೀಡಿದ್ದರು. ಘಟನೆಯ ನಂತರ ಓಶಿವಾರಾ ಪೊಲೀಸರು (Oshiwara Police) ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 148, 149, 384, 437, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿ, ಸಪ್ನಾ ಗಿಲ್ ಅವರನ್ನ ಬಂಧಿಸಿದ್ದರು. ಆಕೆ ಜಾಮೀನು ಪಡೆದು ಹೊರಬಂದ ನಂತರ ಪೃಥ್ವಿ ಶಾ ವಿರುದ್ಧವೇ ಪ್ರತಿದೂರು ದಾಖಲಿಸಿದ್ದಾರೆ. ಅಲ್ಲದೇ ಶಾ, ನನ್ನ ಖಾಸಗಿ ಭಾಗವನ್ನೂ ಮುಟ್ಟಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *