ಬಿಗ್‌ಬಾಸ್‌ನಲ್ಲಿ ʻಮಾತಿನ ಮಲ್ಲಿ ಮಲ್ಲಮ್ಮನ’ ಪವಾಡ!

Public TV
1 Min Read

ಬಿಗ್‌ಬಾಸ್ ಕನ್ನಡ ಸೀಸನ್ 12ರ ((Bigg Boss Kannada Season 12) ಸ್ಪರ್ಧಿಯಾಗಿ ಮಲ್ಲಮ್ಮ ಎಂಟ್ರಿ ಕೊಟ್ಟಿದ್ದಾರೆ. ಹೌದು, ಮೂರನೇ ಕಂಟೆಸ್ಟಂಟ್ ಆಗಿ ಉತ್ತರ ಕರ್ನಾಟಕದ ಮುಗ್ಧ ಪ್ರತಿಭೆ ಸೋಶಿಯಲ್ ಮೀಡಿಯಾ ಸ್ಟಾರ್ ಮಲ್ಲಮ್ಮ (Mallamma) ಅಖಾಡಕ್ಕಿಳಿದಿದ್ದಾರೆ.

ಮುಗ್ಧತೆ, ಫಿಲ್ಟರ್ ಇಲ್ಲದ ನೇರನುಡಿಯಿಂದ ಮಲ್ಲಮ್ಮ ಈಗಾಗ್ಲೇ ಇನ್‌ಸ್ಟಾಗ್ರಾಂನಲ್ಲಿ ಮಿಂಚುತ್ತಿರುವ ಪ್ರತಿಭೆ. ಹಾಸ್ಯಪ್ರಜ್ಞೆ, ಕೌಂಟರ್ ಡೈಲಾಗ್ ಹೊಡೆಯೋದು ಮಲ್ಲಮ್ಮನ ಸ್ಟೈಲ್‌. ಇದೀಗ ದೊಡ್ಡ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಪಾದಾರ್ಪಣೆ ಮಾಡಿದ್ದಾರೆ. ಸೆಲೆಬ್ರಿಟಿಗಳ ಜೊತೆ ಈ ಸರಳ ಹಳ್ಳಿಹೆಣ್ಣುಮಗಳು ಮಲ್ಲಮ್ಮ ಹೇಗೆ ಸರ್ವೈವ್ ಆಗ್ತಾರೆ ಅನ್ನೋ ಪ್ರಶ್ನೆ ಮೂಡಿದೆ.ಇದನ್ನೂ ಓದಿ: ಬಿಗ್‌ಬಾಸ್‌ಗೆ ಯೂಟ್ಯೂಬ್ ಸ್ಟಾರ್ ರಕ್ಷಿತಾ ಶೆಟ್ಟಿ ಎಂಟ್ರಿ|

ಈಗಾಗ್ಲೇ ಮಲ್ಲಮ್ಮ ಬಿಗ್‌ಹೌಸ್‌ಗೆ ಎಂಟ್ರಿ ಕೊಟ್ಟಿರುವ ಪ್ರೋಮೋ ರಿಲೀಸ್ ಆಗಿದೆ. ಅಲ್ಲಿ ವೇದಿಕೆ ಮೇಲೆ ಮಲ್ಲಮ್ಮನ ಮಾತಿಗೆ ಸುದೀಪ್ ಬಿದ್ದು ಬಿದ್ದು ನಕ್ಕಿದ್ದಾರೆ. ಮಲ್ಲಮ್ಮನ ಎಂಟ್ರಿ ಬಿಗ್‌ಹೌಸ್‌ನಲ್ಲಿ ಭಾರೀ ಹಾವಳಿ ಎಬ್ಬಿಸೋದ್ರಲ್ಲಿ ಡೌಟಿಲ್ಲ. ಇನ್ನು ಬಿಗ್‌ಬಾಸ್‌ನಲ್ಲಿ ಏನ್ಮಾಡ್ಬೇಕು ಎಂದು ಸುದೀಪ್ ಪ್ರಶ್ನೆ ಕೇಳ್ದಾಗ ಬಿಗ್‌ಬಾಸ್ ಮನೆಗೆ ಹೋಗಿ ಜಗಳ ಮಾಡ್ಬೇಕು ಎಂದು ಮಲ್ಲಮ್ಮ ಉತ್ತರ ಕೊಟ್ಟಿದ್ದಾರೆ.

ಉತ್ತರ ಕರ್ನಾಟಕದ ಈ ಮುಗ್ಧ ಗಟ್ಟಿಗಿತ್ತಿ ಬಿಗ್‌ಹೌಸ್ ಇತರ ಸ್ಪರ್ಧಿಗಳಿಗೆ ಕ್ವಾಟ್ಲೆ ಕೊಡ್ತಾರಾ? ಅಥವಾ ಸೆಲೆಬ್ರಿಟಿಗಳ ಥಳುಕು ಬಳುಕಿನ ಆಟಕ್ಕೆ ಇವರೇ ಕ್ವಾಟ್ಲೆ ಅನುಭವಿಸುತ್ತಾರಾ? ಅನ್ನೋದನ್ನ ನೋಡುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಒಟ್ನಲ್ಲಿ ಈ ಬಾರಿಯ ಬಿಗ್‌ಬಾಸ್‌ನ ಹೈಲೈಟ್ ಕಂಟೆಸ್ಟಂಟ್ ಮಲ್ಲಮ್ಮ.ಇದನ್ನೂ ಓದಿ: ಬಿಗ್‌ಬಾಸ್ ಸ್ಪರ್ಧಿಯಾಗಿ ಕಿರುತೆರೆ ನಟಿ ಮಂಜು ಭಾಷಿಣಿ

Share This Article