ಶ್ರೀರಾಮನ ಜಪಿಸಿ ಎಂದು ಕರೆ ನೀಡಿದ ಗಾಯಕಿ ಚಿತ್ರಾಗೆ ಭಾರೀ ಟೀಕೆ

Public TV
1 Min Read

ಯೋಧ್ಯಾ ಶ್ರೀರಾಮ ಮಂದಿರ (Shreerama Mandir) ಉದ್ಘಾಟನೆಯನ್ನು ನೋಡಲು ಇಡೀ ದೇಶವೇ ಎದುರು ನೋಡುತ್ತಿದೆ. ಈ ವೇಳೆ, ಜ.22ರಂದು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಮ ನಾಮ ಭಜನೆ ಮಾಡಿ ಎಂದು ವಿಡಿಯೋ ಸಂದೇಶ ನೀಡಿದ್ದ ಖ್ಯಾತ ಹಿನ್ನೆಲೆ ಗಾಯಕಿ, ರಾಷ್ಟ್ರ ಪ್ರಶಸ್ತಿ ವಿಜೇತರು ಕೆ.ಎಸ್. ಚಿತ್ರಾ (K.s Chithra) ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಪರ ಮತ್ತು ವಿರೋಧದ ಚರ್ಚೆ ಶುರುವಾಗಿದೆ.

ಗಾಯಕಿ ಚಿತ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪುಟ್ಟದೊಂದು ವಿಡಿಯೋ ಅಪ್‌ಡೇಟ್ ಮಾಡಿದ್ದರು. ಈ ವಿಡಿಯೋದಲ್ಲಿ ಚಿತ್ರಾ ಅವರು ಜನವರಿ 22ರಂದು ಮಧ್ಯಾಹ್ನ 12:20ಕ್ಕೆ ಎಲ್ಲರೂ ಶ್ರೀರಾಮ, ಜಯ ರಾಮ, ಜಯ ಜಯ ರಾಮ ಎಂಬ ಮಂತ್ರವನ್ನು ಭಜನೆ ಮಾಡುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ:‘ಮಾಫಿಯಾ’ ಚಿತ್ರತಂಡದಿಂದ ಮತ್ತೊಂದು ಪೋಸ್ಟರ್

ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಲ್ಲಿ ಎಲ್ಲರೂ ರಾಮ ನಾಮ ಭಜಿಸಿ ಧ್ಯಾನ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವಂತೆ ಕೋರಿದ್ದರು. ಜೊತೆಗೆ 5 ದೀಪಗಳನ್ನು ಹಚ್ಚಿಡಬೇಕು ಎಂದು ಗಾಯಕಿ ಚಿತ್ರಾ ಅವರು ಕರೆ ನೀಡಿದ್ದರು. ಈ ವಿಡಿಯೋ ಇದೀಗ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.

ಈ ವಿಡಿಯೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಗಾಯಕಿ ಚಿತ್ರಾ ವಿರುದ್ಧ ಕೆಲವರು ಟೀಕೆ ಮಾಡಿದ್ದಾರೆ. ನೀವು ರಾಜಕೀಯವಾಗಿ ಯಾರ ಪರ ಎಂದೆಲ್ಲಾ ಗಾಯಕಿ ಚಿತ್ರಾಗೆ ಕ್ಲಾಸ್ ತೆಗೆದುಕೊಂಡಿದ್ರೆ, ಅವರಿಗೆ ತಮ್ಮ ನಿಲುವನ್ನು ಮಂಡಿಸುವ ಹಕ್ಕಿದೆ ಎಂದು ಹಲವರು ಚಿತ್ರಾ ಪರ ಬ್ಯಾಟ್ ಬೀಸಿದ್ದಾರೆ.

Share This Article