ಬಿಗ್ ಬಾಸ್‌ನಿಂದ ಔಟ್ ಆದ್ಮೇಲೆ ಹೆಚ್ಚಾಯ್ತು ಸ್ನೇಹಿತ್‌ಗೆ ಫಾಲೋವರ್ಸ್

Public TV
1 Min Read

ದೊಡ್ಮನೆ ಆಟಕ್ಕೆ ‘ನಮ್ಮನೆ ಯುವರಾಣಿ’ (Nammane Yuvarani) ಸೀರಿಯಲ್ ಹೀರೋ ಸ್ನೇಹಿತ್ ಗೌಡ (Snehith Gowda) 9ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿರೋ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಲೇಟೆಸ್ಟ್ ಅಪ್‌ಡೇಟ್ ಏನಂದರೆ, ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ್ಮೇಲೆ ಸ್ನೇಹಿತ್‌ಗೆ ಫಾಲೋವರ್ಸ್ ಹೆಚ್ಚಾಗಿದೆ.

‘ನಮ್ಮನೆ ಯುವರಾಣಿ’ ಹೀರೋ ಆಗಿ ಗಮನ ಸೆಳೆದಿದ್ದ ಸ್ನೇಹಿತ್, ನಮ್ರತಾ ದಿಲ್ ಕದಿಯೋಕೆ ಹರಸಾಹಸ ಮಾಡಿದ್ದರು. ವಿನಯ್ ಗೌಡ ಟೀಮ್‌ನಲ್ಲಿ ಒಬ್ಬರಾಗಿದ್ದರು. ಇನ್ನೂ ವಿಶೇಷ ಅಂದರೆ ಸ್ನೇಹಿತ್ ಎಲಿಮಿನೇಷನ್ ಮುನ್ನ ಅವರಿಗೆ 59 ಸಾವಿರ ಫಾಲೋವರ್ಸ್ ಹೊಂದಿದ್ದರು. ಈಗ 80 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇದನ್ನೂ ಓದಿ:ಯುವನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತ

ಇಲ್ಲಿ ಎಲ್ಲವೂ ರಿವರ್ಸ್ ಆಗಿದೆ. ಯಾವುದೇ ಸ್ಪರ್ಧಿ ಬಿಗ್ ಬಾಸ್ ಮನೆಗೆ (Bigg Boss Kannada 10) ಹೋದಾಗ ಫಾಲೋವರ್ಸ್ ಹೆಚ್ಚಾಗೋದು ಕಾಮನ್. ಆದರೆ ಸ್ನೇಹಿತ್ ವಿಚಾರದಲ್ಲಿ ಎಲ್ಲಾ ಉಲ್ಟಾ ಆಗಿದೆ. ದೊಡ್ಮನೆ ಆಟಕ್ಕೆ ಅಂತ್ಯ ಬಿದ್ದ ಮೇಲೆ ಫಾಲೋವರ್ಸ್ ಜಾಸ್ತಿ ಆಗಿದ್ದಾರೆ. 80 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಗಳಿಸಿದ್ದಾರೆ.

ಇನ್ನೂ ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ನಮ್ರತಾ ಮೇಲಿನ ಪ್ರೀತಿಯನ್ನ ಸ್ನೇಹಿತ್ ವ್ಯಕ್ತಪಡಿಸಿದ್ದರು. ದೊಡ್ಮನೆಯಿಂದ ಬಂದಮೇಲೂ ಆಟಕ್ಕಾಗಿ ಅವರ ಹೆಸರನ್ನ ಬಳಸಿಕೊಂಡಿಲ್ಲ. ಇದು ಗಿಮಿಕ್ ಅಲ್ಲ, ನಿಜವಾಗಿಯೂ ನಮ್ರತಾ ಮೇಲೆ ಪ್ರೀತಿಯಿದೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ಶೋ ಮುಗಿದ ಮೇಲೆ ಸ್ನೇಹಿತ್ ಲವ್‌ಗೆ ನಮ್ರತಾ ಅಸ್ತು ಎನ್ನುತ್ತಾರಾ ಕಾದುನೋಡಬೇಕಿದೆ.

Share This Article