ಬಿಗ್ ಬಾಸ್ ಮನೆಯಿಂದ ಸ್ನೇಹಿತ್ ಔಟ್

Public TV
1 Min Read

ದೊಡ್ಮನೆ ಆಟ ಇದೀಗ 60 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಶೋನಿಂದ (BiggBoss) 9ನೇ ವಾರ ಸ್ನೇಹಿತ್ ಔಟ್ ಆಗಿದ್ದಾರೆ. ನೀತು ಬಳಿಕ ಸ್ನೇಹಿತ್  (Snehit) ದೊಡ್ಮನೆ ಆಟಕ್ಕೆ ಗುಡ್ ಬೈ ಹೇಳಿದ್ದಾರೆ.

ನಮ್ರತಾ ಜೊತೆ ಸುತ್ತಾಡಿದ್ದು, ಬಿಟ್ಟರೆ ಸ್ನೇಹಿತ್ ಆಟದ ವಿಚಾರದಲ್ಲಿ ಬಹಳಷ್ಟು ಕಡೆ ಎಡವಿದ್ದರು. ದುಪ್ಪಟು ಅಧಿಕಾರ ಗಿಟ್ಟಿಸಿಕೊಂಡು ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಈ ವಾರದ ಅನಾಹುತಕ್ಕೆ ಮೂಲ ಕಾರಣರಾದರು. ಸ್ನೇಹಿತ್ ನಿರ್ಧಾರದಿಂದ ಕ್ಯಾಪ್ಟನ್ ಆಗಿ ಮುಂದೆ ಬರಬೇಕಿದ್ದ ಕಡೆಯಲ್ಲಾ ಎಡವಿದ್ದೇ ಜಾಸ್ತಿ. ಹಾಗಾಗಿ ಗಂಧರ್ವರು- ರಾಕ್ಷಸರು ಜಟಾಪಟಿ ಜಾಸ್ತಿಯಾಗಿತ್ತು.

ಡ್ರೋನ್ ಪ್ರತಾಪ್ (Drne Pratap), ಸಂಗೀತಾ (Sangeetha) ಕಣ್ಣಿಗೆ ಆದ ಪೆಟ್ಟಿಗೆ ಪರೋಕ್ಷವಾಗಿ ಸ್ನೇಹಿತ್ ಕಾರಣರಾದರು. ಟಾಸ್ಕ್ ನಿಲ್ಲಿಸುವ ಅಧಿಕಾರ ಕೈಯಲ್ಲಿದ್ರೂ, ಮಾತನಾಡುವ ಗೋಜಿಗೆ ಸ್ನೇಹಿತ್ ಹೋಗಲಿಲ್ಲ. ಸ್ನೇಹಿತ್ ನಿರ್ಧಾರಕ್ಕೆ ಪ್ರೇಕ್ಷಕರು ಕೂಡ ಅಸಮಾಧಾನ ಹೊರಹಾಕಿದ್ರು. ಈ ಎಲ್ಲಾ ಕಾರಣಗಳಿಂದ ಸ್ನೇಹಿತ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಮದುವೆ ಪ್ರಪೋಸಲ್‌ಗೆ ನಮ್ರತಾ ಗ್ರೀನ್‌ ಸಿಗ್ನಲ್‌- ನಾಚಿ ನೀರಾದ ಸ್ನೇಹಿತ್

ಕಳೆದ ವಾರ ಸ್ನೇಹಿತ್ – ಮೈಕಲ್ ಬಾಟಮ್ ಎರಡರಲ್ಲಿ ಇದ್ರೂ, ಸ್ನೇಹಿತ್ ಆಟ- ಮೈಕಲ್ ಕನ್ನಡ ಮೆಚ್ಚಿ ಸುದೀಪ್ (Kichcha Sudeep) ತಮ್ಮ ಪವರ್ ಬಳಸಿ ಸೇವ್ ಮಾಡಿದ್ದರು. ಸ್ನೇಹಿತ್ ನಡೆಯಿಂದಲೇ ಇದೀಗ ಬಿಗ್ ಬಾಸ್ ಮನೆಯಿಂದ ಕಿಕ್ ಔಟ್ ಆಗಿದ್ದಾರೆ. ವಿನಯ್ ಗೌಡ ಮತ್ತು ನಮೃತಾ ಗೌಡ ಜೊತೆಯಷ್ಟೇ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಂಡು, ಕ್ಯಾಪ್ಟನ್ ಆಗಿದ್ರೂ ಅವರ ಪರವಾಗೇ ಆಡುತ್ತಿದ್ದ ಸ್ನೇಹಿತ್ ಎಲಿಮಿನೇಟ್ ಆಗಿದ್ದಾರೆ.

ನಮ್ರತಾ ಗೌಡ ಜೊತೆ ಲವ್ವಿ ಡವ್ವಿ ಅಂತ ಹಿಂದೆ ಬೀಳತ್ತಿದ್ದ ಸ್ನೇಹಿತ್ ಮುಂದಿನ ನಡೆಯೇನು? ಬಿಗ್ ಬಾಸ್ ಆಟದ ನಂತರ ಮುಂದಿನ ದಿನಗಳಲ್ಲಿ ನಮ್ರತಾ ಮೆಚ್ಚಿ ಸ್ನೇಹಿತ್ ಒಪ್ಪಿಕೊಳ್ತಾರಾ ಕಾಯಬೇಕಿದೆ. ಸದ್ಯ ಸ್ನೇಹಿತ್ ಎಲಿಮಿನೇಷನ್ ನಿಂದ ವಿನಯ್ & ಟೀಮ್ ಶಾಕ್ ಆಗಿದೆ.

Share This Article