ಅಧಿಕಾರಿಯೇ ಮನೆಗೆ ತೆರಳಿ ಪತ್ನಿಯನ್ನು ಒಪ್ಪಿಸಿದ್ದೇನೆ ಎಂದರೆ ಸಿಎಂ ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ: ಸ್ನೇಹಮಯಿ ಕೃಷ್ಣ

Public TV
2 Min Read

ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಕುಟುಂಬ ಪಡೆದ 14 ಸೈಟ್‌ಗಳ ವಿಚಾರಣೆ ಮೈಸೂರು ಲೋಕಾಯುಕ್ತದಲ್ಲಿ ಚುರುಕಾಗಿ ಸಾಗಿದೆ. ಇಂದು (ನ.19) ವಿಚಾರಣೆಗೆ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ (DB Natesh) ಹಾಜರಾಗಲಿದ್ದಾರೆ.

ನಟೇಶ್ ನೂರಾರು ಮಂಜುರಾತಿಗಳ ಪತ್ರಗಳನ್ನು ಹೊರಡಿಸುವಂತೆ ಆದೇಶಿಸಿದ್ದಾರೆ. ಅದರಲ್ಲಿ 2 ಅಂಶಗಳನ್ನು ಗಮನಿಸಿದಾಗ, 2015ರ ಸರ್ಕಾರದ ಅಧಿಸೂಚನೆಯ ಪ್ರಕಾರ 50:50 ಅನುಪಾತದಲ್ಲಿ ಸೈಟ್ ಹಂಚಿಕೆಯಾಗಬೇಕು. ಆದರೆ ಅದು ಅನ್ವಯವಾಗಿಲ್ಲ ಮತ್ತು ನ.20 2020ರಲ್ಲಿ ಮುಡಾದಲ್ಲಿ (MUDA) ಸಭೆಯಲ್ಲಿ ನಿರ್ಣಯ ಆಗಬೇಕಿತ್ತು. ಆದರೆ ಸಭೆಯಲ್ಲಿ ಆ ನಿರ್ಣಯ ಕೈಗೊಂಡಿಲ್ಲ. ಕೇವಲ ಚರ್ಚೆ ಮಾಡುವುದಾಗಿ ತಿಳಿಸಲಾಗಿದೆ. ಇದನ್ನು ಗಮನಿಸಿ ದಾಖಲೆ ಸೃಷ್ಟಿಸುವುದು ತಪ್ಪು. ಇದರಿಂದ ದಾಖಲೆ ಸೃಷ್ಟಿಸಿರುವುದರಿಂದ ಅದು ಸುಳ್ಳು ದಾಖಲೆಯಾಗುತ್ತದೆ. ಇದು ಗಂಭೀರ ವಿಷಯವಾಗಿದ್ದು, ಮುಡಾದಲ್ಲಿ ನಟೇಶ್ ಹಾಗೂ ದಿನೇಶ್ ತುಂಬಾ ಪ್ರಮುಖ ಪಾತ್ರವಹಿಸಿದ್ದಾರೆ. ಅವರನ್ನು ಬಂಧಿಸಬೇಕು, ಆದರೆ ಲೋಕಾಯುಕ್ತ ವಿಚಾರಣೆಯ ಬಳಿಕ ಏನಾಗುತ್ತದೆ ಎಂದು ಕಾದುನೋಡಬೇಕು ಎಂದರು.ಇದನ್ನೂ ಓದಿ: ಮಸ್ಕ್‌ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ

ನಟೇಶ್ 14 ನಿವೇಶನಗಳನ್ನು ಮಂಜುರಾತಿ ಮಾಡಿದ್ದಾರೆ. ಜೊತೆಗೆ ಅವರು ಸಾಮಾಜಿಕ ಮಾಧ್ಯಮದಲ್ಲಿ ನಿವೇಶನ ಕುರಿತು ಖುದ್ದು ತಾವೇ ಮನೆಗೆ ಹೋಗಿ ಸಿಎಂ ಪತ್ನಿಯನ್ನು ಪರಿಹಾರ ಪಡೆಯಲು ಒಪ್ಪಿಸಿದ್ದೇನೆ ಎಂದು ಹೇಳಿದ್ದರು. ಒಬ್ಬ ಅಧಿಕಾರಿ ಮನೆಗೆ ತೆರಳಿ ಮಾತನಾಡಿದ್ದಾರೆ ಎಂದರೆ ಅದರಲ್ಲಿ ಸಿಎಂ ಪ್ರಭಾವ ಹೇಗಿದೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.

ನಟೇಶ್ ಅವರ ಹೇಳಿಕೆ ಇಡೀ ಪ್ರಕರಣದ ಪ್ರಮುಖ ತಿರುವು, ವಿಚಾರಣೆ ಸರಿಯಾಗಿ ನಡೆದರೆ ಸಿದ್ದರಾಮಯ್ಯ ಪ್ರಭಾವ ಸಾಬೀತಾಗುತ್ತದೆ. ಇಷ್ಟೊಂದು ಆಸಕ್ತಿ ಒಬ್ಬ ಅಧಿಕಾರಿಗೆ ಯಾಕೆ ಎಂಬುದು ವಿಚಾರಣೆ ಆದರೆ ಸತ್ಯ ಹೊರ ಬರುತ್ತದೆ ಎಂದು ಹೇಳಿದ್ದಾರೆ.

ಸ್ವತಃ ಅರ್ಜಿದಾರರ ಮನೆಗೆ ತೆರಳಿ ಮಾತನಾಡಿರುವುದು ಗಂಭೀರ ವಿಷಯ ಹಾಗೂ ಇದು ಪ್ರಮುಖ ಸಾಕ್ಷಿಯಾಗುತ್ತದೆ. ಇಂದಿನ ವಿಚಾರಣೆ ಮುಡಾದಲ್ಲಿ ಪ್ರಮುಖ ಘಟ್ಟವಾಗಿದೆ. ಇಂದು ತನಿಖಾಧಿಕಾರಿಗಳು, ಮಂಜೂರಾತಿ ಪತ್ರದಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಲು ತಿಳಿಸಿದ್ದಾರಾ? ಹಾಗೂ ಮುಡಾದಲ್ಲಿ ಸಭೆಯಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ಮಾಡಲು ನಿರ್ಣಯ ಆಗಿದ್ಯಾ? ಎನ್ನುವ ಕುರಿತು ಸ್ಪಷ್ಟನೆ ನೀಡಬೇಕು ಎಂದರು.ಇದನ್ನೂ ಓದಿ: ಸೋಮವಾರ ಸಂಜೆ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ – ದೃಢಪಡಿಸಿದ ಪರಮೇಶ್ವರ್

Share This Article