ಚಾಮುಂಡಿ ದೇವಿಗೆ ಕೊಟ್ಟ ಹರಕೆ ಸೀರೆ ಕಾಳಸಂತೆಯಲ್ಲಿ ಮಾರಾಟ ಆರೋಪ – ಸ್ನೇಹಮಯಿ ಕಷ್ಣ ದೂರು

Public TV
1 Min Read

ಮೈಸೂರು: ಚಾಮುಂಡಿ ತಾಯಿಗೆ (Chamundeshwari) ಹರಕೆಯಾಗಿ ಕೊಟ್ಟ ಸೀರೆಗಳು ಕಾಳಸಂತೆಯಲ್ಲಿ ಮಾರಾಟ ಆಗ್ತಿದ್ಯಾ ಅನ್ನೋ ಅನುಮಾನ ಮೂಡಿಸಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ (Snehamayi Krishna) ಬಿಡುಗಡೆ ಮಾಡಿರುವ ವೀಡಿಯೋ ಈ ಅನುಮಾನಕ್ಕೆ ಪುಷ್ಟಿ ನೀಡಿದೆ.

ಚಾಮುಂಡಿ ದೇವಸ್ಥಾನದಲ್ಲಿನ ಸೀರೆಗಳನ್ನು ಅಲ್ಲಿನ ನೌಕರ ದೊಡ್ಡ ಮೂಟೆ ಕಟ್ಟಿ ದೇವಸ್ಥಾನದ ಕಾರ್ಯದರ್ಶಿ ರೂಪ ಕಾರಿನಲ್ಲಿ ಇಡುತ್ತಿರುವ ವೀಡಿಯೋವನ್ನು ಸ್ನೇಹಮಹಿ ಕೃಷ್ಣ ಬಿಡುಗಡೆ ಮಾಡಿದ್ದಾರೆ. ಹಾಗೇ ವೀಡಿಯೋ ಸಮೇತ ದೇವಸ್ಥಾನದ ಕಾರ್ಯದರ್ಶಿ ರೂಪ ಮೇಲೆ ಮೈಸೂರಿನ ಕೆ.ಆರ್. ಪೊಲೀಸ್ ಠಾಣೆಗೆ (KR Police Station) ದೂರು ಕೂಡ ನೀಡಿದ್ದಾರೆ.ಇದನ್ನೂ ಓದಿ: ದರ್ಶನ್‌ ಜಾಮೀನು ಭವಿಷ್ಯ ಇಂದು – ಜೈಲೋ ಬೇಲೋ?

ಚಾಮುಂಡಿ ದೇವಸ್ಥಾನದ ಕಾರ್ಯದರ್ಶಿ ರೂಪ ಮೇಲೆಯೇ ಈಗಾಗಲೇ ಹತ್ತು ಹಲವು ಆರೋಪಗಳು ಕೇಳಿ ಬಂದಿವೆ. ಹರಕೆ ರೂಪದಲ್ಲಿ ಚಾಮುಂಡಿ ತಾಯಿಗೆ ಸೀರೆ ಕೊಡುವಾಗ ಸೀರೆ ಖರೀದಿಯ ಬಿಲ್, ಸೀರೆ ಮೇಲಿನ ಸ್ಟೀಕರ್ ಎಲ್ಲವೂ ಇರಬೇಕು ಎಂಬುದು ಕಡ್ಡಾಯ. ಇದೇ ಕಡ್ಡಾಯದ ನಿಯಮವೇ ದೇವಸ್ಥಾನದ ಅಧಿಕಾರಿಗಳಿಗೆ ವರದಾನವಾಗಿದೆ. ಭಕ್ತರು ಕೊಟ್ಟ ಸ್ಟೀಕರ್ ಸಮೇತ ಸೀರೆಗಳನ್ನು ಸುಲಭವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಮೊದಲು ತಾಯಿ ಚಾಮುಂಡಿಗೆ ಉಡಿಸಿದ ಎಲ್ಲಾ ಸೀರೆಗಳನ್ನು ದೇವಸ್ಥಾನದಿಂದಲೇ ಹರಾಜು ಹಾಕಲಾಗುತ್ತಿತ್ತು. ದಿಢೀರನೆ ಸೀರೆ ಹರಾಜು ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಸೀರೆಗಳು ಯಾರ ಮನೆ ಸೇರುತ್ತಿವೆ ಎಂಬ ಲೆಕ್ಕವೇ ದೇವಸ್ಥಾನದಲ್ಲಿ ಇಲ್ಲ. ಇನ್ನೂ ಭಕ್ತರು ಕೊಟ್ಟ ಸೀರೆಗಳಿಗೆ ದೇವಸ್ಥಾನದಲ್ಲಿ ಲೆಕ್ಕವೇ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಚಾಮುಂಡಿ ಬೆಟ್ಟದ ಕಾರ್ಯದರ್ಶಿ ರೂಪ ಮೇಲೆ ಸಾಕಷ್ಟು ಆರೋಪ ಕೇಳಿಬಂದಿದೆ.ಇದನ್ನೂ ಓದಿ: ರಾಜ್ಯ ಹವಾಮಾನ ವರದಿ 13-12-2024

Share This Article