ಸ್ಮೃತಿ ಮಂಧಾನಗೆ ಐಸಿಸಿ ವಾರ್ಷಿಕ ಅತ್ಯುತ್ತಮ ಮಹಿಳಾ ಕ್ರಿಕೆಟರ್ ಪ್ರಶಸ್ತಿ

Public TV
2 Min Read

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು 2021ರ ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗರಿಗೆ ನೀಡುವ ರಾಚೆಲ್ ಹೇಹೋ ಫ್ಲಿಂಟ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಈ ವಿಷಯವನ್ನು ಇಂದು ಐಸಿಸಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ಸ್ಮೃತಿ ಮಂಧಾನ ಕಳೆದ ವರ್ಷ ಒಟ್ಟು 22 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇಷ್ಟು ಪಂದ್ಯಗಳಲ್ಲಿ ಸ್ಮೃತಿ 38.86 ಸರಾಸರಿಯಲ್ಲಿ 855 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರು ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಬಾರಿಸಿದ್ದರು.

ಇದರಿಂದಾಗಿ ಐಸಿಸಿ ವಾರ್ಷಿಕ ಅತ್ಯುತ್ತಮ ಮಹಿಳಾ ಕ್ರಿಕೆಟರ್ ಅವರನ್ನು ಆಯ್ಕೆ ಮಾಡಿದೆ. ಮಂಧಾನ ಭಾರತದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ವರ್ಷದಿಂದ ವರ್ಷಕ್ಕೆ ತನ್ನ ಪ್ರದರ್ಶನದೊಂದಿಗೆ ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ.

2021ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಮಿಶ್ರ ಪ್ರದರ್ಶನವನ್ನು ನೀಡಿತ್ತು. ಆದರೆ ಸ್ಮೃತಿ ಮಂಧಾನ ವರ್ಷವಿಡೀ ತನ್ನ ಬ್ಯಾಟ್ ಕೌಶಲ್ಯವನ್ನು ತೋರಿಸಿದ್ದರು.

ಭಾರತ ಕೂಡ 2021ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದು, ಮಂಧಾನ ಇದರಲ್ಲಿ ಅಮೋಘ ಪ್ರದರ್ಶನವನ್ನು ತೋರಿದ್ದಾರೆ. ಮೊದಲ ಇನಿಂಗ್ಸ್‍ನಲ್ಲಿ 78 ರನ್ ಗಳಿಸಿದ್ದರು. ಈ ಪಂದ್ಯ ಡ್ರಾ ಆಗಿತ್ತು. ಏಕದಿನ ಸರಣಿಯಲ್ಲಿ ಭಾರತ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿತ್ತು ಮತ್ತು ಇದರಲ್ಲಿ ಮಂಧಾನ 49 ರನ್ ಗಳಿಸಿದ್ದರು. ಟಿ20 ಸರಣಿಯಲ್ಲಿ ಅವರ 15 ಎಸೆತಗಳ 29 ಹಾಗೂ ಅರ್ಧಶತಕವು ವ್ಯರ್ಥವಾಯಿತು. ಸರಣಿಯನ್ನು 2-1 ರಲ್ಲಿ ಕಳೆದುಕೊಂಡಿತ್ತು. ಇದನ್ನೂ ಓದಿ: ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

ಭಾರತವು ದಕ್ಷಿಣ ಆಫ್ರಿಕಾಕ್ಕೆ ಆತಿಥ್ಯ ವಹಿಸಿತ್ತು. ಇದರಲ್ಲಿ ಎಂಟು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾರತ ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಎರಡೂ ಪಂದ್ಯಗಳಲ್ಲಿ ಮಂಧಾನ ಮಹತ್ವದ ಪಾತ್ರ ವಹಿಸಿದ್ದರು. ಎರಡನೇ ಏಕ ದಿನ ಪಂದ್ಯದಲ್ಲಿ, ಭಾರತ 158 ರನ್‍ಗಳನ್ನು ಬೆನ್ನಟ್ಟಿತು ಮತ್ತು ಮಂಧಾನ ಅಜೇಯ 80ರನ್ ಗಳಿಸಿದರು. ಅವರು ಸರಣಿಯ ಕೊನೆಯ ಟಿ20 ಪಂದ್ಯದಲ್ಲಿ ಅಜೇಯ 48 ರನ್ ಗಳಿಸಿದರು. ಇದನ್ನೂ ಓದಿ: ಫಲ ಕೊಡದ ಚಹರ್ ಚಮತ್ಕಾರ – ಟೀಂ ಇಂಡಿಯಾಗೆ ವೈಟ್‍ವಾಶ್‌ ಮುಖಭಂಗ

Share This Article
Leave a Comment

Leave a Reply

Your email address will not be published. Required fields are marked *