ಮುಂಬೈ: ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ನಾಳೆ (ನ.23) ಮ್ಯೂಸಿಕ್ ಕಂಪೋಸರ್ ಪಾಲಶ್ ಮುಚ್ಚಲ್ (Palash Muchhal) ಜೊತೆ ಸಪ್ತಪದಿ ತುಳಿಯಲಿದ್ದಾರೆ.

ಈಗಾಗಲೇ ವಿವಾಹ ಸಿದ್ಧತೆಗಳು ಆರಂಭವಾಗಿದ್ದು, ಸ್ಮೃತಿ ಮಂಧಾನ ಹಾಗೂ ಪಾಲಶ್ ಮುಚ್ಚಲ್ ಅವರ ಹಳದಿ ಶಾಸ್ತ್ರ , ಮೆಹೆಂದಿ ಶಾಸ್ತ್ರದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಾಳೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾದ ಸ್ಮೃತಿ ಮಂದಾನ – ಹಳದಿ ಶಾಸ್ತ್ರದಲ್ಲಿ ಭರ್ಜರಿ ಡಾನ್ಸ್, ಸಾಥ್ ಕೊಟ್ಟ ಟೀಂ ಇಂಡಿಯಾ ಸ್ಟಾರ್ಸ್!
ಇನ್ನೂ ಶುಕ್ರವಾರ (ನ.21) ನಡೆದ ಹಳದಿ ಶಾಸ್ತ್ರದಲ್ಲಿ ಶಫಾಲಿ ವರ್ಮಾ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್ ಮತ್ತು ಜೆಮಿಮಾ ರೊಡ್ರಿಗಸ್ ಸೇರಿದಂತೆ ಹಲವು ಆಟಗಾರ್ತಿಯರು ಭಾಗಿಯಾಗಿದ್ದರು. ಹಳದಿ ಉಡುಪಿನಲ್ಲಿ ಡ್ಯಾನ್ಸ್ ಮಾಡುತ್ತಾ, ಕಾರ್ಯಕ್ರಮವನ್ನು ಸಂಭ್ರಮಿಸಿರುವುದು ವಿಡಿಯೋದಲ್ಲಿ ವೈರಲ್ ಆಗಿದೆ.

ಇತ್ತೀಚಿಗಷ್ಟೇ ಸ್ಮೃತಿ ಮಂಧಾನಗೆ ಪಾಲಶ್ ಅವರು ಪ್ರಪೋಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಭಾರತ ಮಹಿಳಾ ತಂಡ ಮೊನ್ನೆ ಮೊನ್ನೆಯಷ್ಟೇ ವಿಶ್ವಕಪ್ ಫೈನಲ್ ಪಂದ್ಯ ಗೆದ್ದ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪ್ರಪೋಸ್ ಮಾಡಿದ್ದಾರೆ. ಪಾಲಶ್ ಅವರು ಸೂಟ್ ತೊಟ್ಟಿದ್ದರೆ ಸ್ಮೃತಿ ಮಂಧಾನ ಕಡು ಕೆಂಪು ಬಣ್ಣದ ಗೌನ್ ತೊಟ್ಟಿದ್ದರು. ಈ ವೇಳೆ ಪಾಲಶ್ ಮಂಡಿಯೂರಿ ಗುಲಾಬಿಗಳ ಪುಷ್ಪಗುಚ್ಛ ಹಾಗೂ ವಜ್ರದ ಉಂಗುರ ನೀಡಿ ಪ್ರಪೋಸ್ ಮಾಡಿದ್ದರು.ಇದನ್ನೂ ಓದಿ: ಮದುವೆ ದಿನ ಮೇಕಪ್ ಮಾಡಿಸಿಕೊಳ್ಳಲು ತೆರಳುತ್ತಿದ್ದ ವಧುವಿಗೆ ಅಪಘಾತ – ಐಸಿಯುನಲ್ಲೇ ತಾಳಿ ಕಟ್ಟಿದ ವರ

