ಬೆಂಗಳೂರಿಂದ ಜೋಧಪುರ್‌ಗೆ ತೆರಳುತ್ತಿದ್ದ ಬಸ್ಸಿನ ಎಂಜಿನ್‌ನಲ್ಲಿ ಹೊಗೆ

0 Min Read

ಬಾಗಲಕೋಟೆ: ಬೆಂಗಳೂರಿಂದ (Bengaluru) ರಾಜಸ್ಥಾನದ ಜೋಧಪುರ್‌ಗೆ(Jodhpur) ಹೊರಟಿದ್ದ ಖಾಸಗಿ ಬಸ್ಸಿನ ಎಂಜಿನ್‌ನಲ್ಲಿ ಹೊಗೆ(Smoke) ಕಾಣಿಸಿದೆ.

ಇಳಕಲ್ ತಾಲೂಕಿನ ಗೂಡೂರು ಬಳಿ ಬಿಆರ್‌ ಟ್ರಾವೆಲ್ಸ್‌(BR Travels) ಬಸ್‌ ಚಲಿಸುತ್ತಿದ್ದಾಗ ಹೊಗೆ ಕಾಣಿಸಿದೆ. ಕೂಡಲೇ ಚಾಲಕ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದಾನೆ. ಇದನ್ನೂ ಓದಿ: ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಮರಳಿದ್ದ ASI ಹೃದಯಾಘಾತದಿಂದ ಸಾವು

ಪ್ರಯಾಣಿಕರು ಲಗೇಜ್‌ನೊದಿಗೆ ಇಳಿದಿದ್ದಾರೆ. ಈಗ ಇಳಕಲ್‌ನಿಂದ ಮೆಕ್ಯಾನಿಕ್‌ ಕರೆಸಿ ರಿಪೇರಿ ಕೆಲಸ ಆರಂಭವಾಗಿದೆ. ರಿಪೇರಿ ಯಶಸ್ವಿಯಾದರೆ ಈ ಬಸ್ಸು ರಾಜಸ್ಥಾನಕ್ಕೆ ತೆರಳಲಿದೆ. ರಿಪೇರಿ ಆಗದೇ ಇದ್ದರೆ ಬೇರೊಂದು ಬಸ್ಸಿನ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಗುವುದು ಎಂದು ಬಿಆರ್‌ ಟ್ರಾವೆಲ್ಸ್‌ ಹೇಳಿದೆ.

Share This Article