– ವಿಚಾರಣೆ ಮುಂದೂಡಿದ ಕೋರ್ಟ್
ಬೆಂಗಳೂರು: ಇಂಧನ ಇಲಾಖೆಯಲ್ಲಿ ಕೇಳಿಬಂದಿರೋ ಸ್ಮಾರ್ಟ್ ಮೀಟರ್ ಹಗರಣ (Smart Meter Scam) ಈಗ ಹೊಸ ರೂಪ ಪಡೆದುಕೊಂಡಿದೆ. ಈ ಹಿಂದೆ ಲೋಕಾಯುಕ್ತಕ್ಕೆ ದೂರು ನೀಡಿದ್ದರೂ ಯಾವುದೇ ತನಿಖಾ ಪ್ರಗತಿ ಕಾಣದೇ ಇರೋದ್ರಿಂದ ಮೂವರು ಬಿಜೆಪಿ ಶಾಸಕರು (BJP MLA) ಕೋರ್ಟ್ ಮೊರೆ ಹೋಗಿದ್ದಾರೆ.
ಸಚಿವ ಕೆ.ಜೆ ಜಾರ್ಜ್ (KJ George) ಹಾಗೂ ಬೆಸ್ಕಾಂನ (BESCOM) ಹಿರಿಯ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಬಿಜೆಪಿ ಶಾಸಕ ಅಶ್ವಥ್‌ನಾರಾಯಣ, ಎಸ್.ಆರ್ ವಿಶ್ವನಾಥ್ ಹಾಗೂ ಧೀರಜ್ ಮುನಿರಾಜು ಈ ದೂರು ದಾಖಲಿಸಿದ್ದು, ಅರ್ಜಿದಾರರ ಪರವಾಗಿ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಮಾಡೆಲ್ ಜಾತಿ ಜನಗಣತಿಗೆ ಕಾಂಗ್ರೆಸ್ ಮಣೆ- ಸಿದ್ದರಾಮಯ್ಯ ವರದಿ ಕಸದ ಬುಟ್ಟಿಗೆ: ಶಾಸಕ ಸುನಿಲ್ ಕುಮಾರ್ ವ್ಯಂಗ್ಯ
ಬ್ಲ್ಯಾಕ್ ಲಿಸ್ಟ್‌ನಲ್ಲಿರೋ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡು ದುಬಾರಿ ದರ ವಿಧಿಸಲಾಗಿದೆ ಅಂತ ವಾದಿಸಿದ್ರು. ವಾದ ಪ್ರತಿವಾದಗಳನ್ನು ಆಲಿಸಿ ಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು. ಇನ್ನೂ ಖಾಸಗಿ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಜೆ. ಜಾರ್ಜ್, ದೂರುದಾರರು ಕೋರ್ಟ್ ಮೊರೆ ಹೋಗಿದ್ದಾರೆ. ನಾವು ಕೂಡ ವಿವರಣೆ ನೀಡುತ್ತೇವೆ. ಅಂತಿಮವಾಗಿ ಕೋರ್ಟ್ ನಿರ್ಧಾರ ಮಾಡಲಿದೆ ಅಂದ್ರು. ಇದನ್ನೂ ಓದಿ: RE ಸಂಶೋಧನೆ, ನಾವೀನ್ಯತೆ; 1.27 ಲಕ್ಷ ಕೋಟಿ ಯೋಜನೆಗೆ ಕೇಂದ್ರ ಅಸ್ತು: ಪ್ರಹ್ಲಾದ್ ಜೋಶಿ
ಬಿಜೆಪಿ ಆರೋಪ ಏನು?
ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ ಕೇವಲ ಮೂರು ಕಂಪನಿ ಮಾತ್ರ ಟೆಂಡರ್‌ನಲ್ಲಿದ್ದವು. ಇತರೆ ಕಂಪನಿಗಳು ಟೆಂಡರ್‌ಗೆ ಬರದಂತೆ ಷರತ್ತು ವಿಧಿಸಲಾಗಿತ್ತು. ಬಿಡ್‌ನಲ್ಲಿ ಇದ್ದ ಎರಡು ಕಂಪನಿಗಳು ಡಮ್ಮಿ ಕಂಪನಿಗಳು. ಹೀಗಾಗಿ ರಾಜಶ್ರೀಗೆ ಟೆಂಡರ್ ನೀಡಿರುವುದೇ ಅಕ್ರಮವಾಗಿ. ಬೆಸ್ಕಾಂ ನಲ್ಲಿ ದೊಡ್ಡ ಮಟ್ಟದ ಅಕ್ರಮಗಳು ನಡೆಯುತ್ತಿವೆ. ಒಂದು ಸ್ಮಾರ್ಟ್ ಮೀಟರ್‌ಗೆ 5,000 ರೂಪಾಯಿ ತ್ರೀಫೇಸ್ ಮೀಟರ್‌ಗಾಗಿ 9,000 ರೂ. ನಿಗದಿ ಮಾಡಿದೆ. ಇದೇ ಮೀಟರ್‌ಗಳು ಬೇರೆ ರಾಜ್ಯಗಳಲ್ಲಿ 900 ಮಾತ್ರ ಇದೆ. ರಾಜ್ಯಪಾಲರ ಬಳಿ ಈಗಾಗಲೇ ಪ್ರಾಸಿಕ್ಯೂಷನ್ ಅನುಮತಿ ಕೋರಲಾಗಿದೆ. 3 ಎಂಎಲ್‌ಎಗಳು ರಾಜ್ಯಪಾಲರನ್ನು ಕೇಳಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಜೊತೆ ರೋಲ್ಸ್ ರಾಯ್ಸ್ ಕಂಪನಿ ಮಾತುಕತೆ