ಬೆಂಗಳೂರು: ಸ್ಮಾರ್ಟ್ ಮೀಟರ್ ಟೆಂಡರ್‌ನಲ್ಲಿ (Smart Meter Tender) 16 ಸಾವಿರ ಕೋಟಿ ರೂ. ಅಕ್ರಮ ಆರೋಪದಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ (KG George) ವಿರುದ್ಧ ನಡೆಸಿದ ತನಿಖಾ ವರದಿಯನ್ನು ಕೋರ್ಟ್ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ, ಸಚಿವ ಕೆಜೆ ಜಾರ್ಜ್ ಹೈಕೋರ್ಟ್‌ಗೆ (High Court) ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಲೋಕಾಯುಕ್ತ ಎಸ್ಪಿ ಹಾಗೂ ದೂರುದಾರರಾದ ಬಿಜೆಪಿ ನಾಯಕರಾದ ಸಿಎನ್ ಅಶ್ವಥ್ ನಾರಾಯಣ್, ಎಸ್ ಆರ್ ವಿಶ್ವನಾಥ್, ಧೀರಜ್ ಮುನಿರಾಜು ಅವರಿಗೆ ನೋಟಿಸ್ ನೀಡಿದೆ.
ಲೋಕಾಯುಕ್ತ ಪೊಲೀಸರಿಂದ (Lokayukta Police) ವರದಿ ನೀಡುವಂತೆ ವಿಚಾರಣಾಧೀನ ನ್ಯಾಯಾಲಯ ಮಾಡಿರುವ ಆದೇಶಕ್ಕೆ ತಡೆ ನೀಡಿ ಹೈಕೋರ್ಟ್ ಎರಡು ವಾರ ವಿಚಾರಣೆ ಮುಂದೂಡಿದೆ. ಈ ಮೂಲಕ ಸಚಿವ ಜಾರ್ಜ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಇದನ್ನೂ ಓದಿ: ಇನ್ಮುಂದೆ ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ 50 ಸಾವಿರ ರೂ. ಗಿಫ್ಟ್ – ಜಮೀರ್ ಅಹ್ಮದ್
ಅರ್ಜಿ ವಿಚಾರಣೆ ವೇಳೆ ಒಂದು ರಾಜಕೀಯ ಪಕ್ಷ ಮತ್ತೊಂದು ಪಕ್ಷದ ವಿರುದ್ಧ ಕೇಸ್ ಹಾಕುವ ಸಂಪ್ರದಾಯ ಇದು. ತಮಿಳುನಾಡಿನಲ್ಲಿದ್ದ ಸಂಪ್ರದಾಯ ಈಗ ಇಲ್ಲೂ ಶುರುವಾಗಿದೆ ಎಂದು ವಿಚಾರಣೆ ವೇಳೆ ನ್ಯಾ. ಎಂಐ ಅರುಣ್ ಅವರ ಏಕಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ನಾವು ಪ್ರಕರಣದ ಮೆರಿಟ್ ಮೇಲೆ ವಾದಿಸ್ತಿಲ್ಲ ಎಂದು ಅಂತಾ ಸ್ಪಷ್ಟಪಡಿಸ್ತೇನೆ ಎಂದು ಜಾರ್ಜ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಪೀಠಕ್ಕೆ ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ- ಸಾಕ್ಷಿದಾರನ ಪರವಾಗಿ ಬರ್ತಾರಾ 6 ಮಂದಿ ಸ್ಥಳೀಯರು?
ಜಾರ್ಜ್ ಪರ ವಕೀಲರ ವಾದವೇನು?
ಸಚಿವ ಜಾರ್ಜ್ ಹಾಗೂ ಹಿರಿಯ ಅಧಿಕಾರಿಗಳನ್ನ ಆರೋಪಿಗಳನ್ನಾಗಿ ಮಾಡಲಾಗಿದೆ. ವಿಚಾರಣಾಧೀನ ನ್ಯಾಯಾಲಯ ತನಿಖಾ ವರದಿ ಸಲ್ಲಿಸಲು ಲೋಕಾಯುಕ್ತ ಎಸ್‌ಪಿಗೆ ಆದೇಶಿಸಲಾಗಿದೆ. ಸಾರ್ವಜನಿಕ ಸೇವಕರಿಗಿಂತ ಪೊಲೀಸ್ ಅಧಿಕಾರಿ ಮೆಲ್ದರ್ಜೆಯಲ್ಲಿ ಇರುವುದಿಲ್ಲ. ಹೀಗಾಗಿ ಅವರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗದು. ಇದು ನ್ಯಾಯಾಲಯದ ವ್ಯಾಪ್ತಿಯನ್ನು ಮೀರಿದೆ ಎಂದು ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು.
ಬಿಜೆಪಿ ನಾಯಕರ ಪರ ವಕೀಲರ ವಾದವೇನು?
ಲೋಕಾಯುಕ್ತ ಎಸ್‌ಪಿ ವರದಿಯಿಂದ ನ್ಯಾಯಾಲಯಕ್ಕೆ ತೃಪ್ತಿಯಾದರೆ ಹಿರಿಯ ಅಧಿಕಾರಿಗಳಿಗೆ ತನಿಖೆಗೆ ಆದೇಶ ನೀಡಲಾಗುತ್ತದೆ. ಸದ್ಯ ಪ್ರಕರಣದ ಪ್ರಾಥಮಿಕ ಹಂತದ ತನಿಖೆ ನಡೆಸಲಾಗುತ್ತಿದೆ. ಈ ಹಂತದಲ್ಲಿ ಮಧ್ಯಂತರ ಆದೇಶ ನೀಡುವ ಅವಶ್ಯಕತೆ ಇಲ್ಲ ಎಂದು ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್ ವಾದ ಮಾಡಿದರು.