ವೃತ್ತಿ ಜೀವನದ ಕೊನೆಯ ದಿನ ಲೋಕಾಯುಕ್ತ ಬಲೆಗೆ ಬಿದ್ದ ಸ್ಮಾರ್ಟ್ ಸಿಟಿ ಮುಖ್ಯಸ್ಥ!

Public TV
1 Min Read

ಶಿವಮೊಗ್ಗ: ನಗರದ (Shivamogga) ಸ್ಮಾರ್ಟ್ ಸಿಟಿ (Smart City) ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ವೃತ್ತಿಯ ಕೊನೆಯ ದಿನ ಲಂಚ ಸ್ವೀಕರಿಸಲು ಹೋಗಿ ಲೋಕಾಯುಕ್ತ (Lokayukta) ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸ್ಮಾರ್ಟ್ ಸಿಟಿ ಮುಖ್ಯಸ್ಥನಾಗಿದ್ದ ಕೃಷ್ಣಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಇಂದು ಅಧಿಕಾರ ಹಸ್ತಾಂತರಿಸಿ ನಿವೃತ್ತಿ ಪಡೆಯಬೇಕಿತ್ತು. ಆದರೆ ಲಂಚದ ಆಸೆಯಿಂದ ಕೊನೆಯ ದಿನ ಅರೆಸ್ಟ್ ಆಗಿದ್ದಾರೆ. ಅವರು, ಶಿವಮೊಗ್ಗ ನಗರದಲ್ಲಿ ಟಿವಿ, ಎಲ್‍ಇಡಿ ಪರದೆ ಅಳವಡಿಸುವ ಸಂಬಂಧ ಬಿಲ್ ಮಾಡಲು ಮುಂಬೈ ಮೂಲದ ಕಂಪೆನಿ ಬಳಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಹಗರಣ – ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ ಅರೆಸ್ಟ್

ಹಣ ಕೊಡದೇ ಇದ್ದರೆ, ಮುಂಬೈ ಮೂಲದ ಕಂಪೆನಿ ಸರಿಯಾಗಿ ಸರ್ವಿಸ್ ಮಾಡಿಲ್ಲ ಎಂದು ಷರಾ ಬರೆಯುವುದಾಗಿ ಅವರು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಇದಕ್ಕೆ ರಾಯರೆಡ್ಡಿ ಹೇಳಿಕೆಯೇ ಸಾಕ್ಷಿ: ನಿಖಿಲ್

Share This Article