ಬೆಂಗಳೂರು: ಮೆಟ್ರೋ ಸಂಚಾರದಲ್ಲಿ ಕೆಲಕಾಲ ವ್ಯತ್ಯಯವಾಗಿದ್ದು, ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿ ಪಿಲ್ಲರ್ ನಲ್ಲಿ ಬಿರುಕು ಬಿಟ್ಟಿದೆ. ಆದರೆ ಪಿಲ್ಲರ್ ಬಿರುಕು ಬಿಟ್ಟಿಲ್ಲ, ಕಾಂಕ್ರೀಟ್ ಭೀಮ್‍ನಲ್ಲಿರುವ ಜೇನು ಗೂಡು ತೆರವು ಮಾಡಿದ್ದೇವೆ ಅಂತ ಮೆಟ್ರೋ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ಪಿಲ್ಲರ್ ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರಗಿದೆ. ಹೀಗಾಗಿ ಸದ್ಯ ಅದಕ್ಕೆ ಕಬ್ಬಿಣದ ಸ್ಲೈಡರ್ ಸಪೋರ್ಟ್ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಬದಿಯ ಸಂಚಾರವನ್ನು ತಡೆದು ವಾಹನಗಳಿಗೆ ಏಕಮುಖದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಮೆಟ್ರೋ ಸಂಚರಿಸಲು ಎತ್ತರಿಸಿದಂತಹ ಮಾರ್ಗದಲ್ಲಿ ಕೊರತೆ ಕಂಡುಬಂದಿದೆ. ಸ್ಲೈಡರ್ ಸರಿದಿದ್ದು, ಜಾಯಿಂಟ್ ಮಾಡಲು ಬಳಸಿದ ಕಬ್ಬಿಣದ ತುಂಡುಗಳು ಕಳಚಿಕೊಂಡಿವೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಎಂಜಿನಿಯರ್ ಗಳು ತಪಾಸಣೆ ನಡೆಸುತ್ತಿದ್ದಾರೆ. ಪಿಲ್ಲರ್ ಬಳಿ ಜೇನು ಗೂಡು ಕಟ್ಟಿತ್ತು. ಹೀಗಾಗಿ ಅದನ್ನು ತೆರವುಗೊಳಿಸಲು ಬಂದಿದ್ದು, ಈ ವೇಳೆ ಹಾನಿ ಕಂಡುಬಂದಿದೆ. ಹೀಗಾಗಿ ಅಲ್ಲಿ ಕಬ್ಬಿಣದ ಸ್ಲೈಡರ್ ಹಾಕಿರುವುದಾಗಿ ಮೆಟ್ರೋ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
Due to noticing of honey comb formation in concrete, restoration works is in progress at Trinity station.Speed restrictions are imposed at this location. Trains may run between 10 to 15 mins and there may be delays in operation. Commuters are requested to cooperate with us.”
— ನಮ್ಮ ಮೆಟ್ರೋ (@cpronammametro) December 12, 2018
ಪ್ರತಿನಿತ್ಯ ಸಾವಿರಾರು ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಅಲ್ಲದೇ ಪಿಲ್ಲರ್ ಕೆಳಗಡೆಯೂ ಸಾವಿರಾರು ವಾಹನಗಳು ದಿನನಿತ್ಯ ಸಂಚರಿಸುತ್ತವೆ. ಹೀಗಾಗಿ ಆತಂಕ ಉಂಟಾಗಿದ್ದು, ಯಾವುದೇ ರೀತಿಯ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ಬಿಎಂಆರ್ ಸಿ ಎಲ್ ನವರು ತಿಳಿಸಿದ್ದಾರೆ.
From 8..15 Hrs onwards trains are running on both the tracks in purple line. Slowly we are trying to pickup pace to normalize with induction of more trains. Still expect delays due to speed restrictions at Trinity station . Request cooperation from Namma commuters.
— ನಮ್ಮ ಮೆಟ್ರೋ (@cpronammametro) December 12, 2018
From 10.20 Hrs train operations are normalized . Thanks to all the commuters for their cooperation and bearing with us .
— ನಮ್ಮ ಮೆಟ್ರೋ (@cpronammametro) December 12, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv