ನಿತ್ಯ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಈ ಕಾಯಿಲೆಗಳು ಬರುತ್ತೆ!

Public TV
2 Min Read

ನಿದ್ರೆ (Sleep) ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಬದಲಾದ ಜೀವನಶೈಲಿ, ಒತ್ತಡದ ಬದುಕಿನಿಂದಾಗಿ ಬಹುಪಾಲು ಮಂದಿ ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಷ್ಟೋ ಮಂದಿ ನಿದ್ರೆಗಿಂತ ತಮ್ಮ ಕೆಲಸಗಳಿಗೇ ಹೆಚ್ಚು ಆದ್ಯತೆ ನೀಡುತ್ತಾರೆ. ಇನ್ನೂ ಕೆಲವರಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಕೈಯಲಿದ್ರೆ ಸಾಕು, ನಿದ್ರೆಯನ್ನೇ ಮರೆತುಬಿಡ್ತಾರೆ. ಇಂಥವರಿಗೆ ಅಧ್ಯಯನವೊಂದು ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ 50 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ನಿದ್ರೆಗೂ ಹೆಚ್ಚಿನ ಒತ್ತು ನೀಡಬೇಕು.

50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ದಿನಕ್ಕೆ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ನಿದ್ರೆ ಮಾಡಿದರೆ ಹೃದ್ರೋಗ (Heart Disease), ಮಧುಮೇಹ (Diabetes) ಮತ್ತು ಕ್ಯಾನ್ಸರ್‌ನಂತಹ (Cancer) ಬಹು ದೀರ್ಘಕಾಲದ ಕಾಯಿಲೆಗಳು ಎದುರಾಗುವ ಸಮಸ್ಯೆ ಇರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

ಈಚೆಗೆ ಪೀರ್-ರಿವ್ಯೂಡ್ ಜರ್ನಲ್ PLOS ಮೆಡಿಸಿನ್‌ನಲ್ಲಿ ತಮ್ಮ ಸಂಶೋಧನೆಗಳನ್ನು ಸಂಶೋಧಕರ ತಂಡವು ಪ್ರಕಟಿಸಿದೆ. 50, 60 ಮತ್ತು 70 ವರ್ಷ ವಯಸ್ಸಿನ 7,864 ಬ್ರಿಟಿಷ್ ನಾಗರಿಕ ಸೇವಕರ ಡೇಟಾವನ್ನು ಸಂಶೋಧಕರ ತಂಡವು ವಿಶ್ಲೇಷಿಸಿದೆ.

ಸಂಶೋಧನೆಗಳ ಪ್ರಕಾರ, 50ನೇ ವಯಸ್ಸಿನಲ್ಲಿ ಐದು ಗಂಟೆಗಳ ಅಥವಾ ಅದಕ್ಕಿಂತ ಕಡಿಮೆ ಅವಧಿ ನಿದ್ರೆ ಮಾಡುವವರಲ್ಲಿ ದೀರ್ಘಕಾಲದ ಕಾಯಿಲೆಗಳು ಶೇ.20 ವೃದ್ಧಿಯಾಗುತ್ತದೆ.

50, 60 ಮತ್ತು 70ನೇ ವಯಸ್ಸಿನಲ್ಲಿ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಕಾಲ ನಿದ್ರಿಸುವುದು ಮಲ್ಟಿಮಾರ್ಬಿಡಿಟಿಯ ಸಮಸ್ಯೆಯನ್ನು ಶೇ.30 ರಿಂದ 40 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದನ್ನೂ ಓದಿ: ಬುದ್ಧಿವಂತರು ಯಾವಾಗಲು ಏಕಾಂಗಿಯಾಗಿಯೇ ಕೆಲಸ ಮಾಡ್ತಾರೆ.. ಯಾಕೆ ಗೊತ್ತಾ?

ಜನರು ವಯಸ್ಸಾದಂತೆ ಅವರ ನಿದ್ರೆಯ ಅಭ್ಯಾಸಗಳು ಮತ್ತು ನಿದ್ರೆಯ ರಚನೆಯು ಬದಲಾಗುತ್ತದೆ. ಆದಾಗ್ಯೂ ರಾತ್ರಿಯಲ್ಲಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಒಳಿತು. ಅದಕ್ಕಿಂತ ಕಡಿಮೆ ಅವಧಿಯ ನಿದ್ರೆಯಿಂದ ದೀರ್ಘಕಾಲದ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ ಡಾ. ಸೆವೆರಿನ್ ಸಬಿಯಾ ತಿಳಿಸಿದ್ದಾರೆ.

ನೀವು ಮಲಗುವ ಕೋಣೆ ಶಾಂತ, ಕತ್ತಲೆ, ಆರಾಮದಾಯಕ ತಾಪಮಾನದಲ್ಲಿರಬೇಕು. ರಾತ್ರಿ ಹೊತ್ತು ಅತಿಯಾಗಿ ಊಟ ಸೇವಿಸುವುದು ಸರಿಯಲ್ಲ. ಹಗಲಿನಲ್ಲಿ ವ್ಯಾಯಾಮ, ದೈಹಿಕ ಶ್ರಮ ಹಾಕಿದರೆ ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಮಾಡಬಹುದು ಎನ್ನುತ್ತಾರೆ ಡಾ. ಸಬಿಯಾ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *