ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಧ್ಯಾಹ್ನ ತಡೆರಹಿತ ವೋಲ್ವೊ ಬಸ್ ವ್ಯವಸ್ಥೆ

Public TV
2 Min Read

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಮಧ್ಯಾಹ್ನ ಬೆಂಗಳೂರಿಗೆ ತಡೆರಹಿತ ಐರಾವತ ವೋಲ್ವೊ ಮತ್ತು ಹೈದರಾಬಾದ್‍ಗೆ ಸಂಜೆ ಮತ್ತೊಂದು ನಾನ್ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

ಗಣೇಶ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ನಗರದಿಂದ ದೂರದ ಸ್ಥಳಗಳಿಗೆ ಜನರ ಓಡಾಟ ಹೆಚ್ಚಾಗುವ ನಿರೀಕ್ಷೆ ಇದೆ. ಸಾರ್ವಜನಿಕರ ಬೇಡಿಕೆಯ ಮೇರೆಗೆ ಸೋಮವಾರದಿಂದ ಹುಬ್ಬಳ್ಳಿ ಯಿಂದ ಬೆಂಗಳೂರಿಗೆ ಮಧ್ಯಾಹ್ನದ ಸಮಯದಲ್ಲಿ ತಡೆರಹಿತ ಐರಾವತ ವೋಲ್ವೋ ಹಾಗೂ ಹೈದರಾಬಾದ್‍ಗೆ ಸಂಜೆ ಮತ್ತೊಂದು ನಾನ್ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಬಸ್ ಗಳು ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ. ಇದನ್ನೂ ಓದಿ: ಬಾಲಿವುಡ್ ನಟ ಗೋವಿಂದ್ ಸ್ಯಾಂಡಲ್‍ವುಡ್‍ಗೆ ಎಂಟ್ರಿ

ಬೆಂಗಳೂರಿಗೆ ತೆರಳುವ ತಡೆರಹಿತ ಐರಾವತ ಬಸ್ ಹುಬ್ಬಳ್ಳಿಯಿಂದ ಮಧ್ಯಾಹ್ನ 1ಕ್ಕೆ ಹೊರಡುತ್ತದೆ. ಸಂಜೆ 7-30ಕ್ಕೆ ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ಮಧ್ಯಾಹ್ನ 3ಕ್ಕೆ ಬಿಟ್ಟು ರಾತ್ರಿ 9-30ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರೋತ್ಸಾಹಕ ಪ್ರಯಾಣ ದರ ರೂ. 730. ನಿಗದಿಪಡಿಸಲಾಗಿದೆ.

ಈ ಮೊದಲು ಹುಬ್ಬಳ್ಳಿಯಿಂದ ಮಧ್ಯಾಹ್ನ 3ಕ್ಕೆಹೊರಡುತ್ತಿತ್ತು. ರಾತ್ರಿ 9-30ಕ್ಕೆ ಬೆಂಗಳೂರಿಗೆ ತಲುಪಬೇಕಾಗಿತ್ತು. ಆದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಹಳ ತಡವಾಗಿ ಅಂದರೆ 10 ಗಂಟೆಯ ನಂತರ ತಲುಪುತ್ತಿತ್ತು. ಇದರಿಂದ ಬಸ್ ಇಳಿದ ನಂತರ ಪ್ರಯಾಣಿಕರಿಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿ ಮನೆ ತಲುಪಲು ಅನಾನುಕೂಲವಾಗಿತ್ತು. ಅದ್ದರಿಂದ ಹುಬ್ಬಳ್ಳಿ ಬಿಡುವ ಸಮಯ ಬದಲಾವಣೆಗೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರು. ಅದರಂತೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅನ್ನದಾತನ ಅನ್ನಕ್ಕೆ ಕನ್ನ ಹಾಕಿದ ಕಿಡಿಗೇಡಿಗಳು-ಪಂಪ್‍ಸೆಟ್ ಕೇಬಲ್ ಕಟ್

ಹೈದರಾಬಾದ್‍ಗೆ ತೆರಳುವ ನಾನ್ ಎಸಿ ಸ್ಲೀಪರ್ ಬಸ್ ಹುಬ್ಬಳ್ಳಿಯಿಂದ ಸಂಜೆ 7-35 ಕ್ಕೆ ಹೊರಡುತ್ತದೆ. ಮರುದಿನ ಬೆಳಗ್ಗೆ6-35 ಕ್ಕೆ ಹೈದರಾಬಾದ್ ತಲುಪುತ್ತದೆ. ಹೈದರಾಬಾದ್ ನಿಂದ ಸಂಜೆ 7-15 ಕ್ಕೆ ಬಿಟ್ಟು ಮರುದಿನ ಬೆಳಗ್ಗೆ 6-15ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರೋತ್ಸಾಹಕ ಪ್ರಯಾಣ ದರ ರೂ. 910 ನಿಗದಿಪಡಿಸಲಾಗಿದೆ. ಇದರೊಂದಿಗೆ ಈಗಾಗಲೆ ಹುಬ್ಬಳ್ಳಿಯಿಂದ ಹೈದರಾಬಾದ್‍ಗೆ ಸಂಜೆ 7ಕ್ಕೆ ಹೊರಡುವ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಸಹ ಮುಂದುವರೆಯಲಿದೆ. ಇದನ್ನೂ ಓದಿ:ಟೋಕಿಯೋ ಪ್ಯಾರಾಲಂಪಿಕ್ಸ್ ಭಾರತೀಯ ಕ್ರೀಡಾ ಇತಿಹಾಸದಲ್ಲಿ ವಿಶೇಷ: ಮೋದಿ

ಈ ಬಸ್ ಗಳಿಗೆ www.ksrtc.in ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅಥವಾ ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿನ ಕೌಂಟರ್ ನಲ್ಲಿ ಹಾಗೂ ಪ್ರಾಂಚೈಸಿ ಕೇಂದ್ರಗಳಲ್ಲಿ ಮುಂಗಡ ಬುಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಿಗೆ ನಾಲ್ಕು ಅಥವ ಹೆಚ್ಚಿನ ಆಸನಗಳನ್ನು ಒಂದೇ ಟಿಕೆಟ್ ನಲ್ಲಿ ಕಾಯ್ದಿರಿಸಿದರೆ ಮೂಲ ಪ್ರಯಾಣ ದರದಲ್ಲಿ ಶೇಕಡಾ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣಕ್ಕೆ ಒಮ್ಮೆಗೇ ಮುಂಗಡ ಬುಕ್ಕಿಂಗ್ ಮಾಡಿದರೆ ಬರುವಾಗಿನ ಪ್ರಯಾಣ ದ ಮೂಲ ಟಿಕೆಟ್ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *