ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಪುರುಷರನ್ನು ಕರೆತರುವೆ: ರೇಪ್‌ಗೂ ಮುನ್ನ ರಷ್ಯಾ ಸೈನಿಕನ ಮಾತು

Public TV
1 Min Read

ಕೀವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದ್ದು, ಅನೇಕ ಅಮಾನವೀಯ ಘಟನೆಗಳೂ ಇಲ್ಲಿ ಬೆಳಕಿಗೆ ಬರುತ್ತಿವೆ. ಈ ನಡುವೆ ರಷ್ಯಾ ನಿಯಂತ್ರಣದಲ್ಲಿರುವ ಉಕ್ರೇನ್‌ನ ಖೇರ್ಸನ್ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣವೂ ಇದಕ್ಕೆ ಸಾಕ್ಷಿಯಾಗಿದೆ.

RUSSIA

ಮದ್ಯ ಸೇವಿಸಿದ್ದ ರಷ್ಯಾ ಸೈನಿಕ ಅತ್ಯಾಚಾರಕ್ಕೂ ಮುನ್ನ, ನೀನು ನನ್ನೊಂದಿಗೆ ಮಲಗದಿದ್ದರೆ, ನಾನು ಇನ್ನೂ 20 ಪುರುಷರನ್ನು ಕರೆತರುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಮಹಿಳೆಯರು, ಮಕ್ಕಳು ಭವಿಷ್ಯದ ಆತಂಕದಲ್ಲಿ ಬದುಕುತ್ತಿದ್ದಾರೆ: ವತ್ಸಲಾ ವರತ್ತನ

ಬಾಂಬ್ ದಾಳಿಯಿಂದ ನೆಲಮಾಳಿಗೆಯಲ್ಲಿ ಆಶ್ರಯ ಪಡೆದಿದ್ದ ಕೆಲವರು, ಮುಸ್ಸಂಜೆ ವೇಳೆಯಲ್ಲಿ ಊಟ ತರಲು ಹೋದ ಮೂವರು, ಸೈನಿಕನ ಕಣ್ಣಿಗೆ ಬಿದ್ದಿದ್ದಾರೆ. ಮೂವರಲ್ಲಿ 12 ಮತ್ತು 16 ವರ್ಷದ ಯುವತಿಯರೂ ಇದ್ದರು. ರಷ್ಯಾ ಸೈನಿಕ ಇಬ್ಬರನ್ನು ಕಳುಹಿಸಿದ್ದಾನೆ. 16 ವರ್ಷದ ಯುವತಿಯನ್ನು ಅಲ್ಲೇ ಇರಲು ಹೇಳಿ, ಆಕೆಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಇದನ್ನೂ ಓದಿ: ಟ್ವಿಟ್ಟರ್‌ ಆಯ್ತು ಈಗ ಕೋಕಾ ಕೋಲಾ ಖರೀದಿಸುತ್ತೇನೆಂದ ಎಲಾನ್‌ ಮಸ್ಕ್

Russia-UkraineWar

ಈ ಕುರಿತು ಅಳಲು ತೋಡಿಕೊಂಡಿರುವ ಸಂತ್ರಸ್ತೆ, ಮೊದಲು ನನ್ನ ಕತ್ತುಹಿಸುಕಿ ಸಾಯಿಸಲು ಪ್ರಯತ್ನಿಸಿದ್ದಾನೆ. ನಂತರ ನನ್ನ ಬಟ್ಟೆ ತೆಗೆಯಲು ಹೇಳಿದ್ದಾನೆ. ನಾನು ಅದನ್ನು ವಿರೊಧಿಸಿದಾಗ, ನೀನು ನನ್ನೊಂದಿಗೆ ಮಲಗದಿದ್ದರೆ ಇನ್ನೂ 20 ಜನ ಪುರುಷರನ್ನು ಕರೆದುಕೊಂಡು ಬರುತ್ತೇನೆ ಎಂದು ಭಯ ಹುಟ್ಟಿಸಿದ್ದಾನೆ. ಸಮೀಪದಲ್ಲೇ ಇದ್ದ ಮತ್ತೊಬ್ಬ ಸೈನಿಕ ಅತ್ಯಾಚಾರ ನಿಲ್ಲಿಸುವಂತೆ ಕೇಳಿಕೊಂಡರೂ ಆತ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: 90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್

Ukraine Russia
ಸಾಂದರ್ಭಿಕ ಚಿತ್ರ

ನಾವು ಊಟ ತರಲು ಹೊರಗೆ ಹೋಗದೆ ಇದ್ದಿದ್ದರೆ ಅವನು ನನ್ನನ್ನು ನೋಡುತ್ತಿರಲಿಲ್ಲ, ನನ್ನನ್ನು ಮುಟ್ಟುತ್ತಿರಲಿಲ್ಲ. ಸಾಲದ್ದಕ್ಕೆ ಮರುದಿನ, ಇನ್ನೊಬ್ಬ ಸೈನಿಕನ ಬಳಿಗೆ ಕರೆದೊಯ್ದು ಬೆದರಿಕೆಯೊಡ್ಡಿ ಅತ್ಯಾಚಾರ ಮಾಡಿಸಿದ್ದಾರೆ ಎಂದೂ ಆಕೆ ಅಳಲು ತೋಡಿಕೊಂಡಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *