– ಕುಮಾರಣ್ಣ ಕಡೆಯಿಂದ ದುಬೈನಲ್ಲಿ ಹೋಟೆಲ್ ವ್ಯವಸ್ಥೆ ಆಯ್ತು
ಬೆಂಗಳೂರು: ದುಬೈನಲ್ಲಿ ಸಿಲುಕಿದ್ದ ನಾನು ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಕೃಷ್ಣ ಭೈರೇಗೌಡರು ಹಾಗೂ ಹೆಚ್.ಕೆ ಪಾಟೀಲರಿಗೆ ಕಾಲ್ ಮಾಡಿದ್ದೆ, ಆ ಟೈಮಲ್ಲಿ ಮೂರು ಮಿಸೈಲ್‌ಗಳು ಬಿದ್ದವು. ಬುರ್ಜ್ ಖಲೀಫಾ ಪಕ್ಕದಲ್ಲೇ ಬಾಂಬ್ ಬಿತ್ತು. ಇವತ್ತು ಬೆಳಗ್ಗೆ ಕೂಡ ಬಾಂಬ್ ಗಳು ಬೀಳ್ತಿತ್ತು. 3 ಬಾಂಬ್‌ಗಳು ಬೀಳೋದನ್ನ ನಾನು ನೋಡಿದೆ. ಇಷ್ಟು ಬೇಗ ವಾಪಸ್ ಬರ್ತೀನಿ ಅಂತ ಅಂದುಕೊಂಡಿರಲೇ ಇಲ್ಲ ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ (SL Bhojegowda) ಯುದ್ಧದ ಪರಿಸ್ಥಿತಿ ಕಂಡ ಅನುಭವ ಹಂಚಿಕೊಂಡರು.
ದುಬೈನಲ್ಲಿ ಸಿಲುಕಿದ್ದ ಅವರು ಇಂದು ಬೆಳಗ್ಗೆ ಬೆಂಗಳೂರಿಗೆ (Bengaluru) ಬಂದಿಳಿದ ನಂತರ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿದರು. ನಾನು ದಕ್ಷಿಣ ಆಫ್ರಿಕಾಗೆ ಹೋಗಿದ್ದೆ. ಕಾರಣಾಂತರಗಳಿಂದ ವಾಪಸ್ ಬರೋಕೆ ಮುಂದಾಗಿದ್ದೆ. ದುಬೈ ಮೂಲಕ ಇಂಡಿಯಾಗೆ ಬರಬೇಕಾಗಿತ್ತು. ಈ ಟೈಮಲ್ಲಿ ಫ್ಲೈಟ್ ಡಿಲೇ ಆಗ್ತಿತ್ತು. ಯಾಕೆ ಅಂತಾ ಕೇಳ್ದಾಗ ಅಬುಧಾಬಿಯಲ್ಲಿ ಬಾಂಬಿಂಗ್ ಆಗ್ತಿದೆ ಅಂದ್ರು. ಸ್ವಲ್ಪ ಹೊತ್ತಿನ ನಂತರ ವಿಮಾನದಿಂದ (Flights) ಇಳಿಸಿದ್ರು. ಎಲ್ಲಾ ಫ್ಲೈಟ್ ಗಳನ್ನ ಸ್ಟಾಪ್ ಮಾಡಿದ್ರು ಎಂದು ಹೇಳಿದರು.
ಕುಮಾರಣ್ಣ ಕಡೆಯಿಂದ ಹೋಟೆಲ್ ವ್ಯವಸ್ಥೆ ಆಯ್ತು
ನನ್ನ ಬಳಿ ದುಬೈ ವೀಸಾ ಇರಲಿಲ್ಲ, ಬಳಿಕ ವೀಸಾ ಪಡೆದುಕೊಂಡೆ. ಕುಮಾರಣ್ಣ ಕಡೆಯಿಂದ ಅಲ್ಲಿ ಹೋಟೆಲ್ ವ್ಯವಸ್ಥೆ ಆಯ್ತು. ಹೋಟೆಲ್ ಅಕ್ಕಪಕ್ಕದಲ್ಲಿ ಬಾಂಬಿಂಗ್ ಆಗ್ತಿತ್ತು. ನಂತರ ನಮ್ಮನ್ನ ಸುರಕ್ಷಿತ ಸ್ಥಳವೊಂದರಲ್ಲಿ ಇರಿಸಿದ್ರು. ಅಲ್ಲಿಂದ ನಮ್ಮ ಸ್ನೇಹಿತರೊಬ್ಬರ ಮನೆಗೆ ಹೋದೆ. ಬೆಳಗ್ಗೆ ಕೃಷ್ಣ ಭೈರೇಗೌಡರಿಗೆ, ಹೆಚ್.ಕೆ ಪಾಟೀಲ್ ಅವರಿಗೆ ಕಾಲ್ ಮಾಡಿದ್ದೆ. ಆ ಟೈಮಲ್ಲಿ ಮೂರು ಮಿಸೈಲ್‌ಗಳು ಬಿದ್ದವು. ಬುರ್ಜ್ ಖಲೀಫಾ ಪಕ್ಕದಲ್ಲೇ ಬಾಂಬ್ ಬಿತ್ತು. ಆದ್ರೆ ಅದು ಅಷ್ಟು ಎಫೆಕ್ಟ್ ಆಗಲಿಲ್ಲ ಎಂದು ರೋಚಕ ಅನುಭವ ಹಂಚಿಕೊಂಡರು.
ಇವತ್ತು ಬೆಳಗ್ಗೆ ಕೂಡ ಬಾಂಬ್ ಗಳು ಬೀಳ್ತಿತ್ತು. 3 ಬಾಂಬ್‌ಗಳು ಬೀಳೋದನ್ನ ನಾನು ನೋಡಿದೆ. ಅದಕ್ಕಾಗಿ ರೂಟ್ ಚೇಂಜ್ ಮಾಡಿ ನಮ್ಮನ್ನ ಕಳುಹಿಸಿದ್ರು. ನಮ್ಮ ಸರ್ಕಾರ ಹಾಗೂ ದುಬೈ ಸರ್ಕಾರ ಮಾತಾಡಿಕೊಂಡಿವೆ. ಅಲ್ಲಿ ಯುದ್ಧದ ವಾತಾವರಣ ಹೆಚ್ಚಿದೆ. ಇಷ್ಟು ಬೇಗ ಬರ್ತೀನಿ ಅಂತ ಅಂದ್ಕೊಂಡಿರ್ಲಿಲ್ಲ ಎಂದು ಭಾವುಕರಾದರು.


