ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ ಅತ್ಯಗತ್ಯ: ಶರತ್ ಚಂದ್ರ

Public TV
1 Min Read

– ಎಎಂಸಿ ಆಯೋಜಿಸಿದ್ದ ವಿಕಸಿತ್ ಭಾರತ್ ಕಾರ್ಯಕ್ರಮ

ಬೆಂಗಳೂರು: ಕೈಗಾರಿಕೆಗಳು ವಿದ್ಯಾರ್ಥಿಗಳ ಪಠ್ಯಪುಸ್ತಕದ ಪಾಂಡಿತ್ಯಕ್ಕಿಂತ ಕೌಶಲ್ಯ ಶಿಕ್ಷಣ ಕಲಿತವರನ್ನು ಎದುರು ನೋಡುತ್ತಿರುವುದರಿಂದ ಕಾಲೇಜುಗಳು ವಿದ್ಯಾರ್ಥಿಗಳಿಗೆ `ಇಂಡಸ್ಟ್ರಿ ರೆಡಿನೆಸ್’ ನಂತಹ ಶಿಕ್ಷಣ ಪದ್ಧತಿಯನ್ನು ಕಲಿಸಬೇಕೆಂದು ಇನ್ಫೋಸಿಸ್‌ನ L & D ವಿಭಾಗದ ಜಾಗತಿಕ ಮುಖ್ಯಸ್ಥ ಶರತ್ ಚಂದ್ರ ಹೇಳಿದರು.

ಬನ್ನೇರುಘಟ್ಟದಲ್ಲಿರುವ ಎಎಂಸಿ ಕಾಲೇಜು ಆಯೋಜಿಸಿದ್ದ `ಅಮೃತ ಮಹೋತ್ಸವದ ವಿಕಸಿತ್ ಭಾರತ್ @2047′ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇದು ಪ್ರಧಾನ ಮಂತ್ರಿಗಳ ಯೋಜನೆಯಾಗಿದ್ದು, ಶಿಕ್ಷಣ ಸಂಸ್ಥೆಗಳನ್ನು ಕೈಗಾರಿಕೆಗಳ ನಡುವಿನ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸ್ವಾಂತಂತ್ರ‍್ಯ ಬಂದು 75 ವರ್ಷ ಕಳೆದಿದೆ. ಮುಂದಿನ 25 ವರ್ಷಕ್ಕೆ ಶತಮಾನೋತ್ಸವಕ್ಕೆ ನಾವು ಹೆಜ್ಜೆಹಿಡಲಿದ್ದು, ಸಾಕಷ್ಟು ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕಿದೆ. ವಿದ್ಯಾರ್ಥಿಗಳು ಕಲಿಕಾ ವೇದಿಕೆಗಳಾದ ಎಐ, ಎಂಎಲ್‌ಗಳನ್ನು ಬಳಕೆ ಮಾಡಿಕೊಂಡು ಉತ್ಕೃಷ್ಟವಾಗಿ ಕಲಿಯಬೇಕು ಎಂದರು. ಇದನ್ನೂ ಓದಿ: ಎಂಜಿನಿಯರಿಂಗ್, ವೆಟರಿನರಿ, ಫಾರ್ಮ್ ಸೈನ್ಸ್, ಆರ್ಕಿಟೆಕ್ಟರ್ ಕೋರ್ಸುಗಳಿಗೆ ಪ್ರವೇಶಾತಿ ಅಕ್ಟೋಬರ್ 30ಕ್ಕೆ ವಿಶೇಷ ಸುತ್ತು: KEA

ಎಎಂಸಿ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷ ರಾಹುಲ್ ಕಲ್ಲೂರಿ ಮಾತನಾಡಿ, ಭಾರತವು ಆರ್ಥಿಕವಾಗಿ ಮತ್ತಷ್ಟು ಸಧೃಡವಾಗಲು ಮುಂದಿನ 25 ವರ್ಷ ಬಹಳ ಮಹತ್ವವಾಗಿದೆ. ನಾವು ಬೆಳೆಯಬೇಕಾದಲ್ಲಿ, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆ ಎರಡು ಜೊತೆಗೂಡಿ ಕೆಲಸ ಮಾಡಬೇಕಿದೆ ಎಂದರು.

ಎಎಂಸಿ ಕಾಲೇಜು, ಕೇಂದ್ರ ಶಾಲಾ ಶಿಕ್ಷಣದ ಜೊತೆಗೆ ಆಯೋಜಿಸಿದ್ದ ಈ ವಿಕಸಿತ್ ಭಾರತ್ ಕಾರ್ಯಕ್ರಮದಲ್ಲಿ 1,500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಭಾರತದ ಕಾನೂನು ಬದಲಿಸುವ ಮೂರು ಮಸೂದೆಗಳು ಶೀಘ್ರದಲ್ಲಿ ಅಂಗೀಕಾರ: ಅಮಿತ್ ಶಾ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್