ಚೀನಾದಲ್ಲಿ ಜಲಪ್ರಳಯಕ್ಕೆ 6 ಮಂದಿ ಬಲಿ

Public TV
1 Min Read

ಬೀಜಿಂಗ್‌: ವುಟಿಪ್‌ ಚಂಡಮಾರುತದ ಹೊಡೆತದಿಂದ ತತ್ತರಿಸಿದ್ದ ದಕ್ಷಿಣ ಚೀನಾದಲ್ಲಿ (outhwestern China) ಎರಡು ವಾರಗಳ ಒಳಗೆ ಮತ್ತೆ ಮಳೆ (Rain), ಗಾಳಿ ಅಬ್ಬರಿಸುತ್ತಿದೆ. ಪ್ರವಾಹದಿಂದ ಸಾವಿರಾರು ಜನರು ಸಂಕಷ್ಟಕ್ಕೀಡಾಗಿದ್ದಾರೆ. ರಣ ಪ್ರವಾಹಕ್ಕೆ 6 ಮಂದಿ ಬಲಿಯಾಗಿದ್ದು, 80 ಸಾವಿರಕ್ಕೂ ಹೆಚ್ಚು ಜನರನ್ನ ಸ್ಥಳಾಂತರಿಸಲಾಗಿದೆ.

ಭೀಕರ ಪ್ರವಾಹಕ್ಕೆ ನೂರಾರು ಕಟ್ಟಡಗಳು ನೀರಿನಲ್ಲಿ ಮುಳುಗಿಹೋಗಿವೆ. ಸಣ್ಣ ಸಣ್ಣ ಮನೆಗಗಳು, ಅಂಗಡಿಗಳಂತೂ ಗುರುತೇ ಸಿಗದಂತೆ ಕೊಚ್ಚಿ ಹೋಗಿವೆ. ಒಂದೆಡೆ ಸೇತುವೆಗಳು ಮುಳುಗಿ ಹೋಗಿದ್ರೆ, ನೂರಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮನುಷ್ಯರು ಮಾತ್ರವಲ್ಲ ಇತ್ತ ಮೂಕ ಪ್ರಾಣಿಗಳೂ ಪ್ರವಾಹದ ನೀರಿನಲ್ಲಿ ಪರಾದಾಡಿವೆ. ಈ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಮುಳುಗಿದ ಮನೆಗಳು..
ರಣ ಪ್ರವಾಹಕ್ಕೆ ಬಿಲ್ಡಿಂಗ್‌ಗಳೇ ಮುಳುಗಿ ಹೋಗಿದ್ವು. ಇನ್ನು ಸಣ್ಣ ಪುಟ್ಟ ಮನೆಗಳ ಕಥೆ ಅದೇನಾಗಿರೋಲ್ಲ.. ಕೆಲ ಮನೆಗಳ ಛಾವಣಿಗಳೆಲ್ಲಾ ಕಿತ್ತು ಬಂದಿದ್ವು. ಅಲ್ಲಿ ಇಲ್ಲಿ ಮನೆಯಲ್ಲಿ ಸಿಲುಕಿಕೊಂಡವರನ್ನ ರಕ್ಷಣಾ ತಂಡ ಕಾಪಾಡಿತ್ತು. ಹಿರಿಯರು ಮಕ್ಕಳು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ರು. ಅವರನ್ನೆಲ್ಲಾ ಅಲ್ಲಿ ಕಾಪಾಡಲಾಯ್ತು. ಬದುಕಿದೆಯಾ ಬಡ ಜೀವ ಅಂತ ಅದೆಷ್ಟು ಮಂದಿ ಅಪಾಯದಿಂದ ಪಾರಾಗಿ ಬಂದ್ರೋ..

ಪ್ರವಾಹದೂರಲ್ಲಿ ಕೆಸರಿನದ್ದೇ ದರ್ಬಾರ್
ಚೀನಾದ ಕೆಲ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆರೆ ತಗ್ಗಿದ್ದು ಇದೀಗ ಅಲ್ಲಿ ಕೆಸರಿನದ್ದೇ ದರ್ಬಾರ್. ಅದನ್ನು ಎತ್ತಿ ಜೆಸಿಬಿಗೆ ಹಾಕೋದೇ ಒಂದು ಸಾಹಸ ಆಗಿಬಿಟ್ಟಿದೆ. ಕೆಸರು ಮಾತ್ರವಲ್ಲ ಅಳಿದುಳಿದ ಅವಶೇಷಗಳನ್ನೆಲ್ಲಾ ಈಗ ಅಲ್ಲಿಂದ ತೆಗೆಯಬೇಕಿದೆ. ಅಲ್ಲಿನ ರಕ್ಷಣಾ ತಂಡಗಳಿಗೆ ಹಾಗೂ ಸ್ವಚ್ಚತಾ ಸಿಬ್ಬಂದಿಗೆ ಇದೀಗ ನೆರೆ ಪ್ರದೇಶವನ್ನು ಕ್ಲೀನ್ ಮಾಡೋದೇ ದೊಡ್ಡ ಸಾಹಸವಾಗಿದೆ.

Share This Article