ಇನ್ಮುಂದೆ ಬಿಜೆಪಿಗೆ ವೋಟ್ ಹಾಕ್ತಾ ಇರಿ, ಪ್ರತಿ ವರ್ಷ ಸೈಟ್ ಕೊಡ್ತೀವಿ – ವಿ.ಸೋಮಣ್ಣ

Public TV
2 Min Read

ಚಾಮರಾಜನಗರ: ಇನ್ಮುಂದೆ ಬಿಜೆಪಿಗೆ (BJP) ವೋಟ್ ಹಾಕ್ತಾ ಇರಿ, ವರ್ಷಾವರ್ಷ ಸೈಟ್ ಕೊಡ್ತೀವಿ ಎಂದು ಸಚಿವ ವಿ.ಸೋಮಣ್ಣ (V Somanna) ಭರವಸೆ ನೀಡಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮುಖ್ಯಮಂತ್ರಿ ನಗರ ನಿವೇಶನ ಯೋಜನೆಯಡಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಂಡ್ಲುಪೇಟೆಯಲ್ಲಿ ಕಳೆದ 30 ವರ್ಷಗಳಿಂದ ಯಾರಿಗೂ ನಿವೇಶನ ಹಂಚಿಕೆ ಮಾಡಿಲ್ಲ. ಇನ್ಮುಂದೆ ಬಿಜೆಪಿಗೆ ವೋಟ್ (Vote) ಹಾಕ್ತಾ ಇರಿ, ವರ್ಷಾವರ್ಷ ಸೈಟ್ ಹಂಚಿಕೆ ಮಾಡ್ತೀವಿ ಎಂದು ಆಶ್ವಾಸನೆ ನೀಡಿದ್ದಾರೆ. ಇದನ್ನೂ ಓದಿ: WPL 2023: `ಕಮಲ’ ಮುಂಬೈ ಇಂಡಿಯನ್ಸ್ ಜೆರ್ಸಿ ಅನಾವರಣ 

ಈ ಹಿಂದೆ ಬೆಂಗಳೂರಿನಲ್ಲಿ (Bengaluru) 1 ಲಕ್ಷ ಮನೆ ನಿರ್ಮಿಸಲು ಪ್ರಧಾನಿ ಮೋದಿ (Narendra Modi) 600 ಕೋಟಿ ಕೊಟ್ಟಿದ್ದರು. ಆದರೆ ಅಂದಿನ ಸರ್ಕಾರ ಅದಕ್ಕೆ ಬೇಕಾದ ಜಾಗವನ್ನು ಹುಡುಕಲೇ ಇಲ್ಲ. ನಾನು ಸಚಿವನಾದ ಮೇಲೆ ಜಾಗ ಹುಡುಕಿ ಬೆಂಗಳೂರಿನಲ್ಲಿ 52 ಸಾವಿರ ಮನೆಗಳನ್ನ ನಿರ್ಮಾಣ ಮಾಡಲಾಗಿದೆ. ಈ ಪೈಕಿ ಈಗಾಗಲೇ 5 ಸಾವಿರ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಮಾರಣ್ಣನ ಸರ್ಕಾರ ಹೋದ್ಮೇಲೆ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ – ಹೆಚ್.ಡಿ.ರೇವಣ್ಣ ಬೇಸರ

ಇದೇ ವೇಳೆ ಯಡಿಯೂರಪ್ಪ (BS Yediyurappa) ವಿಧಾನಸಭೆಗೆ ವಿದಾಯ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲರೂ ಒಂದು ದಿನ ವಿದಾಯ ಹೇಳಲೇಬೇಕಲ್ವಾ? ಒಂದು ಏಜ್ ಆದ ಮೇಲೆ ಹೋಗಲೇಬೇಕಲ್ವಾ? ದೇಶದಲ್ಲಿ ಬಹುತೇಕ ಮಂದಿ ಈ ರೀತಿ ಬಂದು ಹೋಗಿದ್ದಾರೆ. ನಾವೂ ಮುಂದೊಂದು ದಿನ ವಿದಾಯ ಹೇಳಲೇಬೇಕು. ಯಡಿಯೂರಪ್ಪ ತಮ್ಮ ವಯಸ್ಸಿನ ಇತಿಮಿತಿ ಅರ್ಥಮಾಡಿಕೊಂಡು ತೀರ್ಮಾನ ಮಾಡಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದು ಒಳ್ಳೆಯದು ಅನಿಸಿರಬೇಕು. ಹಾಗಾಗಿ ವಿದಾಯ ಹೇಳಿದ್ದಾರೆ ಎಂದು ಸೋಮಣ್ಣ ತಿಳಿಸಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *