ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಹಂಚಿದವರಿಗೆ ಈಗ ನಡುಕ ಶುರುವಾಗಿದೆ. ಹೌದು, ಅಶ್ಲೀಲ ವಿಡಿಯೋ ಹಂಚಿದವರ ವಿರುದ್ಧ ಎಸ್‌ಐಟಿ (SIT) ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ. ಇದರಿಂದ ಆರೋಪಿಗಳಿಗೆ ಭಯ ಶುರುವಾಗಿದೆ.
ಹಾಸನದಲ್ಲಿ (Hassan) ಪೆನ್‌ಡ್ರೈವ್ ಹಂಚಿ ಹಬ್ಬ ಮಾಡಿದ್ದ ಆರೋಪಿಗಳ ವಿರುದ್ಧ ಎಸ್ಐಟಿಯಿಂದ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆದಿದೆ. ಮುಂದಿನ ವಾರದ ಒಳಗಾಗಿ ಎಲ್ಲಾ ಆರೋಪಿಗಳ ವಿರುದ್ಧ ಚಾರ್ಜ್‍ಶೀಟ್ ಕೋರ್ಟ್‌ಗೆ ಸಲ್ಲಿಕೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದರ ನಡುವೆ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ 6 ಕೇಸ್‌ಗಳ ತನಿಖೆಯನ್ನು ಎಸ್‍ಐಟಿ ಅಧಿಕಾರಿಗಳು ಮುಗಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ, ಜನಸೇವೆಗೆ ಬಂದಿದ್ದಾರೆ: ಅಪರಾಧಿ ಪರ ವಕೀಲರ ವಾದ ಏನು?
ಹೊಳೆನರಸಿಪುರ ಕೇಸ್‍ನಲ್ಲಿ ಪ್ರಜ್ವಲ್‍ಗೆ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ವಿಧಿಸಿ ಆದೇಶ ಮಾಡಿದೆ. ಇನ್ನೂ ಸಿಐಡಿ ಸೈಬರ್ ಕ್ರೈಂನಲ್ಲಿ ದಾಖಲಾಗಿರುವ ಪ್ರಕರಣ ತೀರ್ಪಿನ ಹಂತದಲ್ಲಿದೆ. ಸಿಐಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಟ್ರಯಲ್ ಹಂತದಲ್ಲಿದೆ. ಮುಂದಿನ ವಾರ ಹಾಸನ ಜಿಲ್ಲೆಯಾದ್ಯಂತ ಪ್ರಜ್ವಲ್ ಬೇರೆ ಬೇರೆ ಮಹಿಳೆಯರ ಜೊತೆ ಇರುವ ಅಶ್ಲೀಲ ವಿಡಿಯೋ ಹಂಚಿದವರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲು ಎಸ್‍ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
ಚಾರ್ಚ್‍ಶೀಟ್‍ನಲ್ಲಿ ಒಂದಷ್ಟು ಪ್ರಮುಖರ ಹೆಸರಗಳು ಇವೇ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಶಿಕ್ಷೆ ಬಗ್ಗೆ ನಮಗಿಂತ ಜೆಡಿಎಸ್ – ಬಿಜೆಪಿ ನಾಯಕರ ಪ್ರತಿಕ್ರಿಯೆ ಬಹುಮುಖ್ಯ: ಡಿಕೆಶಿ