ಬೆಂಗಳೂರು: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ (Dharmasthala Mass Burials) ಸಂಬಂಧ ಸರ್ಕಾರ ಎಸ್‌ಐಟಿ ಮಧ್ಯಂತರ ವರದಿ ಬಿಡುಗಡೆ ಮಾಡ್ಬೇಕು. ಇಲ್ಲದಿದ್ರೆ ಸದನದಲ್ಲಿ ಹೋರಾಟ ಮಾಡ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಎಚ್ಚರಿಕೆ ನೀಡಿದ್ದಾರೆ.
ಎಸ್‌ಐಟಿಯು (SIT) ಉತ್ಖನನ ಕಾರ್ಯವನ್ನು ಅಂತ್ಯಗೊಳಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿದಿನ ಒಂದು ಲಕ್ಷ ಕೇಸ್ ಬರುತ್ತವೆ. ಸದನದಲ್ಲಿ ನಾವು ಗಲಾಟೆ ಮಾಡಿದ್ರು ನೀವುಗಳು ಎಸ್‌ಐಟಿ ರಚನೆ ಮಾಡಲ್ಲ. ಆದರೆ ಈ ವಿಚಾರವಾಗಿ ಅಷ್ಟು ಬೇಗ ಎಸ್‌ಐಟಿ ರಚನೆ ಮಾಡಿದ್ರಿ. ಕಾರಣ, ಸಿದ್ದರಾಮಯ್ಯ (Siddaramaiah) ಸುತ್ತ ಒಂದು ರೀತಿ ಟಿಪ್ಪು ಗ್ಯಾಂಗ್ ಸುತ್ತುವರೆದಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಸಿಎಂ ರಾಜೀನಾಮೆ ಕೊಡಬೇಕು: ಛಲವಾದಿ ನಾರಾಯಣಸ್ವಾಮಿ
ಪ್ರಕರಣ ಸಂಬಂಧ ಡಿಕೆಶಿ ಅವರು ಷಡ್ಯಂತ್ರ ಅಂತಾ ಹೇಳಿದ್ದಾರೆ. ಡಿಕೆಶಿ ಹೇಳಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ನಾನು ಸದನದಲ್ಲಿ ಡಿಮ್ಯಾಂಡ್ ಮಾಡ್ತೇನೆ. ಎಸ್‌ಐಟಿಯ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಆ ಷಡ್ಯಂತ್ರ ಮಾಡಿದ್ದು ಯಾರು ಅಂತ ಹೇಳಬೇಕು. ಇಲ್ಲ ಅಂದರೆ ನಾವು ಸದನದಲ್ಲಿ ಗಲಾಟೆ ಮಾಡುತ್ತೇವೆ. ಆ ಅನಾಮಿಕ ಹುಚ್ಚನಾ ಅಂತಾ ನೋಡಬೇಕಿತ್ತು. ಸುಮ್ಮನೇ ಎಸ್‌ಐಟಿ ತನಿಖೆ ಮಾಡೋದಲ್ಲ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಗುಂಡಿ ತೋಡಿದ್ದ ಕಾರ್ಮಿಕರ ಸಹಿ ಪಡೆದು ಕಳುಹಿಸಿದ ಎಸ್‌ಐಟಿ
ಇಂದು ವಿಶ್ವನಾಥ್ ಧರ್ಮಸ್ಥಳಕ್ಕೆ (Dharmasthala) ಹೋಗಿದ್ದಾರೆ. ನಾಳೆ ವಿಜಯೇಂದ್ರ ಅವರು ಹೋಗ್ತಿದ್ದಾರೆ. ನಾನು ಕೂಡ ಅಧಿವೇಶನ ಆದ ನಂತರ ಉಳಿದ ಶಾಸಕರನ್ನ ಕರೆದುಕೊಂಡು ಹೋಗ್ತೇನೆ. ಪಾಪಿಗಳು ದೇವರ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅವರಿಗೆ ಸೂಕ್ತ ಶಿಕ್ಷೆ ಆಗೋವರೆಗೂ ನಾವು ಬಿಡಲ್ಲ. ಯಾವುದೇ ಕಾರಣಕ್ಕೂ ಎಸ್‌ಐಟಿ ಕ್ಲೋಸ್ ಮಾಡಬಾರದು. ಇದರ ಹಿಂದೆ ಯಾರಿದ್ದಾರೆ ಅನ್ನೋ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ತಿರುಪತಿ ಆಯ್ತು, ಅಯ್ಯಪ್ಪ ದೇವಸ್ಥಾನ ಆಯ್ತು, ಶನಿದೇವರನ್ನ ಕೂಡ ಮುಚ್ಚಲು ಹೋಗಿದ್ದರು. ಹಿಂದೂ ದೇವಾಲಯಗಳನ್ನ ಟಾರ್ಗೆಟ್ ಮಾಡ್ತಿದ್ದಾರೆ. ಮುಸುಕುಧಾರಿ ವ್ಯಕ್ತಿ ನಮ್ಮಗೆ ಮುಖ್ಯ ಅಲ್ಲ. ಆತನನ್ನು ಕಾಸು ಕೊಟ್ಟು ಕರೆದುಕೊಂಡು ಬಂದವರು ಯಾರೆಂದು ಗೊತ್ತಾಗಬೇಕು ಎಂದು ಹೇಳಿದ್ದಾರೆ.