ಇನ್ಮುಂದೆ VIP ಸಂಚಾರದ ವೇಳೆ ಸೈರನ್ ಬಳಕೆ ನಿಷೇಧ

Public TV
1 Min Read

ಬೆಂಗಳೂರು: ವಿಐಪಿಗಳ ಸಂಚಾರದ ವೇಳೆ ವಾಹನಗಳು ಸೈರನ್ (Siren) ಬಳಕೆ ನಿಷೇಧಿಸಿ ಡಿಜಿ ಅಂಡ್ ಐಜಿಪಿ ಸಲೀಂ (Dr MA Saleem) ಸುತ್ತೋಲೆ ಹೊರಡಿಸಿದ್ದಾರೆ.

ಎಲ್ಲಾ ಘಟಕಾಧಿಕಾರಿಗಳಿಗೆ ಆದೇಶ ನೀಡಿರುವ ಅವರು, ವಿಐಪಿ ವಾಹನಗಳ ಸೈರನ್ ಬಳಕೆಯಿಂದ ಗಣ್ಯ ವ್ಯಕ್ತಿಗಳ ಓಡಾಟದ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಶಬ್ಧ ಮಾಲಿನ್ಯ ಹಾಗೂ ಇತರ ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ. ಹೀಗಾಗಿ ಸೈರನ್ ಬಳಕೆಗೆ ಕಡಿವಾಣ ಹಾಕಿ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: `ಆಪರೇಷನ್ ಸಿಂಧೂರ’ ಬಗ್ಗೆ ಸದನದಲ್ಲಿ ಮುಂದಿನ ವಾರ ಚರ್ಚೆ – ಲೋಕಸಭೆಯಲ್ಲಿ 16 ಗಂಟೆ, ರಾಜ್ಯಸಭೆಯಲ್ಲಿ 9 ಗಂಟೆ ನಿಗದಿ

ಅಲ್ಲದೇ ವಿಐಪಿ ಸಂಚಾರದ ವೇಳೆ ವೈರ್‌ಲೆಸ್ ಕಮ್ಯುನಿಕೇಷನ್ ಪರಿಣಾಮಕಾರಿಯಾಗಿ ಬಳಸುವಂತೆ ಸೂಚಿಸಿದ್ದು, ಅಂಬುಲೆನ್ಸ್, ಪೊಲೀಸ್ ವಾಹನಗಳು, ಅಗ್ನಿಶಾಮಕ ವಾಹನಗಳು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಬಳಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ʻದೃಶ್ಯಂʼ ಸಿನಿಮಾ ಸ್ಟೈಲ್‌ನಲ್ಲಿ ಕೊಲೆ – ಪ್ರಿಯಕರನ ಜೊತೆಗೂಡಿ ಗಂಡನನ್ನ ಕೊಂದು ಟೈಲ್ಸ್‌ ಕೆಳಗೆ ಹೂತಿದ್ದ ಪತ್ನಿ

Share This Article