ತಮಿಳುನಾಡಿನಲ್ಲಿ ಶೀಘ್ರವೇ SIR- ಮದ್ರಾಸ್ ಹೈಕೋರ್ಟ್‌ಗೆ ಚುನಾವಣಾ ಆಯೋಗ ಮಾಹಿತಿ

Public TV
1 Min Read

ಚೆನ್ನೈ: ಮುಂಬರುವ ವಿಧಾನಸಭಾ ಚುನಾವಣೆ ಸಿದ್ಧತೆಯಾಗಿ ತಮಿಳುನಾಡಿನಲ್ಲಿ (Tamil Nadu) ಶೀಘ್ರದಲ್ಲೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಲಾಗುವುದು ಎಂದು ಚುನಾವಣಾ ಆಯೋಗ (Election Commission of India) ಮದ್ರಾಸ್ ಹೈಕೋರ್ಟ್‌ಗೆ (Madras High Court) ತಿಳಿಸಿದೆ. ಪರಿಷ್ಕರಣೆ ಪ್ರಕ್ರಿಯೆಯು ಮುಂದಿನ ವಾರ ಪ್ರಾರಂಭವಾಗುವ ಸಾಧ್ಯತೆ ಇದೆ.

ಇದಲ್ಲದೆ, ಚುನಾವಣೆ ಎದುರಿಸುತ್ತಿರುವ ಇತರ ಹಲವಾರು ರಾಜ್ಯಗಳು ಸಹ ಬಿಹಾರದ ಮಾದರಿಯಲ್ಲಿ ಇದೇ ರೀತಿಯ ವ್ಯಾಯಾಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಚುನಾವಣಾ ಆಯೋಗ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ.ಅರುಳ್ ಮುರುಗನ್ ಅವರ ಪೀಠದ ಮುಂದೆ ತಿಳಿಸಿದೆ. ಇದನ್ನೂ ಓದಿ: ಸಿಎಂ ಅವ್ರೇ ನಿಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಪ್ರತಿ ಇಲಾಖೆಯೂ ರೇಡ್‌ ಕಾರ್ಡ್‌ ಫಿಕ್ಸ್‌ ಮಾಡಿದೆ: ಮೋಹನ್ ದಾಸ್ ಪೈ

ಎಐಎಡಿಎಂಕೆ ಮಾಜಿ ಶಾಸಕ ಬಿ. ಸತ್ಯನಾರಾಯಣನ್ ಅವರು ಟಿ.ನಗರ ವಿಧಾನಸಭಾ ಕ್ಷೇತ್ರದ 229 ಮತಗಟ್ಟೆಗಳಲ್ಲಿ ಸಂಪೂರ್ಣ ಮತ್ತು ಪಾರದರ್ಶಕ ಮರು ಪರಿಶೀಲನೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದರು. ಚೆನ್ನೈನ ಟಿ ನಗರ ಕ್ಷೇತ್ರದ ಅಧಿಕಾರಿಗಳು ಆಡಳಿತಾರೂಢ ಡಿಎಂಕೆಗೆ ಲಾಭ ಮಾಡಿಕೊಡಲು ಉದ್ದೇಶಪೂರ್ವಕವಾಗಿ ಸುಮಾರು 13,000 ಎಐಎಡಿಎಂಕೆ ಬೆಂಬಲಿಗರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದಾರೆ ಎಂದು ಆರೋಪಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಆಯೋಗ ಹೈಕೋರ್ಟ್‌ಗೆ ಈ ಮಾಹಿತಿ ನೀಡಿದೆ. ಇದನ್ನೂ ಓದಿ: FATF ಹೊಸ ಪಟ್ಟಿ ಬಿಡುಗಡೆ – ಉತ್ತರ ಕೊರಿಯಾ, ಇರಾನ್, ಮ್ಯಾನ್ಮಾರ್ ಮತ್ತೆ ಕಪ್ಪುಪಟ್ಟಿಗೆ

Share This Article