ವಿಶ್ವ ಸುಂದರಿ ಸ್ಪರ್ಧೆಯು (Miss World 2024) ಇಂದು (ಮಾ.9) ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದೆ. ಭಾರತದಲ್ಲಿ 28 ವರ್ಷಗಳ ಬಳಿಕ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಕ್ರಿಸ್ಟಿನಾ ಪಿಸ್ಕೋವಾ (Krystyna Pyszkova) ಗೆದ್ದು ಬೀಗಿದ್ದಾರೆ. ಆದರೆ ಕರ್ನಾಟಕ ಮೂಲದ ಹುಡುಗಿ ಸಿನಿ ಶೆಟ್ಟಿ (Sini Shetty) ವಿಶ್ವ ಸುಂದರಿ ಕಿರೀಟ ಜಸ್ಟ್ ಮಿಸ್ ಆಗಿದೆ.
ಭಾರತದಲ್ಲಿ 28 ವರ್ಷಗಳ ಬಳಿಕ ನಡೆಯುತ್ತಿರುವ ಮಿಸ್ ವರ್ಲ್ಡ್ ಸ್ಪರ್ಧೆ ಇದಾಗಿದ್ದು, 112 ಸ್ಪರ್ಧಿಗಳು ಭಾಗಿಯಾಗಿದ್ದರು. ಇದೀಗ ಮುಂಬೈ ನೆಲೆಸಿರುವ ಮೂಲತಃ ಕರ್ನಾಟಕದವರೇ ಸಿನಿ ಸದಾನಂದ ಶೆಟ್ಟಿ ಅವರು ಕೂಡ ಭಾಗಿಯಾಗಿದ್ದಾರೆ.
2017ರಲ್ಲಿ ಹರಿಯಾಣದ ಬೆಡಗಿ ಮಾನುಷಿ ಚಿಲ್ಲರ್ ಮಿಸ್ ವರ್ಲ್ಡ್ ಕಿರೀಟ ಗೆದ್ದಿದ್ದರು. ಈ ಬಾರಿ ಸಿನಿ ಶೆಟ್ಟಿ ಸ್ಪರ್ಧಿಸಿದ್ದರು. ಟಾಪ್ 4ಗೆ ಬರಲು ಸಿನಿ ವಿಫಲರಾಗಿದ್ದಾರೆ. ಈ ಹಿಂದೆ ಫೆಮಿನಾ ಮಿಸ್ ಇಂಡಿಯಾ ಕರ್ನಾಟಕ 2022 ಪ್ರಶಸ್ತಿ ಗೆದ್ದಿದ್ದರು.
ವಿಶ್ವ ಸುಂದರಿ ಕಿರೀಟ ಧರಿಸಿದ್ದ ಭಾರತೀಯ ನಾರಿಯರು
ರೀಟಾ ಫರಿಯಾ (1966), ಐಶ್ವರ್ಯ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ ಜೋನಾಸ್ (2000), ಮತ್ತು ಮಾನುಷಿ ಚಿಲ್ಲರ್ (2017).