ನಾಯಕಿಗಾಗಿ ‘ಯಾವ ಸೀಮೆ ಅಂದದರಸಿ’ ಎಂದ ಗಾಯಕ ವಿಜಯ್ ಪ್ರಕಾಶ್

Public TV
1 Min Read

ರಾಜೀವ್‌ಚಂದ್ರಕಾಂತ್ ಈ ಹಿಂದೆ ನಾಗಾಭರಣ ಅವರಲ್ಲಿ ಕೆಲಸ ಕಲಿತುಕೊಂಡು, ನಂತರ 75ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿದ ಅನುಭವ ಇದೆ. ಇದರಿಂದಲೇ ಸಿನಿಮಾಕ್ಕೆ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಲ್ಲರೂ ನಾಯಕನಿಗೆ ಕಥೆ ಬರೆದರೆ, ಇವರು ಖಳನಾಯಕನ ಮೇಲೆ ಕಥೆಯನ್ನು ಬರೆದಿರುವುದು ವಿಶೇಷ. ’ಸಲಗ’ದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್‌ಕುಮಾರ್.ಡಿ ಖತರ್‌ನಾಕ್ ಖಳನಾಯಕನಾಗಿ ಹುಲಿಯಾ ಹೆಸರಿನಲ್ಲಿ ಕಾಣಿಸಿಕೊಳ್ಳುವ ಜತೆಗೆ ಡಿಜೆ ಪ್ರಕಾಶ್ ಸಿನಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ನಾಯಕಿ ಕುರಿತಂತೆ ಹೇಳುವ ’ಯಾವ ಸೀಮೆ ಅಂದದರಸಿ ಕಂಡರೆಲ್ಲೊ ಇವಳೆ, ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ’ ಸಾಲಿನ ಗೀತೆಗೆ ವಿಜಯಪ್ರಕಾಶ್ ಹಾಡುವ ಗೀತೆಯನ್ನು ನಾದಬ್ರಹ್ಮ ಹಂಸಲೇಖ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಕಾರ್ಯ ನಡೆಸಲಾಯಿತು.  ಸಂಗೀತ ಕೆ.ಎಂ.ಇಂದ್ರ ಅವರದಾಗಿದೆ. ಇದನ್ನೂ ಓದಿ:ಅಫೇರ್ ಆರೋಪ ನಂತರ `ಅಣ್ಣ-ತಂಗಿ’ ಆಗಿಬಿಟ್ರಾ ನರೇಶ್-ಪವಿತ್ರಾ!

ರಾಮಾಪುರ ಎಂಬ ಊರು, ಮಜ್ಜೇನಹಳ್ಳಿ ಎನ್ನುವ ಪಟ್ಟಣದಲ್ಲಿ 1990ರಂದು ನಡೆಯುವ ಕಾಲ್ಪನಿಕ ಘಟನೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಎಂಟು ಗಡ್ಡಧಾರಿಗಳ ಸುತ್ತ ಸಾಗುವ ಪಯಣದಲ್ಲಿ ಏರುಪೇರು ಉಂಟಾಗುತ್ತದೆ. ಅದು ಏನೆಂಬುದನ್ನು ಕುತೂಹಲದ ಮೂಲಕ ತೋರಿಸಲಾಗುವುದು. ತಾರಗಣದಲ್ಲಿ ಪ್ರವೀಣ್, ನಮ್ರತಾ, ಗಣೇಶ್‌ರಾವ್, ಅವಿನಾಶ್, ರಮೇಶ್‌ಭಟ್, ಬೆನಕನಂಜಪ್ಪ, ಪ್ರಶಾಂತ್‌ಸಿದ್ದಿ, ನಂಜುಂಡ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ವೀರೇಶ್, ಸಾಹಸ ಪಳನಿ-ಜಾಗ್ವಾರ್‌ ಸಣ್ಣಪ್ಪ ಅವರದಾಗಿದೆ. ಕೆ.ಜಿ.ಎಫ್, ಕೋಲಾರ ಕಡೆಗಳಲ್ಲಿ 45 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *