ದಿ ರೆಕಾರ್ಡಿಂಗ್ ಅಕಾಡೆಮಿ ಪ್ರಶಸ್ತಿ ಮತದಾನ ಸದಸ್ಯರಾಗಿ ಗಾಯಕ ಶ್ರೀರಾಮ್ ಅಯ್ಯರ್ ಆಯ್ಕೆ

Public TV
1 Min Read

ಪ್ರತಿಷ್ಠಿತ ರೆಕಾರ್ಡಿಂಗ್ ಅಕಾಡೆಮಿ (ಗ್ರ್ಯಾಮಿ ಪ್ರಶಸ್ತಿ) (The Recording Academy ) ಅವರು ಪ್ರತಿವರ್ಷದಂತೆ ಈ ವರ್ಷವೂ ಆಯ್ದ ಸಂಗೀತಗಾರರನ್ನು ದಿ ರೆಕಾರ್ಡಿಂಗ್ ಅಕಾಡೆಮಿಗೆ ಮತದಾನದ ಸದಸ್ಯರಾಗಲು ಆಹ್ವಾನಿಸಿದ್ದರು. ಈ ಬಾರಿ  ಆಸ್ಟ್ರೇಲಿಯಾದ ಮೆಲ್ಬೊರ್ನ್‌ ನಿವಾಸಿ, ಭಾರತೀಯ ಗಾಯಕ ಶ್ರೀರಾಮ್ ಅಯ್ಯರ್ (Sriram Iyer)ಮತದಾನದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕಳೆದ 23ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶ್ರೀರಾಮ್ ಅಯ್ಯರ್, ರೆಕಾರ್ಡಿಂಗ್ ಅಕಾಡೆಮಿಗೆ ಮತದಾನದ ಸದಸ್ಯನಾಗಿ ಆಯ್ಕೆಯಾಗಿರುವುದಕ್ಕೆ ಸಂತಸಪಟ್ಟಿದ್ದಾರೆ. 2007 ರಲ್ಲಿ ಕಿವಿ – ಇಂಡಿಯನ್ ಸಂಸ್ಥೆ ಮೂಲಕ ನನ್ನ ಮೊದಲ ಆಲ್ಬಂ ಭಾರತದಲ್ಲಿ ಬಿಡುಗಡೆಯಾಯಿತು. ಖ್ಯಾತ ಗಾಯಕರಾದ ಶಂಕರ್ ಮಹಾದೇವನ್, ಸಾಧಾನ ಸರಗಮ್, ಉದಿತ್ ನಾರಾಯಣ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

 

ಅಲ್ಲಿಂದ ನನ್ನ ಸಂಗೀತದ ಜರ್ನಿ ಆರಂಭವಾಯಿತು. ಈವರೆಗೂ ಆಸ್ಟ್ರೇಲಿಯಾ, ಭಾರತ ಮುಂತಾದ ಕಡೆ ಸುಮಾರು 500ಕ್ಕೂ ಹೆಚ್ಚು ಲೈವ್ ಶೋಗಳನ್ನು ನೀಡಿದ್ದೇನೆ. ಗೀತರಚನೆಕಾರನಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಸಂಗೀತ ಕ್ಷೇತ್ರದಲ್ಲೇ ಇನ್ನೂ ಹೆಚ್ಚಿನ ಸಾಧನೆ ಮಾಡುವ ಉದ್ದೇಶ ಹೊಂದಿರುವುದಾಗಿ ಶ್ರೀರಾಮ್ ಅಯ್ಯರ್ ತಿಳಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್